LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

SHOCKING : ಭಾರತದಲ್ಲಿ ಮುಂದಿನ 6 ತಿಂಗಳಲ್ಲಿ 16,000ಕ್ಕೂ ಹೆಚ್ಚು ಸಾವು ಸಾಧ್ಯತೆ : ಭಯಾನಕ ವರದಿ ಬಹಿರಂಗ | Super EL Nino

ಬೆಂಗಳೂರು: ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಅಸಹಜ ಪ್ರಕ್ರಿಯೆಯಿಂದಾಗಿ ಈಕ್ವೆಡಾರ್ ಮತ್ತು ಪೆರು ಕರಾವಳಿಯಲ್ಲಿ ಹುಟ್ಟಿಕೊಂಡಿರುವ 'ಎಲ್-ನಿನೋ' ಎಫೆಕ್ಟ್ ಮುಂದಿನ ದಿನಗಳಲ್ಲಿ ಭಾರತಕ್ಕೆ ತೀವ್ರ ಸಂಕಷ್ಟ ತಂದೊಡ್ಡಲಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳು ಇದರ ಹೊಡೆತವನ್ನು ಹೆಚ್ಚಾಗಿ ಎದುರಿಸಲಿವೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಂಶೋಧನಾ ವಿಭಾಗದ 'ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್' ಅಧ್ಯಯನ ವರದಿ ಎಚ್ಚರಿಸಿದೆ. ಈ ತಾಪಮಾನ ವೈಪರೀತ್ಯದಿಂದಾಗಿ ಮುಂಬರುವ ಸೆಪ್ಟಂಬರ್ 2026 ರಿಂದ ಫೆಬ್ರವರಿ 2027ರ ಅವಧಿಯಲ್ಲಿ ಭಾರತ ಒಂದರಲ್ಲೇ ತಾಪಮಾನಕ್ಕೆ ಸಂಬಂಧಿಸಿದಂತೆ ಸುಮಾರು 15,800ಕ್ಕೂ ಹೆಚ್ಚು ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

ಜಾಗತಿಕವಾಗಿ ಭೂತಾಪಮಾನವು ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುತ್ತಿರುವುದು ಈ ತೀವ್ರ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಮುಂದಿನ 20 ವರ್ಷಗಳ ನಂತರ ಬರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದ ತಾಪಮಾನದ ತೀವ್ರ ಪರಿಸ್ಥಿತಿ ಈಗಲೇ ಎದುರಾಗುತ್ತಿದೆ. ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ ತೀವ್ರ ಬಿಸಿಲಿನ ದಿನಗಳ ಸಂಖ್ಯೆ ಶೇಕಡಾ 44ರಷ್ಟು ಹೆಚ್ಚಾಗಲಿದ್ದು, ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

ಈ ಹವಾಮಾನ ವೈಪರೀತ್ಯದ ಹೊಡೆತ ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ ಜಾಗತಿಕ ಮಟ್ಟದಲ್ಲೂ ಭಾರಿ ಅನಾಹುತ ಉಂಟುಮಾಡಲಿದೆ. ಒಟ್ಟಾರೆಯಾಗಿ ವಿಶ್ವದಾದ್ಯಂತ 4,50,000ಕ್ಕೂ ಹೆಚ್ಚು ಸಾವುಗಳು ಸಂಭವಿಸುವ ಭೀತಿಯಿದ್ದು, ಅದರಲ್ಲಿ ಸುಮಾರು 2,40,000 ಸಾವುಗಳು ಸೆಪ್ಟಂಬರ್ 2026 ರಿಂದ ಫೆಬ್ರವರಿ 2027ರ ಅವಧಿಯಲ್ಲೇ ಸಂಭವಿಸಲಿವೆ. ನೈಜೀರಿಯಾ ಮತ್ತು ಸುಡಾನ್‌ನಂತಹ ದೇಶಗಳಲ್ಲಿ ಇದರ ಪ್ರಭಾವ ಅತಿ ಹೆಚ್ಚಾಗಿರಲಿದ್ದು, ಜಾಗತಿಕವಾಗಿ ಎಲ್-ನಿನೋದಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಎಲ್-ನಿನೋ ಎಂಬುದು ಈಕ್ವೆಡಾರ್ ಮತ್ತು ಪೆರು ಭಾಗದ ಪೆಸಿಫಿಕ್ ಮಹಾಸಾಗರದ ನೀರಿನಲ್ಲಿ ಉಂಟಾಗುವ ಅಸಹಜ ಉಷ್ಣತೆಯ ಪ್ರಕ್ರಿಯೆಯಾಗಿದೆ. ಇದು ಭಾರತದ ಮುಂಗಾರು ಮಳೆಯ ಮೇಲೆ ನೇರ ಹಾಗೂ ನಕಾರಾತ್ಮಕ ಪರಿಣಾಮವನ್ನು ಬೀರುವುದರ ಜೊತೆಗೆ ದೇಶದಾದ್ಯಂತ ಉಷ್ಣಾಂಶವನ್ನು ತೀವ್ರವಾಗಿ ಹೆಚ್ಚಿಸಲಿದೆ. ಪರಿಣಾಮವಾಗಿ ಮಳೆ ಕೊರತೆ ಮತ್ತು ಹೆಚ್ಚುವರಿ ತಾಪಮಾನದ ಜೋಡಿ ಹೊಡೆತಕ್ಕೆ ಭಾರತೀಯ ಪ್ರದೇಶಗಳು ಸಿಲುಕಲಿವೆ.

ಭಾರತದಲ್ಲಿ ಎಲ್-ನಿನೋದಿಂದ ಉಂಟಾಗುವ ಸಾವಿನ ಪ್ರಮಾಣವು ಆರಂಭದಲ್ಲೇ ಗರಿಷ್ಠ ಮಟ್ಟ ತಲುಪುವ ಬದಲು, ಹಂತಹಂತವಾಗಿ ಏರಿಕೆಯಾಗಲಿದೆ. ವಿಶೇಷವಾಗಿ ಡಿಸೆಂಬರ್ 2026 ರಿಂದ ಫೆಬ್ರವರಿ 2027ರ ಅವಧಿಯಲ್ಲಿ ಸುಮಾರು 7,400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಜಗತ್ತಿನ ಇತರ ಪ್ರದೇಶಗಳಲ್ಲಿ ಇದರ ಭೀಕರತೆ ಕಾಲಕ್ರಮೇಣ ಕಡಿಮೆಯಾಗುತ್ತಾ ಬಂದರೂ, ಭಾರತದಲ್ಲಿ ಮಾತ್ರ ಇದರ ಅಪಾಯ ಸುಲಭವಾಗಿ ಕಡಿಮೆಯಾಗುವುದಿಲ್ಲ ಎಂದು ಈ ವರದಿಯನ್ನು ಸಿದ್ಧಪಡಿಸಿದ ಸಂಶೋಧಕರಾದ ಮೈಕಲ್ ಗ್ರೀನ್‌ಸ್ಟೋನ್, ಜೆನೆವಿವ್ ಮಾರಿಕಲ್ ಹಾಗೂ ಗ್ರೋವರ್ ಕೊಪೆಕ್ ಅಭಿಪ್ರಾಯಪಟ್ಟಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?