LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದಲ್ಲಿ ಬರ ನಿರ್ವಹಣೆಗೆ SDRF ನಿಧಿ ಬಿಡುಗಡೆ ಮಾಡಲಿ ನೋಡೋಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು: "ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ" ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ, ರಾಜ್ಯ ಸರ್ಕಾರ ಮೊದಲು SDRF ಫಂಡ್ ಬಿಡುಗಡೆ ಮಾಡಿ ಬಳಿಕ NDRF ನಿಧಿಗೆ ಕೇಂದ್ರವನ್ನು ಕೇಳಲಿ ಎಂದರು.

ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದಲ್ಲಿ SDRF ಫಂಡ್ ನೀಡಿ ಆಮೇಲೆ ಕೇಂದ್ರವನ್ನು ಕೇಳುತ್ತಿದ್ದರು. ಮುಖ್ಯಮಂತ್ರಿ ಶಿವಕುಮಾರ್ ಹಳೆಯ ದಾಖಲೆಗಳನ್ನೊಮ್ಮೆ ತೆರೆದು ನೋಡಲೆಂದು ಕಿವಿಮಾತು ಹೇಳಿದರು.

SDRF ನಿಧಿ ಸಹ ಮುಗಿಸಿದ್ದಾರೆ: ರೈತರಿಗೆ ನೆರವಾಗಲು SDRF ಫಂಡೇ ಇಲ್ಲ ಇವರಲ್ಲಿ. ಅದನ್ನೂ ತಿಂದು ಖಾಲಿ ಮಾಡಿದ್ದಾರೆ. ತಮ್ಮಲ್ಲಿ ಹಣವಿಲ್ಲ ಎಂಬ ಸತ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು.

ರಾಜೀನಾಮೆಗೆ ಮುಂದಾದ ಶಾಸಕರ ಕ್ಷೇತ್ರ ಮಾತ್ರ ಬರ ಪಟ್ಟಿಗೆ: ಈ ಸರ್ಕಾರದಲ್ಲಿ ಶಾಸಕರು ರಾಜೀನಾಮೆಗೆ ಮುಂದಾದರೆ ಆ 'ತಾಲೂಕು ಬರಪೀಡಿತ' ಪಟ್ಟಿಗೆ ಸೇರಿಸಲಾಗುತ್ತಿದೆ. ಇದು ಸರ್ಕಾರ ನಡೆಸುವ ರೀತಿಯೇ? ಎಂದು ಜೋಶಿ ಪ್ರಶ್ನಿಸಿದರು.

ಕರ್ನಾಟಕದ ಹಿತಕ್ಕೆ ಕೇಂದ್ರ ಯಾವತ್ತೂ ಬದ್ಧ: ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್ ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕ ಜನರ ಹಿತಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತದೆ. NDRF ತಂಡ ಬರ ಅಧ್ಯಯನ ಬಳಿಕ ನೆರವಿನ ಬಗ್ಗೆ ತೀರ್ಮಾನಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ಸರ್ಕಾರ ದಿವಾಳಿಯನ್ನು ಆರ್ಥಿಕ ಇಲಾಖೆಯೇ ತೆರೆದಿಟ್ಟಿದೆ: ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿರುವುದನ್ನು ಸ್ವತಃ ಆರ್ಥಿಕ ಇಲಾಖೆಯೇ ತೆರೆದಿಟ್ಟಿದೆ. ಯಾವುದೇ ಯೋಜನೆಗೂ ಹಣವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ರಾಜ್ಯ ಸರ್ಕಾರ ಮೊದಲು ದಿವಾಳಿ ಅಂಚಿನಿಂದ ಹೊರ ಬರಲಿ ಎಂದು ಸಲಹೆ ನೀಡಿದರು.

ಪ್ರಮುಖ ಹುದ್ದೆಗಳು ಹರಾಜು: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರಮುಖ ಹುದ್ದೆಗಳು ಹರಾಜಾಗುತ್ತಿವೆ. ರಾಹುಲ್ ಗಾಂಧಿಗೆ ATM ಆಗಿ ಕೆಲಸ ಮಾಡುತ್ತಿದೆ ಈ ಸರ್ಕಾರ. ಒಬ್ಬ ತಹಶೀಲ್ದಾರ್ ಕೇವಲ 2 ಎಕರೆ ಜಮೀನು ದಾಖಲೆ ಸರಿಪಡಿಸಲು 50 ಲಕ್ಷ ಲಂಚ ತೆಗೆದುಕೊಂಡಿದ್ದಾರೆ. ಇನ್ನು ಗುತ್ತಿಗೆದಾರರು ಬಿಲ್ ಪಾವತಿಗೆ ಮುಂಗಡ ಕೊಟ್ಟಿದ್ದಾರೆ ಅಂದರೆ ಭ್ರಷ್ಟಾಚಾರ ಅದೆಷ್ಟು ಬಲಿಷ್ಠವಾಗಿದೆ? ಎಂದು ತೀಕ್ಷ್ಣವಾಗಿ ಹೇಳಿದರು.

ಕಸ್ತೂರಿ ರಂಗನ್ ವರದಿ; ಈಗೇಕೆ ಕೇಂದ್ರದ ಮೇಲೆ ಒತ್ತಡ?: ಇನ್ನು ಕಸ್ತೂರಿ ರಂಗನ್ ವರದಿ ಕುರಿತು ಈಗ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸಲು ನೋಡುತ್ತಿದ್ದಾರೆ. ಆದರೆ, ಇವರ ಸರ್ಕಾರ ಇದ್ದಾಗ ಏನು ಕತ್ತೆ ಕಾಯುತ್ತಿದ್ದರೆ? ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಕೇಂದ್ರ ಸರ್ಕಾರ ಯಾವತ್ತೂ ಕರ್ನಾಟಕದ ಜನರ ಹಿತಕ್ಕೆ ಬದ್ಧವಾಗಿದೆ. ಜನರ ಹಿತದೃಷ್ಟಿಯಿಂದ ಪರಿಸರ ಅಧ್ಯಯನ, ತಜ್ಞರ ಸಲಹೆ ಪಡೆದು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಮೋದಿ ಏಕೆ ಸೋಲಲಿಲ್ಲ ಎನ್ನುವುದು ಹುಚ್ಚು ಪ್ರಶ್ನೆ: ರಾಹುಲ್ ಗಾಂಧಿ, ಮೋದಿ ಅವರೇಕೆ ಸೋಲಲಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಇದೆಂಥ ಹುಚ್ಚು ಪ್ರಶ್ನೆ ಎಂದು ಟೀಕಿಸಿದ ಸಚಿವ ಜೋಶಿ, ನಿಮ್ಮ ಸೋಲನ್ನು ಮೋದಿ ಮೇಲೇಕೆ ಹಾಕುತ್ತೀರಿ?. ತಮಿಳುನಾಡು, ಕರ್ನಾಟಕ, ಜಾರ್ಖಂಡ್, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಏಕೆ ಸೋಲಲಿಲ್ಲ? ಎಂದು ತಿರುಗೇಟು ನೀಡಿದರು.

ಮುತ್ತು ರತ್ನದಂತಹ ನಾಯಕ: ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಮತ್ತು-ರತ್ನದಂತಹ ನಾಯಕ. ಚುನಾವಣೆ ವೇಳೆ ವಿದೇಶಕ್ಕೆ ಹೋಗಿ ಕುಳಿತುಕೊಳ್ಳುತ್ತಾರೆ ಎಂದು ಜೋಶಿ ಲೇವಡಿ ಮಾಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!