LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾನ್ಯ ಸೋಲಲ್ಲ ಸರಣಿ ಸೋಲು: ಒಂದಲ್ಲ ಎರಡಲ್ಲ ಸತತ 3 ವರ್ಷ, 16 ಸರಣಿ ಸೋಲಿಲ್ಲದೇ ಮೆರೆಯುತ್ತಿದ್ದ ವಿಶ್ವ ಚಾಂಪಿಯನ್ಸ್ ಭಾರತಕ್ಕೆ ಲೆಕ್ಕಕ್ಕೇ ಇಲ್ಲದ ಐರ್ಲೆಂಡ್‌ನಿಂದ ಹೀನಾಯ ಅವಮಾನ!

ನಿನ್ನೆ ( ಜೂನ್ 28 ) ಬೆಲ್ಟ್‌ಫಾಸ್ಟ್ ಕ್ರೀಡಾಂಗಣದಲ್ಲಿ ನಡೆದ ಐರ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಐರ್ಲೆಂಡ್ 1 ರನ್‌ನ ರೋಚಕ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಗೆದ್ದುಬೀಗಿ ಇತಿಹಾಸ ನಿರ್ಮಿಸಿತು.

ಮೊದಲ ಪಂದ್ಯದಲ್ಲಿ 34 ರನ್‌ಗಳಿಂದ ಭಾರತವನ್ನು ಸೋಲಿಸಿ ಅದೇ ಮೊದಲ ಬಾರಿಗೆ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಗೆದ್ದ ದಾಖಲೆ ಬರೆದಿದ್ದ ಐರ್ಲೆಂಡ್ ನಿನ್ನೆ ಎರಡನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಮೊದಲ ಟಿ ಟ್ವೆಂಟಿ ಸರಣಿ ಜಯ ಸಾಧಿಸಿದ ಐತಿಹಾಸಿಕ ದಾಖಲೆಯನ್ನೂ ಬರೆಯಿತು.

ಇನ್ನು 2024 ಹಾಗೂ 2026 ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಸತತ ಎರಡು ಬಾರಿ ಗೆದ್ದು ಚಾಂಪಿಯನ್ಸ್ ಎನಿಸಿಕೊಂಡಿದ್ದ ಭಾರತಕ್ಕೆ ಈ ಸೋಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಅವಮಾನವನ್ನು ಉಂಟುಮಾಡಿದೆ.

ಈ ಸೋಲು ಹಲವು ಕಾರಣಗಳಿಗೆ ಸಾಮಾನ್ಯ ಸರಣಿ ಸೋಲಾಗದೇ ಉಳಿದುಕೊಂಡಿದ್ದು, ಭಾರತ ತಂಡಕ್ಕೆ ಭಾರೀ ಮುಜುಗರವನ್ನುಂಟುಮಾಡಿದ ಸೋಲಾಗಿದೆ.

* ಭಾರತ ಕಳೆದ 1050 ದಿನಗಳಲ್ಲಿ ಅಂದರೆ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಟಿ ಟ್ವೆಂಟಿ ಸರಣಿಯನ್ನೂ ಸೋತಿರಲಿಲ್ಲ. ಈ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಐರ್ಲೆಂಡ್ ಬ್ರೇಕ್ ಹಾಕಿದೆ.

* ಈ ಅವಧಿಯಲ್ಲಿ ಒಟ್ಟು 16 ಸರಣಿಗಳನ್ನು ಗೆದ್ದು ಬೀಗಿದ್ದ ಭಾರತ ನಿನ್ನೆ ಸೋಲುವ ಮೂಲಕ ಹಿನ್ನಡೆ ಅನುಭವಿಸಿದೆ.

* 2023ರ ಆಗಸ್ಟ್ ತಿಂಗಳಲ್ಲಿ ಕೊನೆಯದಾಗಿ ಟಿ ಟ್ವೆಂಟಿ ಸರಣಿ ಸೋತಿದ್ದ ಭಾರತ ಮೂರು ವರ್ಷಗಳ ಬಳಿಕ ನಿನ್ನೆಯೇ ಟಿ ಟ್ವೆಂಟಿ ಸರಣಿ ಸೋತಿದ್ದು ಈ ನಡುವೆ ಎರಡು ಟ್ವೆಂಟಿ ವಿಶ್ವಕಪ್ ಟ್ರೋಫಿಗಳನ್ನೂ ಸಹ ಗೆದ್ದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?