LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಆರ್​​ಟಿಸಿಗಳಲ್ಲಿ ವಕ್ಫ್ ಎಂದು ಉಲ್ಲೇಖ: ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಸ್ಥಿತಿ: ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ

ಬೆಂಗಳೂರು: ರಾಜ್ಯದ ರೈತರು ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳ ದಾಖಲೆಗಳಲ್ಲಿ ಯಾವುದೇ ಪೂರ್ವಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ವಕ್ಫ್‌ ಹೆಸರು ನಮೂದಾಗಿರುವುದು ಈ ಹಿಂದೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದೇ ವಿಚಾರವನ್ನು ಇದೀಗ ವಿಪಕ್ಷ ನಯಾಕ ಆರ್.ಅಶೋಕ್ ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​, ಆರೋಪಿಸಿದ್ದಾರೆ. ರೈತರ ಭೂಮಿಯನ್ನು ವಕ್ಫ್ ವಿವಾದಕ್ಕೆ ಸಿಲುಕಿಸಿ, ಕಾಂಗ್ರೆಸ್ ಸರ್ಕಾರ ಯಾರ ಹಿತ ಕಾಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಓಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ರಾಜ್ಯದಾದ್ಯಂತ ರೈತರ RTCಗಳ ಕಾಲಂ 11ರಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದು, ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದು ಕೇವಲ ದಾಖಲೆ ಬದಲಾವಣೆಯ ವಿಚಾರವಲ್ಲ. ಇದು ರೈತನ ಮಾಲೀಕತ್ವದ ಹಕ್ಕು, ಬದುಕು ಮತ್ತು ಭವಿಷ್ಯದ ಪ್ರಶ್ನೆ ಎಂದವರು ತಿಳಿಸಿದ್ದಾರೆ.ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ. ಒಟ್ಟು 3,00,000 RTCಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎನ್ನಲಾಗಿದೆ. 31 ಜಿಲ್ಲೆಗಳ ರೈತರು ಇದರ ಪರಿಣಾಮಕ್ಕೆ ಒಳಗಾಗುವ ಆತಂಕದಲ್ಲಿದ್ದಾರೆ ಎಂದವರು ದೂರಿದ್ದಾರೆ.

ಜಿಲ್ಲಾವಾರು ಅಂಕಿ-ಅಂಶ:
ಉತ್ತರ ಕನ್ನಡ – 73,000 RTCಗಳು
ದಕ್ಷಿಣ ಕನ್ನಡ – 48,000 RTCಗಳು
ಶಿವಮೊಗ್ಗ – 38,000 RTCಗಳು
ಬೆಂಗಳೂರು ದಕ್ಷಿಣ – 18,000 RTCಗಳು
ಕಲಬುರಗಿ – 17,000 RTCಗಳು
ಬಾಗಲಕೋಟೆ – 17,000 RTCಗಳು

ರೈತರು ತಮ್ಮದೇ ಭೂಮಿಯನ್ನು ಮಾರಾಟ ಮಾಡಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ರೈತರನ್ನು ತಮ್ಮದೇ ಜಮೀನಿನಲ್ಲಿ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಾ? ಕಾಂಗ್ರೆಸ್ ಸರ್ಕಾರಕ್ಕೆ ರೈತನ ಹಿತ ಮುಖ್ಯವೇ, ಅಥವಾ ತುಷ್ಟೀಕರಣದ ರಾಜಕಾರಣ ಮುಖ್ಯವೇ? ಎಂದು ಅಶೋಕ್​​ ಪ್ರಶ್ನಿಸಿದ್ದಾರೆ.

ರೈತನು ಅನ್ನ ಬೆಳೆಯುತ್ತಾನೆ. ಇಡೀ ದೇಶದ ಹಸಿವನ್ನು ನೀಗಿಸುತ್ತಾನೆ. ಅಂತಹ ರೈತನನ್ನು ತನ್ನದೇ ಭೂಮಿಯ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲಿಸಿದರ ಅನ್ನದಾತನ ಶಾಪ ತಟ್ಟದೇ ಇರದು ಎಂದೂ ಗುಡುಗಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಮನ್ ಕಿ ಬಾತ್: ತಮ್ಮ ಮನವಿ ಬೆಂಬಲಿಸಿದ ದೇಶದ ಜನತೆಗೆ ಪ್ರಧಾನಿ ಮೋದಿ ಧನ್ಯವಾದಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಕ ಎನ್.ಎಸ್.ಶಂಕರ್ ಹೃದಯಾಘಾತಕ್ಕೆ ಬಲಿಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಣೆಗೆ GBA ಮಾಸ್ಟರ್ ಪ್ಲಾನ್: ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಜೆ ವೇಲೆಯೂ ಕಸ ಸಂಗ್ರಹಸಾಧಾರಣ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ದುರ್ಮರಣರೈತರ ಆರ್​​ಟಿಸಿಗಳಲ್ಲಿ ವಕ್ಫ್ ಎಂದು ಉಲ್ಲೇಖ: ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಸ್ಥಿತಿ: ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶಕರಾಚಿ ರೇಂಜರ್ಸ್ ಪ್ರಧಾನ ಕಚೇರಿಯಲ್ಲಿ ಗುಂಡಿನ ಚಕಮಕಿ: 4 ಸೈನಿಕರು, 6 ಭಯೋತ್ಪಾದಕರು ಸಾವುಬಿಡದಿ ಟೌನ್ ಶಿಪ್ ವಿರೋಧಿ ಹೋರಾಟ ರಾಜ್ಯವ್ಯಾಪಿ ರೈತ ಚಳವಳಿಯಾಗಿ ರೂಪಿಸಲು HDK ಮಾಸ್ಟರ್ ಪ್ಲ್ಯಾನ್ಮಾದಕ ವಸ್ತು ವಿರುದ್ಧ ಸಮರ: ಸಾಗಾಣೆ, ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟ ಕ್ರಮಮಕ್ಕಳಿಗಾಗಿ ಹೆಲ್ತಿ ಅಂಡ್ ಟೇಸ್ಟಿ ಬ್ರೇಕ್‌ಫಾಸ್ಟ್: ಸುಲಭವಾಗಿ ಮಾಡಿ ರಾಗಿ ಚಾಕೊಲೇಟ್ ಪ್ಯಾನ್‌ಕೇಕ್