LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಟಿ ಕೋಟಿ ಸುರಿದು ‘Brand Bengaluru’ ಜಾಹೀರಾತು ಕೊಡುವ ನಿಮಗೆ, ಕಣ್ಣೆದುರೇ ಕಾಣುತ್ತಿರುವ ‘Smell Bengaluru’ ನಾಚಿಕೆ ತರುವುದಿಲ್ಲವೇ? ಕಾರಿನ ಗಾಜು ಇಳಿಸಿ, ಮೂಗು ಮುಚ್ಚಿಕೊಳ್ಳದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಿ: ಸಿಎಂ ಡಿ.ಕೆ.ಶಿವಕುಮಾರ್ ಗೆ ಆರ್.ಅಶೋಕ್ ತರಾಟೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣಾ ಅವ್ಯವಸ್ಥೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಸರಿಯಾಗಿ ಕಸನಿರ್ವಹಣೆಯಾಗುತ್ತಿಲ್ಲ. ಬೀದಿ ಬೀದಿಗಳಲ್ಲಿ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಕೊಳೆತು ನಾರುತ್ತಿದೆ. ಇಡೀ ನಗರದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಎದ್ದುರಾಗಿದೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಆರ್.ಅಶೋಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “Brand Bengaluru” ಅಂತ ಬೊಗಳೆ ಬಿಟ್ಟು, ಇಡೀ ಸಿಲಿಕಾನ್ ಸಿಟಿಯನ್ನು “Garbage Bengaluru” ಮಾಡಿದ್ದೇ ನಿಮ್ಮ ಸಾಧನೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದ್ದಾರೆ.

ಒಮ್ಮೆ ನಿಮ್ಮ ಎಸಿ ಕಾರಿನ ಗಾಜು ಇಳಿಸಿ, ಮೂಗು ಮುಚ್ಚಿಕೊಳ್ಳದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಧೈರ್ಯ ಮಾಡಿ! ಎಂ.ಜಿ. ರಸ್ತೆ, ಬನ್ನೇರುಘಟ್ಟ ರಸ್ತೆ, ಎಚ್‌ಎಸ್‌ಆರ್ ಲೇಔಟ್‌ಗಳಲ್ಲೇ ಕಸದ ಲಾರಿಗಳನ್ನು ನಿಲ್ಲಿಸಿ ರಸ್ತೆಗಳನ್ನೇ ಕಸದ ತೊಟ್ಟಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಿಮ್ಮ ಆಡಳಿತದಲ್ಲಿ ಬೆಂಗಳೂರಿಗರಿಗೆ ಸಿಗುತ್ತಿರುವುದು ಇದೇನಾ?

  • ರಸ್ತೆ ತುಂಬಾ ಉಸಿರುಗಟ್ಟಿಸುವ ನಾರುವ ದುರ್ವಾಸನೆ.
  • ರಸ್ತೆ ರಸ್ತೆಯಲ್ಲೂ ಹರಿಯುತ್ತಿರುವ ಕಸದ ವಿಷದ ನೀರು.
  • ಕಸದ ಲಾರಿಗಳಿಂದಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ನರಕ
  • ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾಗರಿಕರ ಬದುಕು.

ಬೆಂಗಳೂರಿನ ಜನರಿಗೆ ಉತ್ತರಿಸಿ:

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಂದಿದ್ದು ಕಮಿಷನ್ ಹೊಡೆಯಲೋ ಅಥವಾ ರಸ್ತೆಗಳಲ್ಲೇ ಕಸ ಸುರಿಯಲೋ?
  • ಅಧಿಕಾರಿಗಳು-ಗುತ್ತಿಗೆದಾರರ ಒಳಜಗಳದ ಪರಿಣಾಮವನ್ನು ಬೆಂಗಳೂರಿನ ತೆರಿಗೆದಾರರು ಯಾಕೆ ಹೊರಬೇಕು?
  • ಕೋಟಿ ಕೋಟಿ ಸುರಿದು “Brand Bengaluru” ಎಂದು ಜಾಹೀರಾತು ಕೊಡುವ ನಿಮಗೆ, ಕಣ್ಣೆದುರೇ ಕಾಣುತ್ತಿರುವ “Smell Bengaluru” ನಾಚಿಕೆ ತರುವುದಿಲ್ಲವೇ?

ಇದು ಕೇವಲ ಆಡಳಿತ ವೈಫಲ್ಯವಲ್ಲ, ಬೆಂಗಳೂರಿನ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯ, ಮೋಸ. ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಕಸದ ಅವ್ಯವಸ್ಥೆಗೆ ಅಂತ್ಯ ಹಾಡಿ..ಇಲ್ಲದಿದ್ದರೆ, ಇದೇ ಬೆಂಗಳೂರಿನ ಜನ ನಿಮ್ಮ ಸರ್ಕಾರವನ್ನು ಕಸದ ಬುಟ್ಟಿಗೆ ಎಸೆಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?