ಜೂನ್ 20ರಂದು ಪಿಎಂ ಕಿಸಾನ್ ನಿಧಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ ರೂ.2,000 ಜಮೆಯಾಗಿದೆ. ಆದರೆ ಈ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವಾದರೆ ಸುಲಭವಾಗಿ ದೂರು ನೀಡಬಹುದು ಮತ್ತು ಕಾರಣಗಳನ್ನು ತಿಳಿದುಕೊಳ್ಳಬಹುದು.
ಪಿಎಂ ಕಿಸಾನ್ ಹಣ ಜಮೆಯಾಗದಿದ್ದರೆ ಏನು ಮಾಡಬೇಕು..?
ಪಿಎಂ ಕಿಸಾನ್ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೂ ಹಣ ಬಂದಿಲ್ಲವಾದರೆ ನೀವು ದೂರು ನೀಡಬಹುದು. ಹಣ ಬಾರದಿರಲು ಹಲವು ಕಾರಣಗಳು ಇರಬಹುದು. ಇ-ಕೆವೈಸಿ ಪೂರ್ಣಗೊಳಿಸದಿರುವುದು, ಭೂ ದಾಖಲೆಗಳ ಪರಿಶೀಲನೆ ಆಗದಿರುವುದು, ಅರ್ಜಿಯಲ್ಲಿ ತಪ್ಪು ವೈಯಕ್ತಿಕ ಅಥವಾ ಬ್ಯಾಂಕ್ ವಿವರಗಳನ್ನು ನೀಡಿರುವುದು ಮುಂತಾದ ಕಾರಣಗಳಿಂದ ಹಣ ನಿಲ್ಲಬಹುದು.
ದೂರು ಹೇಗೆ ನೀಡುವುದು..?
ನಿಮ್ಮ ಹಣ ಬಾರದಿದ್ದರೆ ಕಾರಣ ತಿಳಿಯಲು ನೀವು 18001801551 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಸಿಬ್ಬಂದಿ ನಿಮ್ಮ ವಿವರಗಳನ್ನು ಪರಿಶೀಲಿಸಿ ಕಾರಣ ತಿಳಿಸುತ್ತಾರೆ. ಸಮಸ್ಯೆ ಪರಿಹರಿಸಿದ ಬಳಿಕ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.
ಇ-ಕೆವೈಸಿ ಮತ್ತು ಅರ್ಜಿ ನವೀಕರಣ ಸಹಾಯಕ್ಕಾಗಿ ಸಮೀಪದ ಕಾಮನ್ ಸರ್ವಿಸ್ ಸೆಂಟರ್‌ಗೆ (CSC) ಭೇಟಿ ನೀಡಬಹುದು. ನಂತರ CPGRAMS ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು. ಪ್ರತಿ ದೂರುಗೆ ರೂ.50 ಶುಲ್ಕ ವಿಧಿಸಲಾಗುತ್ತದೆ. ನಿಮ್ಮ ವಿವರಗಳನ್ನು ಸಲ್ಲಿಸಿ ದೂರು ದಾಖಲಿಸಬೇಕು. ಅಧಿಕಾರಿಗಳು ದೂರು ಪರಿಶೀಲಿಸಿ ಸಮಸ್ಯೆ ಏನು ಮತ್ತು ಪರಿಹಾರ ಏನು ಎಂಬುದನ್ನು ತಿಳಿಸುತ್ತಾರೆ.
ಆಫ್‌ಲೈನ್‌ನಲ್ಲಿ ನೀವು ಸಮೀಪದ ರೈತ ಸೇವಾ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯ ಕಾರಣವನ್ನು ತಿಳಿದುಕೊಳ್ಳಬಹುದು. ಕೆಲವರಿಗೆ ಅರ್ಹತೆ ಇಲ್ಲದಿದ್ದರೂ ತಪ್ಪು ಮಾಹಿತಿಯಿಂದ ಪಿಎಂ ಕಿಸಾನ್ ಪ್ರಯೋಜನ ಪಡೆದಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಅಂತವರನ್ನು ಫಲಾನುಭವಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.