LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್: ಇಂಗ್ಲೆಂಡ್ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಹೊರಗೆ?

ಬೆಂಗಳೂರು: ಮುಂದಿನ ತಿಂಗಳು ಜುಲೈ 1 ರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಹೈವೋಲ್ಟೇಜ್ ಕ್ರಿಕೆಟ್ ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಹೊರಗುಳಿಯಲಿದ್ದಾರೆ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಳ್ಳಲು ಪಾಂಡ್ಯಗೆ ಮತ್ತಷ್ಟು ಕಾಲಾವಕಾಶ ಬೇಕಾಗಿರುವುದರಿಂದ, ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ (BCCI) ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಬಲವಾದ ಮೂಲಗಳು ವರದಿ ಮಾಡಿವೆ.

2026ರ ಐಪಿಎಲ್ (IPL 2026) ಪಂದ್ಯಗಳ ವೇಳೆ ಹಾರ್ದಿಕ್ ಪಾಂಡ್ಯ ಭೀಕರ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಇಂಜುರಿ ಕಾರಣದಿಂದಲೇ ಅವರು ಮುಂಬಯಿ ಇಂಡಿಯನ್ಸ್ ತಂಡದ ಕೆಲ ಪ್ರಮುಖ ಪಂದ್ಯಗಳನ್ನೂ ತಪ್ಪಿಸಿಕೊಂಡಿದ್ದರು. ಆದಾಗ್ಯೂ, ಅವರನ್ನು ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತಾದರೂ, ಸಂಪೂರ್ಣ ಫಿಟ್‌ನೆಸ್ ಇಲ್ಲದ ಕಾರಣ ಕೊನೆ ಕ್ಷಣದಲ್ಲಿ ಕೈಬಿಡಲಾಗಿತ್ತು.

ಇಂಗ್ಲೆಂಡ್ ಸರಣಿಗೂ ಮುನ್ನ ಬೆಂಗಳೂರಿನ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ (ಬೆಂಗಳೂರು ಎನ್‌ಸಿಎ) ಕೇಂದ್ರದಲ್ಲಿ ಕಠಿಣ ತರಬೇತಿ ಮತ್ತು ರಿಹ್ಯಾಬ್ ಪ್ರಕ್ರಿಯೆಗೆ ಪಾಂಡ್ಯ ಒಳಗಾಗಿದ್ದರು. ಆದರೆ, ಅಲ್ಲಿ ನಡೆಸಲಾದ ಫಿಟ್‌ನೆಸ್ ಟೆಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಫೇಲ್ ಆಗಿದ್ದಾರೆ ಬೆನ್ನುನೋವಿನ ಜೊತೆಗೆ ಅವರಿಗೆ ಕ್ವಾಡ್ರೈಸ್ಪ್ಸ್ (Quadriceps) ಗಾಯವೂ ಆಗಿರುವುದು ಚೇತರಿಕೆಗೆ ಹಿನ್ನಡೆಯಾಗಿದೆ.

ಏನಿದು ಬಿಸಿಸಿಐ ನೀಡಿದ್ದ 10 ಓವರ್‌ ಟಾರ್ಗೆಟ್?

ಮುಂಬರುವ ಏಕದಿನ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಹಾರ್ದಿಕ್ ಪಾಂಡ್ಯಗೆ ಒಂದು ಕಠಿಣ ಕಂಡೀಷನ್ ಹಾಕಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಬೇಕಾದರೆ ಪಾಂಡ್ಯ ಕಡ್ಡಾಯವಾಗಿ ಪಂದ್ಯವೊಂದರಲ್ಲಿ 10 ಓವರ್‌ಗಳ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಇತ್ತೀಚಿನ ಪ್ರಾಕ್ಟೀಸ್ ಸೆಷನ್‌ಗಳಲ್ಲಿ ಬೆನ್ನುನೋವಿನ ಕಾರಣದಿಂದ ಅವರಿಗೆ ದೀರ್ಘಾವಧಿಯವರೆಗೆ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅವರು 10 ಓವರ್‌ಗಳ ಕೋಟಾ ಪೂರೈಸಲು ಸಂಪೂರ್ಣ ವಿಫಲರಾಗಿದ್ದಾರೆ.

ಹೀಗಾಗಿ, ಅವರು ಕೇವಲ ಬ್ಯಾಟರ್ ಆಗಿ ಅಲ್ಲದೆ, ಪಕ್ಕಾ ಆಲ್​ರೌಂಡರ್ ಆಗಿ ಫಿಟ್ ಆದ ಮೇಲಷ್ಟೇ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲು ಮ್ಯಾನೇಜ್‌ಮೆಂಟ್ ಪ್ಲಾನ್ ಮಾಡಿದೆ. ಇವರು ಪೂರ್ತಿ ಫಿಟ್ ಆದ್ರೆ ಮಾತ್ರ 2027ರ ಏಕದಿನ ವಿಶ್ವಕಪ್ ಆಡುವುದು ಖಚಿತವಾಗಲಿದೆ. ಅಲ್ಲಿಯವರೆಗೆ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಭಾಗವಾಗಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದಲೂ ಇವರಿಗೆ ರೆಸ್ಟ್ ನೀಡಲಾಗಿದೆ.

ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಬಿಗ್ ರಿಲೀಫ್ ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಜೊತೆಯಲ್ಲೇ ಅಫ್ಘಾನಿಸ್ತಾನ ಸರಣಿ ತಪ್ಪಿಸಿಕೊಂಡಿದ್ದ ಕಿಂಗ್ ವಿರಾಟ್ ಕೊಹ್ಲಿ (Virat Kohli) ಇಂಗ್ಲೆಂಡ್ ಸರಣಿಗೆ ಲಭ್ಯರಾಗಲಿದ್ದಾರೆ. ಐಪಿಎಲ್ 2026 ರ ಫೈನಲ್ ಪಂದ್ಯದ ವೇಳೆ ಕೊಹ್ಲಿ ಮಂಡಿರಜ್ಜು (Hamstring) ಗಾಯಕ್ಕೆ ಒಳಗಾಗಿದ್ದರು. ಆದರೆ ಈಗ ಕೊಹ್ಲಿ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಬಿಸಿಸಿಐನಿಂದ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದು ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಮತ್ತು ಹಾರ್ದಿಕ್‌ ಅನುಪಸ್ಥಿತಿಯಿದ್ದಾಗ ಯಶಸ್ವಿ ಜೈಸ್ವಾಲ್ ಮತ್ತು ವೇಗಿ ಹರ್ಷಿತ್ ರಾಣಾ ಅವರಿಗೆ ಟೀಮ್‌ನಲ್ಲಿ ಚಾನ್ಸ್ ನೀಡಲಾಗಿತ್ತು. ಆದರೆ ಜೈಸ್ವಾಲ್ ಸಿಕ್ಕ ಅವಕಾಶದಲ್ಲಿ ಭರ್ಜರಿ ಪ್ರದರ್ಶನ ನೀಡಲು ವಿಫಲರಾದರು. ಇತ್ತ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿದ್ದ ಹರ್ಷಿತ್ ರಾಣಾ ಅವರನ್ನು ತಕ್ಷಣವೇ ಕಠಿಣ ಪಂದ್ಯಗಳಿಗೆ ಇಳಿಸುವುದು ಬೇಡ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದ್ದರಿಂದ ಅವರು ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಶೀಘ್ರದಲ್ಲೇ ಬಿಸಿಸಿಐ ಅಧಿಕೃತ ಟೀಮ್ ಇಂಡಿಯಾವನ್ನು ಪ್ರಕಟಿಸಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!