ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಮಹತ್ವಾಕಾಂಕ್ಷೆಯ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಗ್ಯಾರಂಟಿಗಳಲ್ಲಿ ಇದೀಗ ಭಾರಿ ಬದಲಾವಣೆ ತರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ. ಯೋಜನೆಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಅಕ್ರಮ ಹಾಗೂ ನಕಲಿ ಫಲಾನುಭವಿಗಳಿಗೆ ಬ್ರೇಕ್ ಹಾಕಲು ಈಗಾಗಲೇ ಸೌಲಭ್ಯ ಪಡೆಯುತ್ತಿರುವವರೂ ಸೇರಿದಂತೆ ಎಲ್ಲ ಅರ್ಹರು ಮತ್ತೆ ಹೊಸದಾಗಿ ಮರು ಅರ್ಜಿ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸುತ್ತಿದೆ!
ವಿಧಾನಸೌಧದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಹಾಗೂ ಎಸ್‌ಪಿಗಳೊಂದಿಗೆ ನಡೆಸಿದ ಸುದೀರ್ಘ 7 ಗಂಟೆಗಳ ಹೈ-ವೋಲ್ಟೇಜ್ ಸಭೆಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಈ ಬಿಗ್ ಶಾಕಿಂಗ್ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಷ್ಟಕ್ಕೂ ಈ ಹೊಸ ನಿಯಮಗಳೇನು? ಮರು ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ ನೋಡಿ:
ಅಕ್ರಮಕ್ಕೆ ಬ್ರೇಕ್: ಮರು ಅರ್ಜಿ ಸಲ್ಲಿಸುವುದರ ಹಿಂದಿನ ಅಸಲಿ ಕಾರಣಗಳೇನು?
ಸರ್ಕಾರದ ಆಂತರಿಕ ತನಿಖೆ ಮತ್ತು ನೈಜತೆ ಪರಿಶೀಲನೆ ನಡೆಸಿದಾಗ ನೂರಾರು ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗುತ್ತಿರುವುದು ಪತ್ತೆಯಾಗಿದೆ.
ನಕಲಿ ಅಕೌಂಟ್‌ಗಳ ಹಾವಳಿ: ಪ್ರಸ್ತುತ 1.28 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ ಸುಮಾರು 4.30 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರು (Tax Payers) ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ
ಮೃತರ ಹೆಸರಲ್ಲಿ ಲೂಟಿ: ಮೃತಪಟ್ಟ ಮಹಿಳೆಯರ ಖಾತೆಗಳಿಗೂ ಇನ್ನೂ ಪ್ರತಿ ತಿಂಗಳು ₹2,000 ಹಣ ಜಮೆಯಾಗುತ್ತಿದ್ದು, ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಹಣ ದುರ್ಬಳಕೆಯಾಗಿದೆ. ಯಾರದ್ದೋ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಿ ಅಕ್ರಮ ಎಸಗಲಾಗುತ್ತಿದೆ.
ಗೃಹಜ್ಯೋತಿ ದುರ್ಬಳಕೆ: ಕೆಲವರು ಒಂದಕ್ಕಿಂತ ಹೆಚ್ಚು (ಐದಾರು) ಮೀಟರ್‌ಗಳಿಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ವಾಸದ ಮನೆ ಮತ್ತು ವ್ಯಾಪಾರ ಮಳಿಗೆ ಎರಡನ್ನೂ ಒಟ್ಟಿಗೆ ಹೊಂದಿರುವವರು ಉಚಿತ ಕರೆಂಟ್ ಪಡೆಯುತ್ತಿರುವುದಕ್ಕೆ ಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಕೇವಲ ವಾಸದ ಮನೆಗೆ ಮಾತ್ರ ಉಚಿತ ವಿದ್ಯುತ್ ಸೀಮಿತ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಫಲಾನುಭವಿಗಳು ನಿಜಕ್ಕೂ ಕರ್ನಾಟಕದವರೇ ಅಥವಾ ಹೊರ ರಾಜ್ಯದವರೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಹೊಸ ಅರ್ಜಿ ಪ್ರಕ್ರಿಯೆ ಹೇಗಿರಲಿದೆ? ಯಾವೆಲ್ಲಾ 8-10 ಪ್ರಶ್ನೆಗಳು ಇರಲಿವೆ?
ಮರು ಅರ್ಜಿ ಸಲ್ಲಿಸುವವರಿಗೆ ಈ ಬಾರಿ ಸರ್ಕಾರದಿಂದ ಹೊಸ ಗ್ಯಾರಂಟಿ ಕಾರ್ಡ್ ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಿದ್ಧಪಡಿಸಿರುವ ಹೊಸ ಅರ್ಜಿ ಪ್ರತಿಯಲ್ಲಿ ಸಿಎಂ ಗ್ರೀನ್ ಸಿಗ್ನಲ್ ನೀಡಲಿರುವ ಪ್ರಮುಖ ಪ್ರಶ್ನೆಗಳು ಮತ್ತು ದಾಖಲೆಗಳು ಇಲ್ಲಿವೆ:
ಮನೆಯ ಯಜಮಾನಿ ಯಾರು ಮತ್ತು ಅವರ ಆಧಾರ್ ಸಂಖ್ಯೆ?
ಮನೆಯ ಯಜಮಾನಿಯ ನಿಖರ ಬ್ಯಾಂಕ್ ಖಾತೆ ವಿವರಗಳು.
ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು?
ಮನೆಯ ಪತಿಯ ಹೆಸರು ಮತ್ತು ಅವರ ಆಧಾರ್ ಕಾರ್ಡ್ ವಿವರ.
ನಿಮ್ಮ ಬಳಿ APL ಕಾರ್ಡ್ ಇದೆಯಾ ಅಥವಾ BPL ಕಾರ್ಡ್ ಇದೆಯಾ?
ನೀವು ಐಟಿ (Income Tax) ಮತ್ತು ಜಿಎಸ್‌ಟಿ (GST) ಪಾವತಿದಾರರೇ?
ನಿಮ್ಮ ಕುಟುಂಬದ ಜಾತಿ ವಿವರಗಳು ಮತ್ತು ಇತರ ಸದಸ್ಯರ ಮಾಹಿತಿ.
ಇನ್ಮುಂದೆ ಬಯೋಮೆಟ್ರಿಕ್ ಮತ್ತು ಜಾತಿ ಪ್ರಮಾಣಪತ್ರದ RD ನಂಬರ್ ಕಡ್ಡಾಯ
ಗೃಹಲಕ್ಷ್ಮಿ ಯೋಜನೆಯಲ್ಲಿ ಸರ್ಕಾರ ಭಾರಿ ಮೇಜರ್ ಸರ್ಜರಿ ಮಾಡುತ್ತಿದ್ದು, ಇನ್ಮುಂದೆ ಹಣ ಬರಬೇಕಾದರೆ ಬಯೋಮೆಟ್ರಿಕ್ (ಹೆಬ್ಬೆಟ್ಟು, ಕಣ್ಣು ಅಥವಾ ಫೇಸ್ ಸ್ಕ್ಯಾನ್) ಕಡ್ಡಾಯವಾಗಿದೆ. ಕಡ್ಡಾಯ ದಾಖಲೆಗಳು: ಬಯೋಮೆಟ್ರಿಕ್‌ಗೆ ಆಧಾರ್ ಕಾರ್ಡ್ ಜೊತೆಗೆ ಮಹಿಳಾ ಇಲಾಖೆ ಈ ಹಿಂದೆ ನೀಡಿರುವ ‘Gruhalakshmi ID’ ಕೂಡ ಕಡ್ಡಾಯವಾಗಿರಲಿದೆ.
ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ವಿಶೇಷ ನಿಯಮ: ನೀವು ಪರಿಶಿಷ್ಟ ಜಾತಿ (SC) ಅಥವಾ ಪಂಗಡಕ್ಕೆ (ST) ಸೇರಿದವರಾಗಿದ್ದರೆ, ನಿಮ್ಮ ಜಾತಿ ಪ್ರಮಾಣಪತ್ರದಲ್ಲಿರುವ RD ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಸಂಪೂರ್ಣ ಫಾರ್ಮ್ ತುಂಬಿದ ನಂತರವೇ ಇನ್ಮುಂದೆ ಹಣ ಬರಲಿದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?:
ಸರ್ಕಾರ ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿ ಪ್ರಕಟಿಸಲಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.