ಬೆಂಗಳೂರು : ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಲಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ.
ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಮಂಜು ಅಲಿಯಾಸ್ ಕೋಳಿ, ಮಂಜುನನ್ನು ಕೊಲೆ ಮಾಡಲಾಗಿದೆ. ಭಾರತ್ ಬಾರ್ ಬಳಿ ಗಲಾಟೆ ವೇಳೆ ಚಾಕುವಿನಿಂದ ಇರದು ಮಂಜುನನ್ನು ಕೊಲೆ ಮಾಡಲಾಗಿದೆ. ಈ ಹಿಂದೆ ಮಂಜು, ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಘಟನೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.