LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಲಸದಲ್ಲಿ ಜೀರೋ, ವಿವಾದದಲ್ಲಿ ಹೀರೋ ಎನ್ನುವಂತಾಗಿದೆ ನಿಮ್ಮ ಪರಿಸ್ಥಿತಿ…ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಆರ್.ಅಶೋಕ್ ಲೇವಡಿ

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯ ವೈಖರಿ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕಲ್ಯಾಣ ಕರ್ನಾಟಕದ ಶಾಲೆಗಳ ದುರಸ್ತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವಾಗ ಪತ್ರ ಬರೆಯುತ್ತೀ? ಎಂದು ಪ್ರಶ್ನಿಸಿದ್ದಾರೆ.

ತಾವು ಮತ್ತು ತಮ್ಮ ಕುಟುಂಬ ಕಲ್ಯಾಣ ಕರ್ನಾಟಕದ ಜನತೆಯ ಮತ ಪಡೆದು ದಶಕಗಳಿಂದ ಅಧಿಕಾರ ಅನುಭವಿಸುತ್ತಿದ್ದೀರಿ. ಆದರೆ ಕಲ್ಯಾಣ ಕರ್ನಾಟಕ ಮಾತ್ರ ಇನ್ನೂ ನಿಜಾಮರ ಆಡಳಿತದಲ್ಲಿಯೇ ಇದೆಯೇನೋ ಅನ್ನುವಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ ಸ್ವಾಮಿ! ಕೆಲಸದಲ್ಲಿ ಜೀರೋ, ವಿವಾದದಲ್ಲಿ ಹೀರೋ ಎನ್ನುವಂತಾಗಿದೆ ನಿಮ್ಮ ಪರಿಸ್ಥಿತಿ ಎಂದು ಟೀಕಿಸಿದ್ದಾರೆ.

ಪತ್ರಿಕಾ ವರದಿಯನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ನಿಮ್ಮದೇ ಉಸ್ತುವಾರಿ ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕದ ಶಾಲಾ ಕೊಠಡಿಗಳ ದುಸ್ಥಿತಿ ಬಿಚ್ಚಿಡುತ್ತಿದೆ.

18,022 ಶಾಲಾ ಕೊಠಡಿಗಳು: ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗೆ ಕಾಯುತ್ತಿವೆ.
ಇದರಲ್ಲಿ ಬರೋಬ್ಬರಿ 8,006 ಕೊಠಡಿಗಳು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಕಲಿಯಲು ಯೋಗ್ಯವೇ ಅಲ್ಲ ಎಂದು ಇಲಾಖೆಯೇ ಕೈಚೆಲ್ಲಿದೆ.
ಸಿಮೆಂಟ್ ಉದುರಿದ ತಾರಸಿ, ಬಿರುಕು ಬಿಟ್ಟ ಗೋಡೆಗಳ ನಡುವೆ ಬಡವರ ಮಕ್ಕಳು ಪ್ರಾಣ ಕೈಯಲ್ಲಿ ಹಿಡಿದು ಅಕ್ಷರ ಕಲಿಯಬೇಕಾದ ದುರ್ಗತಿ ಬಂದಿದೆ.

ಮಾಧ್ಯಮಗಳ ಮುಂದೆ ದಿನವಿಡೀ ಭಾಷಣ ಬಿಗಿಯುವ, ಅನಗತ್ಯ ವಿವಾದ ಸೃಷ್ಟಿಸುವ ನಿಮಗಾಗಲಿ, ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕಾಗಲಿ ನಮ್ಮ ಕಲ್ಯಾಣ ಕರ್ನಾಟಕದ ಬಡ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ತಾವು ತೋರುವ ಸೈದ್ಧಾಂತಿಕ ಬದ್ಧತೆ, ನಿಷ್ಠೆಯನ್ನು, ನಿಮಗೆ ಮತ ನೀಡಿ ಗೆಲ್ಲಿಸಿ, ಅಧಿಕಾರ ಕೊಟ್ಟಿರುವ ಕಲ್ಯಾಣ ಕರ್ನಾಟಕದ ಜನತೆಗೂ, ಅಲ್ಲಿನ ಶಾಲೆಗಳ ಅಭಿವೃದ್ಧಿಗೂ ಸ್ವಲ್ಪ ತೋರಿಸಿ ಸ್ವಾಮಿ.

ಕಲ್ಯಾಣ ಕರ್ನಾಟಕದ ಜನತೆಗೆ ನೀಡಬೇಕಾದ ಕನಿಷ್ಠ ಮೂಲಸೌಕರ್ಯದ ಕರ್ತವ್ಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದೀರಿ. ಬಡ ಮಕ್ಕಳ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ, ಮೊದಲು ಆ ಶಾಲೆಗಳನ್ನು ಸರಿಪಡಿಸಿ! ಎಂದು ಆಗ್ರಹಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING : ವಿಜಯೇಂದ್ರರನ್ನು ‘ಕಿತ್ತು ಬಿಸಾಕಿ’ ಎಂದರಾ ಮಾಜಿ ಸಿಎಂ ಸದಾನಂದ ಗೌಡ ? ಸಂಚಲನ ಸೃಷ್ಟಿಸಿದ ವೈರಲ್ ಆಡಿಯೋ |WATCH VIDEOBIG NEWS: ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಡಿ.ವಿ.ಸದಾನಂದಗೌಡಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಉಚ್ಚಾಟನೆಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಯಾವಾಗ ರೀಲ್ಸ್ ಮಾಡ್ತೀರಾ ಸಚಿವ ಕೃಷ್ಣಬೈರೇಗೌಡ ಅವರೇ? ಆರ್.ಅಶೋಕ್ ಪ್ರಶ್ನೆಮುಂಗಾರು ಬೆಳೆ ವಿಮೆ ನೋಂದಣಿ ಆರಂಭ ; ರೈತರು ಶೀಘ್ರ ನೋಂದಾಯಿಸಿಕೊಳ್ಳುವಂತೆ ಮನವಿ.!SHOCKING : ಪತ್ನಿ ಹಾಗೂ ಕುಟುಂಬದವರಿಂದ ಮಾನಸಿಕ ಕಿರುಕುಳ ಆರೋಪ ; ವಿಡಿಯೋ ಪೋಸ್ಟ್ ಮಾಡಿ ಪತಿ ಆತ್ಮಹತ್ಯೆ |WATCH VIDEOದಯವಿಟ್ಟು ವದಂತಿಗಳನ್ನು ನಿಲ್ಲಿಸಿ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ : ಭಾವನಾತ್ಮಕ ಪೋಸ್ಟ್ ಮೂಲಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್BREAKING: ತಹಶಿಲ್ದಾರ್ ಜೀಪ್ ಡಿಕ್ಕಿ: ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವುಕಾಲೇಜು ಆರಂಭಗೊಂಡು ಹಲವು ದಿನ ಕಳೆದರೂ ಇನ್ನೂ ಪಿಯು ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕBREAKING: ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ: ಡಿ.ವಿ.ಸದಾನಂದಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್