LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗಿಲ್ಲ ರಕ್ಷಣೆ: ರಾಜ್ಯದಲ್ಲಿ ಪ್ರತಿದಿನ 67 ಜನ ನಾಪತ್ತೆ; ಇದೇನಾ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಮಾದರಿ? ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದಲ್ಲಿ ಪ್ರತಿದಿನ 67 ಜನ ನಾಪತ್ತೆಯಾಗುತ್ತಿದ್ದಾರೆ. ಇದೇನಾ ಕರ್ನಾಟಕ ಸರ್ಕಾರದ “ಗ್ಯಾರೆಂಟಿ” ಮಾದರಿ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ! ರಾಜ್ಯದಲ್ಲಿ ದಿನಕ್ಕೆ ಸರಾಸರಿ 67 ಜನರು ನಾಪತ್ತೆಯಾಗುತ್ತಿದ್ದಾರೆ. ಮಕ್ಕಳಿಗಿಲ್ಲ ರಕ್ಷಣೆ… ಹೆಣ್ಣುಮಕ್ಕಳಿಗಿಲ್ಲ ಭದ್ರತೆ… ಕರ್ನಾಟಕವನ್ನು ಅಪರಾಧಿಗಳ ಸ್ವರ್ಗವನ್ನಾಗಿ ಮಾಡಿದೆ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳು ರಾಜ್ಯದ ಭಯಾನಕ ವಾಸ್ತವವನ್ನು ಬಯಲಿಗೆಳೆದಿವೆ. ಇದು ಕೇವಲ ಅಂಕಿ-ಅಂಶಗಳ ವರದಿ ಅಲ್ಲ — ಸಾವಿರಾರು ಕುಟುಂಬಗಳ ಕಣ್ಣೀರು ಮತ್ತು ಆತಂಕದ ಕಥೆ.

  • 2022ರಲ್ಲಿ 1,110 ಇದ್ದ ಮಕ್ಕಳ ನಾಪತ್ತೆ ಪ್ರಕರಣಗಳು, 2024ರಲ್ಲಿ 1,879ಕ್ಕೆ ಏರಿಕೆ! ಅಂದರೆ ಸುಮಾರು 70% ಏರಿಕೆ.
  • 2024ರಲ್ಲಿ ದಾಖಲೆ ಮಟ್ಟದ 15,420 ಮಹಿಳೆಯರು ನಾಪತ್ತೆ! ಹೆಣ್ಣುಮಕ್ಕಳ ಸುರಕ್ಷತೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
  • ಕಳೆದ ವರ್ಷವೊಂದರಲ್ಲೇ 551 ಮಕ್ಕಳನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆ ತಂದೆ-ತಾಯಿಗಳ ನೋವಿಗೆ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಅವರ ಬಳಿ ಉತ್ತರ ಇದೆಯೇ?

ಗ್ಯಾರೆಂಟಿಗಳ ಪ್ರಚಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುವ ಸರ್ಕಾರಕ್ಕೆ, ಜನರ ಜೀವ ಮತ್ತು ಮಹಿಳೆಯರ ಸುರಕ್ಷತೆ ಮಾತ್ರ ಆದ್ಯತೆಯೇ ಆಗಿಲ್ಲ ಎಂದು ಕಿಡಿಕಾರಿದ್ದಾರೆ.

ಪೊಲೀಸ್ ಇಲಾಖೆಯನ್ನು ರಾಜಕೀಯ ದ್ವೇಷಕ್ಕೆ ಬಳಸುವುದನ್ನು ಬಿಟ್ಟು, ಅಪರಾಧ ನಿಯಂತ್ರಣಕ್ಕೆ ಬಳಸಿದ್ದರೆ ಇಂದು ಕರ್ನಾಟಕ ಈ ದುಸ್ಥಿತಿಗೆ ಬರುತ್ತಿರಲಿಲ್ಲ. ನಾಪತ್ತೆಯಾಗುತ್ತಿರುವ ಮಕ್ಕಳ ಹೊಣೆ ಯಾರು? ಹೆಣ್ಣುಮಕ್ಕಳ ಭದ್ರತೆ ಎಲ್ಲಿದೆ?ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಎಲ್ಲಿದೆ ? ಎಂದು ಪ್ರಶ್ನಿಸಿದ್ದಾರೆ.

ಜನರ ಭದ್ರತೆಯನ್ನು ಕಾಪಾಡಲು ಸಂಪೂರ್ಣ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ; ಆಶಾ ಕಾರ್ಯಕರ್ತೆಯರಿಗಿಲ್ಲ ಗ್ಯಾರೆಂಟಿ!

ಕರ್ನಾಟಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ,ಆಶಾ ಕಾರ್ಯಕರ್ತೆಯರಿಗೆ ಗ್ಯಾರಂಟಿ ಯೋಜನೆಗಳು ತಲುಪಿಲ್ಲ. ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಪಕ್ಷದ ಅತೃಪ್ತ ಆತ್ಮಗಳಿಗೆ ಗಂಜಿ ಕೇಂದ್ರ ತೆರೆದು ಕೋಟಿ ಕೋಟಿ ಹಣ ಹಂಚುವ ಸಿದ್ದರಾಮಯ್ಯ ಸರ್ಕಾರಕ್ಕೆ, ಮನೆ ಮನೆಗೆ ತೆರಳಿ ಜನಸೇವೆ ಮಾಡುವ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಹಣವಿಲ್ಲ ಎನ್ನುವುದು ವಿಪರ್ಯಾಸ ಎಂದು ಟಿಕಿಸಿದ್ದಾರೆ.

ಚುನಾವಣೆಗೆ ಮೊದಲು ಭರವಸೆಗಳ ಸುರಿಮಳೆ, ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಕಾರ್ಯಕರ್ತೆಯರ ಶ್ರಮಕ್ಕೆ ಅವಮಾನ — ಇದೇ ಕಾಂಗ್ರೆಸ್ ಸರ್ಕಾರದ ನಿಜ ಮುಖ. ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರನ್ನು ನಿರ್ಲಕ್ಷಿಸಿರುವುದು ಕ್ಷಮಿಸಲಾಗದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಭಕ್ತರ ನಂಬಿಕೆಗೆ ದ್ರೋಹ: ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: 7 ಸಾವಿರ ಪೊಲೀಸ್, ಕೃಷಿ ಇಲಾಖೆಯ 945 ಹುದ್ದೆ ಸೇರಿ 12 ಸಾವಿರ ಹುದ್ದೆಗಳಿಗೆ ನೇಮಕಾತಿSHOCKING : ಚಪ್ಪಟೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ; ಆಪರೇಷನ್‌’ಗೂ ಮುನ್ನವೇ ದಾವಣಗೆರೆಯಲ್ಲಿ ಯುವಕ ಸಾವು.!ಸಾಮಾನ್ಯ ಸೋಲಲ್ಲ ಸರಣಿ ಸೋಲು: ಒಂದಲ್ಲ ಎರಡಲ್ಲ ಸತತ 3 ವರ್ಷ, 16 ಸರಣಿ ಸೋಲಿಲ್ಲದೇ ಮೆರೆಯುತ್ತಿದ್ದ ವಿಶ್ವ ಚಾಂಪಿಯನ್ಸ್ ಭಾರತಕ್ಕೆ ಲೆಕ್ಕಕ್ಕೇ ಇಲ್ಲದ ಐರ್ಲೆಂಡ್‌ನಿಂದ ಹೀನಾಯ ಅವಮಾನ!ನಿಂತಿದ್ದ ಟ್ರಕ್ ಹಿಂಭಾಗಕ್ಕೆ ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವುBIG NEWS : ಮನೆ, ಫ್ಲಾಟ್ ಹಸ್ತಾಂತರ ತಡವಾದರೆ ಬಿಲ್ಡರ್‌ಗಳು ಪರಿಹಾರ ನೀಡಲೇಕು ; ಸುಪ್ರೀಂಕೋರ್ಟ್ ಮಹತ್ವದ ತೀರ್ಪುPost office Scheme : ಅಂಚೆ ಕಚೇರಿಯ ಈ ಯೋಜನೆಯಡಿ ಪ್ರತಿದಿನ ₹115 ಉಳಿತಾಯ ಮಾಡಿದರೆ 5 ವರ್ಷಗಳಲ್ಲಿ ಎಷ್ಟು ಲಕ್ಷ ಸಿಗುತ್ತದೆ ಗೊತ್ತಾ ?ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಅಡಕೆ ತಡೆಯದಂತೆ ಮಹಾರಾಷ್ಟ್ರ ಸಿಎಂ ಸೂಚನೆತ್ವಚೆಯ ಸೌಂದರ್ಯಕ್ಕೆ ಕಡ್ಲೆಹಿಟ್ಟಿನ ಫೇಸ್ ಪ್ಯಾಕ್: ಮೃದು ಹಾಗೂ ಹೊಳೆಯುವ ಚರ್ಮಕ್ಕಾಗಿ ಇಲ್ಲಿದೆ ಸುಲಭ ಮನೆಮದ್ದುಅನಿರುದ್ಧ್ ರವಿಚಂದರ್ ಕೈಹಿಡಿಯಲಿದ್ದಾರಾ ಕಾವ್ಯಾ ಮಾರನ್? ಮದುವೆ ವದಂತಿಗೆ ಸಿಕ್ಕಿತು ದೊಡ್ಡ ಸುಳಿವು