LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯಾದ್ಯಂತ ಆರಂಭದಲ್ಲೇ ಕೈಕೊಟ್ಟ ಮುಂಗಾರು; ರೈತರನ್ನು ಕಾಡುತ್ತಿರುವ ಎಲ್ ನಿನೋ ಎಂದರೇನು?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯು ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದಾದ್ಯಂತ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಎಲ್ ನಿನೋ!

ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷ ಮುಂಗಾರು ಮಳೆಯು ನಿರೀಕ್ಷಿತ ಪ್ರಮಾಣಕ್ಕಿಂತ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.

ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ತಗ್ಗಲು ಎಲ್ ನಿನೋ ಪ್ರಭಾವವೇ ಮುಖ್ಯ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದು ಮುಂಗಾರಿನ ಮೇಲೆ ನಕಾರಾತಕ ಪರಿಣಾಮ ಬೀರಿದ್ದು, ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ರೈತರಿಗೆ ಮುಂಗಾರು ಕೈಕೊಟ್ಟಿರುವುದರಿಂದ ಬೆಳೆ ಬಗ್ಗೆ ಚಿಂತೆ ಹೆಚ್ಚಾಗಿದೆ.

ಆರಂಭದಲ್ಲಿ ಮಳೆ ಬಾರದಿರುವುದರಿಂದ ರೈತರು ಬಿತ್ತನೆ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕಿ?ಡಾಗಿದ್ದಾರೆ. ಬೆಳೆ ಚಕ್ರವು ತಪ್ಪಿಹೋಗಿದ್ದು, ಭವಿಷ್ಯದ ಇಳುವರಿಯ ಮೇಲೆ ನೇರ ಪರಿಣಾಮ ಬೀರಲಿದೆ. ಮಳೆಯ ಕೊರತೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಇದು ಕೇವಲ ಕೃಷಿಗೆ ಮಾತ್ರವಲ್ಲದೆ, ಕುಡಿಯುವ ನೀರಿಗೂ ಭವಿಷ್ಯದಲ್ಲಿ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ.

ಈಗಾಗಲೇ ಬೀಜ, ರಸಗೊಬ್ಬರ ಮತ್ತು ಉಳುಮೆಗೆ ಹಣ ಹೂಡಿರುವ ರೈತರು, ಮಳೆಯಿಲ್ಲದೆ ಬೆಳೆ ಬಾರದಿದ್ದರೆ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿದ್ದಾರೆ. ಮೇವು ಮತ್ತು ನೀರಿನ ಲಭ್ಯತೆಯು ಕಡಿಮೆಯಾಗುತ್ತಿರುವುದರಿಂದ ಪಶುಪಾಲನೆ ಮಾಡುತ್ತಿರುವ ರೈತರು ತಮ ಜಾನುವಾರುಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅನಿಶ್ಚಿತವಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ಮತ್ತು ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಹವಾಮಾನ ಇಲಾಖೆಯು ಈ ವರ್ಷದ ಒಟ್ಟಾರೆ ಮಳೆಯ ಪ್ರಮಾಣವನ್ನು ದೀರ್ಘಾವಧಿ ಸರಾಸರಿಯ ಶೇ. 90ಕ್ಕೆ ಪರಿಷ್ಕರಿಸಿದೆ. ಮಳೆ ಕೊರತೆಯು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಎಲ್ ನೀನೋ ಎನ್ನುವುದು ಸಮುದ್ರ ಮತ್ತು ವಾತಾವರಣದಲ್ಲಿ ಆಗುವ ಒಂದು ವಿಶೇಷ ನೈಸರ್ಗಿಕ ಹವಾಮಾನ ವ್ಯವಸ್ಥೆ. ಸಾಮಾನ್ಯವಾಗಿ ಪ್ರತಿ 4 ವರ್ಷಗಳಿಗೊಮೆ ಇದು ಉಂಟಾಗುತ್ತದೆ. ಈ ಪರಿಣಾಮವಾಗಿ ಈ ಬಾರಿ ಮುಂಗಾರು ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ. ಸಮುದ್ರದ ಮೇಲೆ ಉಷ್ಣಾಂಶ ಅತಿಯಾಗಿ ಹೆಚ್ಚಾದಾಗ ಎಲ್ ನೀನೋ ಸ್ಥಿತಿ ನಿರ್ಮಾಣವಾಗುತ್ತದೆ. ಉಷ್ಣಾಂಶ ಹೆಚ್ಚಾದಾಗ ಮೋಡಗಳ ರಚನೆ, ಗಾಳಿ ಸಂಚಾರ, ಮಳೆಯ ವಿತರಣೆಯಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಅದರ ಪರಿಣಾಮವಾಗಿ ನಮ ರಾಜ್ಯದ ಮೇಲೆ ಬೀಳಬೇಕಾದ ಮುಂಗಾರು ಮಳೆ ಕಡಿಮೆಯಾಗುತ್ತದೆ. ಹೀಗಾಗಿ ಈ ವರ್ಷ ಮುಂಗಾರು ಕ್ಷೀಣಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಈ ವರ್ಷ ಫೇರ್ ಕಾಸ್ಟ್‌ಗಳ ಅನ್ವಯ ಮುಂಗಾರು ಮಳೆ ಶೇ.08 ರಿಂದ 10 ರಷ್ಟು ಕ್ಷೀಣಿಸಿದೆ. ಸಂಖ್ಯೆಯಲ್ಲಿ ಇದು ಕಡಿಮೆ ಎಂದು ತೋರಿದರೂ, ಕೃಷಿಗೆ ಇದು ದೊಡ್ಡ ಹೊಡೆತವಾಗಬಹುದು. ಕರ್ನಾಟಕದ ಬಹುಪಾಲು ರೈತರು ಮಳೆಆಧಾರಿತ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಮಳೆ ಕಡಿಮೆಯಾದರೆ ಬಿತ್ತನೆ ವಿಳಂಬವಾಗುವುದು, ಬೆಳೆಯ ಬೆಳವಣಿಗೆ ಕುಂಠಿತವಾಗುವುದು, ಕೊಯ್ಲಿನ ಪ್ರಮಾಣ ಕಡಿಮೆಯಾಗುವುದು ಸಹಜ.

ಮುಂಗಾರು ಕ್ಷೀಣಿಸಿದ್ದು ಕೇವಲ ಮಳೆಯ ಪ್ರಮಾಣಕ್ಕೆ ಮಾತ್ರ ಸೀಮಿತವಲ್ಲ, ಮಳೆಯ ಹಂಚಿಕೆ, ಕಾಲಮಾನದ ವ್ಯತ್ಯಾಸವೂ ಹೆಚ್ಚಾಗಿದೆ. ಕೆಲವೊಮ್ಮೆ ಒಂದೇ ಸಾರಿ ಜೋರಾಗಿ ಸುರಿದು, ನಂತರ ದೀರ್ಘಕಾಲ ಒಣಹವಾಮಾನ ಮುಂದುವರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅವಧಿಯ ಬೆಳೆಗಳಿಗೆ (ಉದಾಹರಣೆಗೆ ಹೆಚ್ಚು ನೀರು ಬೇಕಾಗುವ ಬೆಳೆಗಳು) ಹಾನಿಯಾಗಬಹುದು.ಇದನ್ನೆಲ್ಲ ಪರಿಗಣಿಸಿ, ತಜ್ಞರು ರೈತರಿಗೆ ತಮ್ಮ ಕೃಷಿ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಸಲಹೆ ನೀಡಿದ್ದಾರೆ.

ಮೊದಲು, ಕಡಿಮೆ ಅವಧಿಯಲ್ಲಿ ಬೆಳೆ ಕೊಡುವ ಪೈರುಗಳನ್ನು ಆಯ್ಕೆ ಮಾಡಬೇಕು. ಅಂದರೆ, ಬಿತ್ತನೆ ಮಾಡಿದ ಮೇಲೆ ಬೇಗನೆ ಕೊಯ್ಲಿಗೆ ಬರುತ್ತಿರುವ, ಕಡಿಮೆ ದಿನಗಳಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಸುವುದು ಸುರಕ್ಷಿತ. ಇಂತಹ ಬೆಳೆಗಳು ಮಳೆಯ ಅನಿಶ್ಚಿತತೆ ಇದ್ದರೂ ಕೆಲವು ಮಟ್ಟಿಗೆ ರಕ್ಷಣೆ ನೀಡುತ್ತವೆ.

ಕಡಿಮೆ ಪ್ರಮಾಣದ ನೀರು ಬಳಕೆ ಮಾಡುವ ಬೆಳೆಗಳಿಗೆ ಆದ್ಯತೆ ನೀಡುವುದು. ಅಂದರೆ, ನೀರಿನ ಅವಶ್ಯಕತೆ ಕಡಿಮೆ ಇರುವ ದಾಳಿಂಬೆ, ತೆನೆ, ಜೋಳ, ಕೆಲವು ಬಗೆಯ ದಾಳಿಂಬೆ ಪೈರುಗಳು, ಎಣ್ಣೆ ಬೇಳೆ ತರದ ಬೆಳೆಗಳನ್ನು ಆಯ್ಕೆಮಾಡಬಹುದು. ಇವು ಮಳೆ ಕಡಿಮೆಯಾದರೂ, ಭೂಮಿ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದಿರುತ್ತವೆ.

ಎಲ್ ನಿನೋ ಎಂದರೆ ಪೆಸಿಫಿಕ್ ಸಾಗರದ ಸಮಭಾಜಕ ವಲಯದ ಸಮುದ್ರದ ಮೇಲೆ ನೀರು ಅಸಹಜವಾಗಿ ಬಿಸಿಯಾಗುವ ಪ್ರಕ್ರಿಯೆ. ಇದು ಜಾಗತಿಕ ಹವಾಮಾನ ಮಾದರಿಗಳ ಮೇಲೆ ದೊಡ್ಡ ಮಟ್ಟದ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಎಲ್ ನಿನೋ ಸಕ್ರಿಯವಾಗಿದ್ದಾಗ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗುವ ಅಥವಾ ಮಳೆಯ ಹಂಚಿಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!