ಬೆಂಗಳೂರು: ಆರ್.ಎಸ್.ಎಸ್ ನವರು ನಮ್ಮ ಮಾತು, ನಿಮ್ಮ ಮಾತು, ಸಂವಿಧಾನದ ಮಾತು ಕೇಳಲ್ಲ. ಆದರೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳೇ ಆರ್.ಎಸ್.ಎಸ್ ನೋಂದಣಿ ಆಗಲಿ ಅಂದಿದ್ದಾರೆ. ಧರ್ಮಗುರುಗಳ ಮಾತಾದ್ರೂ ಕೇಳಲಿ ಎಂದು ಹೇಳುವ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಸಂಘ ಪರಿವಾರದ ಬಗ್ಗೆ ಮಾತನಾಡಿದ್ದಾರೆ.
ವಿಶ್ವದ ಅತಿ ದೊಡ್ಡ ಸಂಸ್ಥೆ ಆರ್.ಎಸ್.ಎಸ್ ಏಕೆ ನೋಂದಣಿ ಆಗಿಲ್ಲಎಂದು ಕೇಳೋದೇ ತಪ್ಪಾ? ಅತಿ ದೊಡ್ಡ ಸಂಸ್ಥೆ ಆರ್.ಎಸ್.ಎಸ್ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತೆ. ಅಷ್ಟೊಂದು ಜನ ಬೀದಿಗೆ ಇಳಿಯುತ್ತಾರೆ. ಹೀಗಾಗಿ ನೋಂದಣಿ ಮಾಡಿಸಿಕೊಳ್ಳಿ ಎಂದಿದ್ದೇನೆ. ನೀವು ಯಾರ ಬಳಿಯೂ ಕೈಚಾಚುವುದು ಬೇಡ, ಶುಲ್ಕ ಏನಿದೆಯೋ ಅದನ್ನೂ ಬೇಕಿದ್ದರೆ ನಾನೇ ಕಟ್ಟುತ್ತೇನೆ ಎಂದು ವ್ಯಂಗ್ಯವಾಅಡಿದ್ದಾರೆ.
ದಿನನಿತ್ಯ 4500 ಕಡೆ ಆರ್.ಎಸ್.ಎಸ್ ಚಟುವಟಿಕೆಗಳು ನಡೆಯುತ್ತವೆ ಅಂದಮೇಲೆ ಅದರ ಬಗ್ಗೆ ಪ್ರಶ್ನೆ ಮಾಡುವುದಿಲ್ಲವೇ? ಈ ಬಗ್ಗೆ ಮಾಧ್ಯಮಗಳು ಆರ್.ಎಸ್.ಎಸ್ ನವರನ್ನು ಕೇಳಬೇಕು. ಒಂದು ಸಣ್ಣ ಘಟನೆ ನಡೆದರೆ ಅಥವಾಅ ಗಂಡ-ಹೆಂಡತಿ, ಅತ್ತೆ-ಸೊಸೆ ಜಗಳವಾದರೂ ನನ್ನ ಬಳಿ ಬಂದು ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಎಂದು ಕೇಳ್ತೀರಾ. ಹಾಗಿರುವಾಗ ಇಷ್ಟು ವ್ಯಾಅಪಕವಾಗಿ ಆರ್.ಎಸ್.ಎಸ್ ನವರು ಚಟುವಟಿಕೆಗಳನ್ನು ನಡೆಸುತ್ತಿರುವಾಗ ನಿಮಗೆ ಪ್ರಶ್ನೆಗಳಿಲ್ಲವೇ? ಎಂದರು.
ನೂರು ವರ್ಷದ ಇತುಹಾಸವಿದೆ ಎನ್ನುತ್ತಾರೆ. ನಮಗೆ ನೂರು ವರ್ಷದ ಇತಿಹಾಸ ಬೇಡ. ನೋಂದಣಿ ಆದಾಗಿನಿಂದ ಇತಿಹಾಸ ಕೊಡಿ ಇಲ್ಲ ನೋಂದಣಿ ಆಗಿಲ್ಲದಿದ್ದರೆ ಮಾಡಿಸಿಕೊಳ್ಳಿ. ನಾನೇ ಸಹಕಾರ ಕೊಡುತ್ತೇನೆ ಎಂದರು. ಯಾರ ಹತ್ತಿರವೂ ಕೈಕಾಚುವುದು ಬೇಕಾಗಿಲ್ಲ. ನಿಮ್ಮದೇನು ಶುಲ್ಕ ಇದೆ. ಅದನ್ನೂ ನಾನೇ ಕಟ್ಟುತ್ತೇನೆ ಬೇಕಿದ್ದರೆ ಎಂದು ತಿಳಿಸಿದ್ದಾರೆ.