LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ನಡೆ ನಿಗೂಢ: ಯಾವ ಕ್ಷೇತ್ರದಿಂದ ಕಣಕ್ಕೆ?

ಹೊಸನಗರ: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಕರಡು ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಗ್ರಾಮೀಣ ರಾಜಕೀಯ ರಂಗು ಪಡೆದುಕೊಂಡಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್ ಅವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

​ಚುನಾವಣಾ ಕರಡು ಮೀಸಲಾತಿ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರ ನಡುವೆಯೇ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಜನಸಂಪರ್ಕ ಹಾಗೂ ಚುನಾವಣಾ ತಾಲೀಮು ಆರಂಭಿಸಿದ್ದಾರೆ. ಆದರೆ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸತತ ನಾಲ್ಕು ಬಾರಿ ಜಿ.ಪಂ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಅಪಾರ ರಾಜಕೀಯ ಅನುಭವ ಹೊಂದಿರುವ ಕಲಗೋಡು ರತ್ನಾಕರ್ ಅವರು ಈ ಬಾರಿ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

​ಮೀಸಲಾತಿ ತಂದಿತ್ತ ಅನಿಶ್ಚಿತತೆ:

ಕಲಗೋಡು ರತ್ನಾಕರ್ ಅವರು ರಿಪ್ಪನ್‌ಪೇಟೆ ಅಥವಾ ಹೊಸನಗರ (ಕಸಬಾ) ಜಿ.ಪಂ ಕ್ಷೇತ್ರಗಳಿಂದ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಪ್ರಕಟಿತ ಕರಡು ಪಟ್ಟಿಯಲ್ಲಿ ರಿಪ್ಪನ್‌ಪೇಟೆ ಕ್ಷೇತ್ರವು ಪರಿಶಿಷ್ಟ ಜಾತಿಗೆ ಹಾಗೂ ಹೊಸನಗರ (ಕಸಬಾ) ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದಾಗಿ ಅವರು ಈ ಹಿಂದೆ ಗುರುತಿಸಿಕೊಂಡಿದ್ದ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಗೆ ಬ್ರೇಕ್ ಬಿದ್ದಂತಾಗಿದೆ.

​ಹುಂಚ ಅಥವಾ ಕುಂಸಿ ಕಡೆಗೆ ಚಿತ್ತ?

ಪ್ರಸ್ತುತ ಹುಂಚ ಹಾಗೂ ಕುಂಸಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಿಂದುಳಿದ ವರ್ಗ 'ಎ'ಗೆ ಮೀಸಲಾಗಿವೆ. ಹೀಗಾಗಿ, ರತ್ನಾಕರ್ ಅವರು ಈ ಎರಡು ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡು ಕಣಕ್ಕಿಳಿಯಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಈಗಾಗಲೇ ಎರಡೂ ಕ್ಷೇತ್ರಗಳ ಅವರ ಬೆಂಬಲಿಗರು ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

​ಮೀಸಲಾತಿ ಪ್ರಕಟಣೆಯು ತಾಲೂಕಿನ ರಾಜಕೀಯ ಸಮೀಕರಣಗಳನ್ನೇ ಬದಲಿಸಿದ್ದು, ಹಿರಿಯ ಮುತ್ಸದ್ದಿ ಕಲಗೋಡು ರತ್ನಾಕರ್ ಅಂತಿಮವಾಗಿ ಯಾವ ಕ್ಷೇತ್ರದತ್ತ ಒಲವು ತೋರುತ್ತಾರೆ ಅಥವಾ ಅವರ ಮುಂದಿನ ರಾಜಕೀಯ ತಂತ್ರಗಾರಿಕೆ ಏನಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಪ್ರೀಂ ಕೋರ್ಟ್‌ಗೂ ತಟ್ಟಿದ ಪ್ರತಿಭಟನೆಯ ಬಿಸಿ..! ಸಿಜೆಐ ಸೂರ್ಯಕಾಂತ್ ಮಹತ್ವದ ನಿರ್ಧಾರಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಆರು ಜನ ಹೊಸ ಸದಸ್ಯರ ಸೇರ್ಪಡೆ: ಸರ್ಕಾರದಿಂದ ಆದೇಶ‘ರಾಷ್ಟ್ರಪತಿ ಪುರಾವೆ ಕೇಳಿದ್ದಾರೆ, ನಾವು ಕೊಡುತ್ತೇವೆ’; ನಿರಾಕರಣೆ ಬಂದಿದ್ದು PMO ಕಚೇರಿಯಿಂದ ಎಂದ ರಾಹುಲ್ ಗಾಂಧಿ!39 ವರ್ಷಗಳ ಬಳಿಕ ‘ಮಿಸ್ಟರ್ ಇಂಡಿಯಾ’ ಗೆಟಪ್‌ನಲ್ಲಿ ಕಂಗೊಳಿಸಿದ ಅನಿಲ್ ಕಪೂರ್: ಅಂದಿನ ಬಟ್ಟೆಗಳು ಇಂದಿಗೂ ಪರ್ಫೆಕ್ಟ್ ಫಿಟ್!ಚಿನ್ನದ ಬೆಲೆ ₹2.82 ಲಕ್ಷ ತಲುಪುತ್ತಾ? ಬಾಬಾ ವಂಗಾ ಭವಿಷ್ಯವಾಣಿ ಹಿಂದಿನ ಸತ್ಯವೇನು?ಸಿಇಸಿ ವಿರೋಧಿ ಪ್ರತಿಭಟನೆ ವರದಿ ಮಾಡುತ್ತಿದ್ದ 12ಕ್ಕೂ ಹೆಚ್ಚು ಪತ್ರಕರ್ತರ ಬಂಧನBREAKING : ಷೇರುಪೇಟೆಯಲ್ಲಿ ಸೆನ್ಸೆಕ್ಸ್ 900 ಕ್ಕೂ ಹೆಚ್ಚು ಅಂಕ ಕುಸಿತ , 22,400ರ ಕೆಳಗೆ ನಿಫ್ಟಿ, ಆತಂಕದಲ್ಲಿ ಹೂಡಿಕೆದಾರರು !ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ನಡೆ ನಿಗೂಢ: ಯಾವ ಕ್ಷೇತ್ರದಿಂದ ಕಣಕ್ಕೆ?ಆರಂಭದಲ್ಲಿ 2 ಕೆಜಿ, ಈಗ ದಿನಕ್ಕೆ 400 ಕೆಜಿ ದಾಲ್ಚಾ ರೈಸ್ ಸೇಲ್: ನಾಗ್‌ಪುರದ ಈ ಹೋಟೆಲ್‌ನ ಸಕ್ಸೆಸ್ ಸ್ಟೋರಿ ವೈರಲ್!ಗಣಿಗಾರಿಕೆ ವಿವಾದ ; ಮಾಜಿ ಬಿಜೆಪಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು ; ವಿಡಿಯೋ ವೈರಲ್ |WATCH VIDEO