LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ವಾಹನ ಮಾರಾಟ ಮಾಡಿದ್ದೀರಾ ? R.C ವರ್ಗಾವಣೆ ಮಾಡದಿದ್ದರೆ ಪೊಲೀಸ್ ಕೇಸ್; RTO ನಿಯಮಗಳೇನು?

ನಿಮ್ಮ ವಾಹನವನ್ನು ಮಾರಾಟ ಮಾಡಿದ ಬಳಿಕ ಆರ್‌ಸಿ ವರ್ಗಾವಣೆ ಮಾಡಿಸುವುದನ್ನು ಮರೆತಿದ್ದೀರಾ? ಹಾಗಿದ್ದರೆ ಎಚ್ಚರ. ವಾಹನದ ಮಾಲೀಕತ್ವವನ್ನು ಸಾರಿಗೆ ಇಲಾಖೆ ದಾಖಲೆಗಳಲ್ಲಿ ವರ್ಗಾವಣೆ ಮಾಡದಿದ್ದರೆ, ಅಪಘಾತ, ಸಂಚಾರ ನಿಯಮ ಉಲ್ಲಂಘನೆ ಅಥವಾ ಯಾವುದೇ ಅಪರಾಧ ನಡೆದ ಸಂದರ್ಭದಲ್ಲಿ ಕಾನೂನು ತೊಡಕು ಎದುರಾಗಬಹುದು. ಹೀಗಾಗಿ ವಾಹನ ಮಾರಾಟ ಮಾಡಿದ ಕೂಡಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆರ್‌ಸಿ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ನಿಮ್ಮ ಹಳೆಯ ಬೈಕ್, ಕಾರು ಅಥವಾ ಯಾವುದೇ ವಾಹನವನ್ನು ಮಾರಾಟ ಮಾಡಿದ ಬಳಿಕ ಹಣ ಕೈಗೆ ಬಂದ ತಕ್ಷಣ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಹಲವರು ಭಾವಿಸುತ್ತಾರೆ. ಆದರೆ, ಸಾರಿಗೆ ಇಲಾಖೆಯ ದಾಖಲೆಗಳಲ್ಲಿ ಮಾಲೀಕತ್ವ ಬದಲಾವಣೆ ಆಗುವವರೆಗೆ ಕಾನೂನು ಪ್ರಕಾರ ಆ ವಾಹನ ಹಳೆಯ ಮಾಲೀಕರ ಹೆಸರಿನಲ್ಲೇ ಇರುತ್ತದೆ ಎಂಬುದನ್ನು ಹಲವರು ಮರೆಯುತ್ತಾರೆ. ಆ ವಾಹನದಿಂದ ಅಪಘಾತ ಸಂಭವಿಸಿದರೂ, ಸಂಚಾರ ನಿಯಮ ಉಲ್ಲಂಘನೆಗೆ ಚಾಲನ್ ಬಂದರೂ ಅಥವಾ ಯಾವುದೇ ಅಪರಾಧಕ್ಕೆ ವಾಹನ ಬಳಸಿದರೂ, ಪೊಲೀಸರು ಆರ್‌ಸಿಯಲ್ಲಿ ದಾಖಲಾಗಿರುವ ಮಾಲೀಕರಿಗೇ ನೋಟಿಸ್ ಕಳುಹಿಸಬಹುದು.

ಹೀಗಾಗಿ ಹಳೆಯ ವಾಹನವನ್ನು ಮಾರಾಟ ಮಾಡಿದ ಕೂಡಲೇ ಮಾಲೀಕತ್ವ ವರ್ಗಾವಣೆ (Ownership Transfer) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಂತ ಮುಖ್ಯ.

ಆರ್‌ಸಿ ವರ್ಗಾವಣೆ ಪ್ರಕ್ರಿಯೆ, ಅಗತ್ಯ ದಾಖಲೆಗಳು

ವಾಹನವನ್ನು ಮಾರಾಟ ಮಾಡಿದವರು ಮತ್ತು ಖರೀದಿಸಿದವರು ಫಾರಂ-29 ಮತ್ತು ಫಾರಂ-30 ಅನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಸಾರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು, ಮೂಲ ಆರ್‌ಸಿ, ವಿಳಾಸದ ಪುರಾವೆ, ಗುರುತಿನ ಚೀಟಿ, ವಿಮೆ ಹಾಗೂ PUC ಪ್ರಮಾಣಪತ್ರಗಳನ್ನು RTO ಕಚೇರಿಯಲ್ಲಿ ಸಲ್ಲಿಸಬೇಕು.ಖರೀದಿದಾರರು RTO ಕಚೇರಿಗೆ ಖುದ್ದಾಗಿ ಹಾಜರಾಗಿ ಫೋಟೋ, ಡಿಜಿಟಲ್ ಸಹಿ ಹಾಗೂ ಬೆರಳಚ್ಚು ನೀಡಬೇಕಾಗುತ್ತದೆ.

ಒಂದು ವೇಳೆ ವಾಹನದ ಮೇಲೆ ಸಾಲ ಅಥವಾ ಫೈನಾನ್ಸ್ ಇದ್ದರೆ, ಬ್ಯಾಂಕ್‌ನಿಂದ ‘ನೋ ಡ್ಯೂಸ್’ ಪತ್ರ ಪಡೆದು ಫಾರಂ-35 ಸಲ್ಲಿಸುವ ಮೂಲಕ ಹೈಪೋಥಿಕೇಶನ್‌ನ್ನು ತೆಗೆದುಹಾಕಬೇಕು.

ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ವಾಹನ ವರ್ಗಾವಣೆ

ಬೇರೆ ಜಿಲ್ಲೆಯ ವ್ಯಕ್ತಿಯೊಬ್ಬರು ವಾಹನವನ್ನು ಖರೀದಿಸಿದ್ದರೆ, ಮೊದಲು ವಾಹನ ನೋಂದಣಿಯಾಗಿರುವ RTO ಕಚೇರಿಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು. ನಂತರ ಹೊಸ ಜಿಲ್ಲೆಯ RTO ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಅದೇ ರೀತಿ, ಬೇರೆ ರಾಜ್ಯದ ವ್ಯಕ್ತಿ ವಾಹನವನ್ನು ಖರೀದಿಸಿದರೆ, ಸ್ಥಳೀಯ ಪೊಲೀಸ್ ಠಾಣೆಯಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC) ಪಡೆಯುವುದು ಅಗತ್ಯವಾಗಬಹುದು. ವಾಹನದ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಬೇರೆ ರಾಜ್ಯದಲ್ಲಿ ನೋಂದಣಿಗೆ ಸಾರಿಗೆ ಇಲಾಖೆ ಅನುಮತಿ ನೀಡುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!