LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್.ಎಸ್.ಎಸ್ ನೋಂದಣಿ ಬಗ್ಗೆ ಮೋಹನ್ ಭಾಗವತ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ: ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

ನವದೆಹಲಿ: ಆರ್.ಎಸ್.ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ವಿವರ ಕೇಳಿರುವ ವಿಚಾರ ಇದೀಗ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಆರ್.​​​ಎಸ್​​.ಎಸ್​​​ನ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ ಇತರೆ ವಿವರ ನೀಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಅವರ ಪ್ರಶ್ನೆಗಳಿಗೆ ಆರ್‌.ಎಸ್‌.ಎಸ್‌ನವರು ಕಾನೂನಾತ್ಮಕವಾಗಿ ಉತ್ತರಿಸ್ತಾರೆ. ಸಂಘ ಸಂಸ್ಥೆ ಸ್ಥಾಪಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಆರ್‌.ಎಸ್‌.ಎಸ್‌ಗೆ ಮಾತ್ರ ಅವಕಾಶ ನೀಡಿಲ್ಲ. ಗ್ರಾಮೀಣ ಭಾಗದ ನಾಲ್ವರು ಯುವಕರು ಸೇರಿ ಸಂಘ ಕಟ್ಟಬಹುದು. ಸಂವಿಧಾನ ಇಲ್ಲದಾಗಲೂ, ಬ್ರಿಟಿಷರ ಕಾಲದಲ್ಲೂ ಕೆಲಸ ಮಾಡಿದೆ ಎಂದಿದ್ದಾರೆ.

ಸಂಘದ ಆಸ್ತಿ, ವಹಿವಾಟುಗಳು ನಿಯಮಗಳ ಅಡಿಯಲ್ಲಿ ನಡೆಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಇದೇ ಮೊದಲ ಅಲ್ಲ ಆಡಿಟ್ ಕೇಳ್ತಿರೋದು. ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಇನೋವೇಷನ್ ಮಾಡಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾನೇ ಮೊದಲು ನೋಂದಣಿ ಕೇಳುತ್ತಿದ್ದೇನೆ ಅಂದುಕೊಂಡರೆ ಅದು ತಪ್ಪು. ಈ ಹಿಂದೆ ಪಥಸಂಚಲನಕ್ಕೆ ವಿರೋಧಿಸಿದರು, ಕೋರ್ಟ್ ಅನುಮತಿ ನೀಡಿತು. ಪಥ ಸಂಚಲನಕ್ಕೆ ಮೊದಲು 500 ಜನ ಸೇರುವ ಜಾಗದಲ್ಲಿ ವಿರೋಧದ ಬಳಿಕ 5000 ಜನ ಸೇರಿದರು. ವಿರೋಧಿಸಿದಷ್ಟು ಅದರ ಚಿಂತನೆಗಳು ಬಲಿಷ್ಠವಾಗುತ್ತವೆ, ಇದಕ್ಕೆ ಸ್ವಾಗತಿಸುತ್ತೇನೆ ಎಂದರು.

ದೇಶದ ಸಂವಿಧಾನದ ಅಡಿಯಲ್ಲಿ ಆರ್‌.ಎಸ್‌.ಎಸ್ ಕೆಲಸ ಮಾಡುತ್ತಿದೆ. ಸಂವಿಧಾನದ ಮೇಲೆ ಎಂದು ಕೆಲಸ ಮಾಡುವ ಜನರು, ಸಂಘಟನೆ ಮಾಡುವವರು ಯಾರು ಎಂದು ಗೊತ್ತಿದೆ, ನೋಂದಣಿ ಬಗ್ಗೆ ಚರ್ಚೆ ಆಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಾನೂನು ಸಲಹೆ ಪಡೆಯಬೇಕಿತ್ತು. ಇದಕ್ಕೆ ಆರ್‌.ಎಸ್‌.ಎಸ್ ಮತ್ತು ಜನರು ಮುಂದೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!