LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನ ಪರಿಷತ್ ಕದನದಲ್ಲಿ ಕಾಂಗ್ರೆಸ್ ಮೇಲುಗೈ: 5 ಸ್ಥಾನಗಳ ಗೆಲುವು, BJPಗೆ 2 ಸ್ಥಾನ JDSಗೆ ಹಿನ್ನಡೆ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಸಂಜೆ ಹೊರಬಿದ್ದಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಭರ್ಜರಿ ದಿಗ್ವಿಜಯ ಸಾಧಿಸಿದೆ ಸಂಖ್ಯಾಬಲದ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು, ಕೈ ಪಾಳಯ ಬರೋಬ್ಬರಿ 5 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಬಿಜೆಪಿ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ವಿಧಾನಸೌಧದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆದಿದ್ದು, ಸಂಜೆ 5 ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಬಿಗ್ ಗೇಮ್ ಪ್ಲಾನ್ ಬಹಿರಂಗವಾಗಿದೆ

ಕ್ರಾಸ್ ವೋಟಿಂಗ್ ನಡುಕ: ಲೆಕ್ಕಾಚಾರ ಉಲ್ಟಾ ಮಾಡಿದ್ದೇಗೆ ಕಾಂಗ್ರೆಸ್?

ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 4 ಮತ್ತು ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬೇಕಿತ್ತು. ಬಾಕಿ ಇದ್ದ 7ನೇ ಸ್ಥಾನಕ್ಕಾಗಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಮತ್ತು ಜೆಡಿಎಸ್‌ನ ಗೋವಿಂದರಾಜು ನಡುವೆ ನೇರ ಫೈಟ್ ಇತ್ತು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿ ಭಾರಿ ಪ್ರಮಾಣದ ಅಡ್ಡ ಮತದಾನ (Cross Voting) ನಡೆದಿದ್ದು, ಮೈತ್ರಿ ವೋಟ್‌ಗಳು ಹಸ್ತದ ಪಾಲಾಗಿವೆ

ಬಿಜೆಪಿ ತಂತ್ರ ಉಲ್ಟಾ: ವಿಧಾನಸಭೆಯಲ್ಲಿ 62 ಸದಸ್ಯ ಬಲ ಹೊಂದಿರುವ ಬಿಜೆಪಿ, ತನ್ನಿಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತ ಹಂಚಿ ಉಳಿದ ಮತಗಳನ್ನು ಜೆಡಿಎಸ್‌ಗೆ ಹಾಕಲು ಪ್ಲಾನ್ ಮಾಡಿತ್ತು. ಆದರೆ ಬಿಜೆಪಿ ಅಭ್ಯರ್ಥಿಗಳಿಗೇ ಕಡಿಮೆ ಮತ ಬಿದ್ದಿದೆ

ಜೆಡಿಎಸ್ ಫುಲ್ ಡ್ಯಾಮೇಜ್: 18 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಬಿದ್ದಿದ್ದು ಕೇವಲ 14 ಮತಗಳು! ಅಂದರೆ ಜೆಡಿಎಸ್‌ನ ಹಲವು ಶಾಸಕರು ಕೈ ಹಿಡಿದಿದ್ದಾರೆ.

ಯಾರಿಗೆ ಒಲಿಯಿತು ಅದೃಷ್ಟ? ಪರಿಷತ್‌ಗೆ ಆಯ್ಕೆಯಾದವರು ಇವರೇ

ಕಾಂಗ್ರೆಸ್ ಪಾಳಯದಿಂದ (5 ಜನ ವಿಜೇತರು):

ಬಿ.ಕೆ. ಹರಿಪ್ರಸಾದ್

ತಿಪ್ಪಣ್ಣಪ್ಪ ಕಾಮಕನೂರ್

ಪಿ.ವಿ. ಮೋಹನ್

ವಿನಯ್ ಕಾರ್ತಿಕ್ (ಟ್ವಿಸ್ಟ್ ಕೊಟ್ಟ 5ನೇ ಅಭ್ಯರ್ಥಿ)

ಶಿವಣ್ಣ ಮಳವಳ್ಳಿ

ಬಿಜೆಪಿ ಪಾಳಯದಿಂದ (2 ಜನ ವಿಜೇತರು):

ರಘು ಕೌಟಿಲ್ಯ

ಲಿಂಗರಾಜ್ ಪಾಟೀಲ್

ಸ್ಪರ್ಧಿಸಿದ್ದ ಯಾರಿಗೆ ಎಷ್ಟು ಮತಗಳು?

ಬಿಕೆ ಪರಿಪ್ರಸಾದ್‌ – 30

ತಿಪ್ಪಣ್ಣಪ್ಪ ಕಾಮಕನೂರ್ – 30

ಪಿ ವಿ ಮೋಹನ್ – 29

ರಘು ಕೌಟಿಲ್ಯ – 29

ಶಿವಣ್ಣ ಮಳವಳ್ಳಿ – 30

ಗೋವಿಂದ ರಾಜು – 14

ವಿನಯ್ ಕಾರ್ತಿಕ್‌ – 32

ಲಿಂಗರಾಜ್ ಪಾಟೀಲ್ – 27

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!