LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: 7 ಸಾವಿರ ಪೊಲೀಸ್, ಕೃಷಿ ಇಲಾಖೆಯ 945 ಹುದ್ದೆ ಸೇರಿ 12 ಸಾವಿರ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ವಿವಿಧ ವೃಂದಗಳ 11,938 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸಿದ್ಧತೆ ಮಾಡಿಕೊಂಡಿದೆ.

ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕಾರಣಕ್ಕೆ ಬಹುತೇಕ ಇಲಾಖೆಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು KPSC ಬದಲಾಗಿ ಕೆಇಎ ಬಗ್ಗೆ ಆಸಕ್ತಿ ತೋರಿಸಿವೆ.

 3991 ಪೊಲೀಸ್ ಕಾನ್ಸ್ಟೇಬಲ್ ಸಿವಿಲ್, 1600 ಸಿಎಎಆರ್/ಡಿಎಆರ್ ಸಶಸ್ತ್ರ ಪೊಲೀಸ್ ಕಾನ್ ಸ್ಟೆಬಲ್, 1687 ರಾಜ್ಯ ಮೀಸಲು ಪೊಲೀಸ್ ಪಡೆ(KSRP) ಸೇರಿದಂತೆ ಗೃಹ ಇಲಾಖೆಯ ವಿವಿಧ ವೃಂದಗಳ 7813 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿವಿಧ ವೃಂದಗಳ 1320, ವಾಣಿಜ್ಯ ತೆರಿಗೆ ಇಲಾಖೆಯ 706 ಹುದ್ದೆಗಳು ಸೇರಿದಂತೆ ಉಳಿಕೆ ಮೂಲ ವೃಂದಗಳ 9244, ಕಲ್ಯಾಣ ಕರ್ನಾಟಕ ವೃಂದದ 2694 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಕೃಷಿ ಇಲಾಖೆಯ 945, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 386, ರಾಜ್ಯ ವಿಮಾ ಯೋಜನೆ ಇಲಾಖೆಯ 289, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ 200, ಪ್ರವಾಸೋದ್ಯಮ, ಕೈಮಗ್ಗ ಮತ್ತು ಜವಳಿ, ಕಾಡಾ ನಿರ್ದೇಶನಾಲಯ, ಕೆಆರ್ ಐಡಿಎಲ್, ಕೆಐಎಡಿಬಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಜೂನ್ 20ರವರೆಗೆ ವಿವಿಧ ಇಲಾಖೆಗಳಿಂದ ಸಲ್ಲಿಕೆಯಾದ ಎಲ್ಲಾ ನೇಮಕಾತಿ ಪ್ರಸ್ತಾವನೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ದಿನ, ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರ ಪ್ರಕಟ, ಅಂಕ ಪ್ರಕಟ, ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ, ಆಯ್ಕೆ ಪಟ್ಟಿ ಪ್ರಕಟಣೆಗೆ ನಿಗದಿಪಡಿಸಿದ ದಿನಾಂಕಗಳ ಮಾಹಿತಿ ವೇಳಾಪಟ್ಟಿ ಸಿದ್ದಪಡಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಅಫ್ಘಾನಿಸ್ತಾನದ ಮೇಲೆ ರಾತ್ರೋರಾತ್ರಿ ಪಾಕಿಸ್ತಾನದಿಂದ ಏರ್ ಸ್ಟ್ರೈಕ್: 35 ಜನ ಸಾವು, 100 ಮಂದಿಗೆ ಗಾಯರಾಮ ಮಂದಿರ ಅಕ್ರಮ ಹಿಂದೂ ಧರ್ಮದಲ್ಲಾದ ಅಕ್ರಮ: ಈ ಬಗ್ಗೆ RSS ನಿಲುವೇನು…?: ಮಹದೇವಪ್ಪ ಪ್ರಶ್ನೆಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ KPSCಯಿಂದ 1,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್BIG NEWS : ಕನ್ಯಾಪೊರೆ ಹರಿದಿದೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ದೂಷಿಸಲು ಆಗುವುದಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪುMoney Saving Tips : ಹಣ ನೀರಿನಂತೆ ಖರ್ಚಾಗುತ್ತಿದೆಯೇ ? ಹಾಗಿದ್ದರೆ ಈ ಸರಳ ವಿಧಾನ ಅನುಸರಿಸಿ..!ತಮಿಳುನಾಡಿನಲ್ಲಿ ವಿಜಯ್ ಟಿವಿಕೆ ಸರ್ಕಾರ ಪತನ ಬಗ್ಗೆ ಪ್ರಮುಖ ಸುಳಿವು ನೀಡಿದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ಬೆಳಿಗ್ಗೆ ಎದ್ದ ತಕ್ಷಣ ದೇಹ ನೋವು , ಸಂಧಿ ಬಿಗಿತ ಕಾಣಿಸಿಕೊಳ್ಳುತ್ತಿದೆಯೇ ? ಇಲ್ಲಿದೆ 5 ಮಹತ್ವದ ಆಯುರ್ವೇದ ಸಲಹೆಭಕ್ತರ ನಂಬಿಕೆಗೆ ದ್ರೋಹ: ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: 7 ಸಾವಿರ ಪೊಲೀಸ್, ಕೃಷಿ ಇಲಾಖೆಯ 945 ಹುದ್ದೆ ಸೇರಿ 12 ಸಾವಿರ ಹುದ್ದೆಗಳಿಗೆ ನೇಮಕಾತಿSHOCKING : ಚಪ್ಪಟೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ; ಆಪರೇಷನ್‌’ಗೂ ಮುನ್ನವೇ ದಾವಣಗೆರೆಯಲ್ಲಿ ಯುವಕ ಸಾವು.!