LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐಟಿ ಸಿಟಿ ಬೆಂಗಳೂರಿನಲ್ಲಿ ಧರ್ಮ ತಾರತಮ್ಯ?ಧರ್ಮದ ಕಾರಣಕ್ಕೆ ಉದ್ಯೋಗಾಕಾಂಕ್ಷಿ ರಿಜೆಕ್ಟ್: ಲಿಂಕ್ಡ್‌ಇನ್ ಪೋಸ್ಟ್‌ನಿಂದ ಐಟಿ ಹಬ್‌ನಲ್ಲಿ ಶುರುವಾಯ್ತು ಜಟಾಪಟಿ

ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಹಾಗೂ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಧರ್ಮದ ಆಧಾರದ ಮೇಲೆ ಉದ್ಯೋಗದ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನ ಕಾನೂನು ವಿದ್ಯಾರ್ಥಿಯೊಬ್ಬರು ಮಾಡಿರುವ ಲಿಂಕ್ಡ್‌ಇನ್ (LinkedIn) ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಹೊಸದೊಂದು ದೊಡ್ಡ ವಿವಾದಕ್ಕೆ ಕಿಡಿ ಹೊತ್ತಿಸಿದೆ

ಬೆಂಗಳೂರಿನ ಕಾನೂನು ಸಂಸ್ಥೆಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಮೊಹಮ್ಮದ್ ಅಮೀನ್ ಎಂಬ ವಿದ್ಯಾರ್ಥಿ ಈ ಆಘಾತಕಾರಿ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಆರೋಪಕ್ಕೆ ಗುರಿಯಾಗಿರುವ ಕಂಪನಿ ಯಾವುದು ಎಂಬುದು ಇನ್ನು ಬಹಿರಂಗವಾಗಿಲ್ಲ ಹಾಗೂ ಈ ಆರೋಪಗಳು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ.

ವಾಟ್ಸಾಪ್ ಸ್ಕ್ರೀನ್‌ಶಾಟ್ ಬಿಡುಗಡೆ: ಕಂಗಾಲಾಗಿಸಿದ ರೆಕ್ರೂಟರ್ ಮೆಸೇಜ್

ಮೊಹಮ್ಮದ್ ಅಮೀನ್ ಅವರ ಪ್ರಕಾರ, ಈ ಘಟನೆ ನಡೆದಿರುವುದು ಅವರ ಆಪ್ತ ಸ್ನೇಹಿತನೊಬ್ಬನಿಗೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಆ ಅಭ್ಯರ್ಥಿಯನ್ನು ಇಂಟರ್ವ್ಯೂ ಹಂತಕ್ಕೂ ಕರೆಯದೆ ನೇರವಾಗಿ ರಿಜೆಕ್ಟ್ ಮಾಡಲಾಗಿತ್ತು. ಆದರೆ, ಅದಕ್ಕೆ ನೀಡಲಾದ ಕಾರಣ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ

ಧರ್ಮವೇ ರಿಜೆಕ್ಷನ್‌ಗೆ ಕಾರಣ?: ತನ್ನ ಆರೋಪಕ್ಕೆ ಪುಷ್ಟಿ ನೀಡಲು ಅಮೀನ್ ಅವರು ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಕಂಪನಿಯ ರೆಕ್ರೂಟರ್ (ಉದ್ಯೋಗ ನೀಡುವ ಅಧಿಕಾರಿ), ಅಭ್ಯರ್ಥಿಯ ಧರ್ಮದ ಕಾರಣಕ್ಕಾಗಿಯೇ ಆತನ ಪ್ರೊಫೈಲ್ ಅನ್ನು ಮುಂದಿನ ಹಂತಕ್ಕೆ ಪರಿಗಣಿಸುತ್ತಿಲ್ಲ ಎಂದು ನೇರವಾಗಿ ಹೇಳಿರುವುದು ಕಂಡುಬಂದಿದೆ

ವಿದ್ಯಾರ್ಹತೆಗೆ ಬೆಲೆಯಿಲ್ವಾ?: ಅಭ್ಯರ್ಥಿಯ ವಿದ್ಯಾರ್ಹತೆ, ಅನುಭವ ಅಥವಾ ಕೌಶಲ್ಯಗಳನ್ನು ಪರಿಗಣಿಸದೆ, ಕೇವಲ ಆತನ ಧರ್ಮದ ಗುರುತನ್ನು ನೋಡಿ ಇಂಟರ್ವ್ಯೂ ಅವಕಾಶ ನಿರಾಕರಿಸಿರುವುದು ಅತ್ಯಂತ ಆಘಾತಕಾರಿ ಮತ್ತು ಬೇಸರದ ಸಂಗತಿ ಎಂದು ಕಾನೂನು ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಆಶಯ ಮತ್ತು ಇಂದಿನ ಕಹಿ ವಾಸ್ತವ

ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೀನ್, “ನಾವು ಕಾನೂನು ಮತ್ತು ಶೈಕ್ಷಣಿಕ ವಲಯದಲ್ಲಿ ಸಮಾನತೆ ಹಾಗೂ ತಾರತಮ್ಯ ವಿರೋಧದ ಬಗ್ಗೆ ದೊಡ್ಡದಾಗಿ ಮಾತನಾಡುತ್ತೇವೆ. ಆದರೆ ನಿಜ ಜೀವನದ ಅನುಭವಗಳಿಗೂ ಮತ್ತು ನಮ್ಮ ಸಂವಿಧಾನದ ಆಶಯಗಳಿಗೂ ನಡುವೆ ಎಷ್ಟು ದೊಡ್ಡ ಕಂದಕವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದಿದ್ದಾರೆ.

ಅಲ್ಲದೇ, ಇಂತಹ ತಾರತಮ್ಯ ಎದುರಿಸುವ ಅನೇಕರು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ ಮತ್ತು ಕಾನೂನು ಹೋರಾಟದ ಕಷ್ಟಗಳಿಗೆ ಹೆದರಿ ಸುಮ್ಮನಾಗುತ್ತಾರೆ. ನನ್ನ ಉದ್ದೇಶ ಕೇವಲ ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ಹೊರತು ಯಾವುದೇ ಆನ್‌ಲೈನ್ ಅಟೆನ್ಷನ್ ಪಡೆಯುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಭೀಕರ ಚರ್ಚೆ

ಈ ಪೋಸ್ಟ್‌ಗೆ ಲಿಂಕ್ಡ್‌ಇನ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ:

ಒಂದು ವರ್ಗದ ಆಕ್ರೋಶ: ಯಾವುದೇ ಉದ್ಯೋಗವನ್ನು ಅಭ್ಯರ್ಥಿಯ ಕೌಶಲ್ಯ ಮತ್ತು ಯೋಗ್ಯತೆಯ ಮೇಲೆ ನೀಡಬೇಕೇ ಹೊರತು ಧರ್ಮ ಅಥವಾ ಜಾತಿಯ ಆಧಾರದ ಮೇಲಲ್ಲ. ಇದು ಸಮಾಜದಲ್ಲಿ ಇನ್ನು ಜೀವಂತವಾಗಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಟೆಕ್ ಕನ್ಸಲ್ಟೆಂಟ್ (ತಂತ್ರಜ್ಞಾನ ಸಲಹೆಗಾರ) ಒಬ್ಬರು ಕೂಡ ಈ ಪೋಸ್ಟ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. “ಒಂದು ವೇಳೆ ಈ ಘಟನೆ ನಿಜವಾಗಿದ್ದರೆ, ದಯವಿಟ್ಟು ಇದರ ಸಂಪೂರ್ಣ ವಿವರಗಳನ್ನು ಜಗತ್ತಿಗೆ ತಿಳಿಸಿ. ಅದು ಯಾವ ಕಂಪನಿ? ಇಂತಹ ಮೆಸೇಜ್ ಕಳುಹಿಸಿದ ಆ ಎಚ್‌ಆರ್ (HR) ಯಾರು? ಅವರ ಹೆಸರೇನು ಎಂಬುದನ್ನು ಬಹಿರಂಗಪಡಿಸಿ. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಾಧ್ಯ,” ಎಂದು ಒತ್ತಾಯಿಸಿದ್ದಾರೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?