LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು 'ಇಂದಿರಾ ಕ್ಯಾಂಟಿನ್‌'ಗೆ ಪೌರಾಯುಕ್ತ ವಾಸೀಂ ದಿಢೀರ್ ಭೇಟಿ: ಉಪಾಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲನೆ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಇಂದಿರಾ ಕ್ಯಾಂಟಿನ್‌ಗೆ ನಗರಸಭೆ ಪೌರಾಯುಕ್ತರಾದ ವಾಸೀಂ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಸ್ವತಃ ಅವರೇ ಸಾರ್ವಜನಿಕರೊಂದಿಗೆ ಕುಳಿತು ಉಪಾಹಾರ ಸೇವಿಸಿ, ಆಹಾರದ ರುಚಿ ಹಾಗೂ ಗುಣಮಟ್ಟವನ್ನು ಸ್ವತಃ ಪರೀಕ್ಷಿಸಿದರು.

​ಸಾರ್ವಜನಿಕರ ಊಟದ ಗುಣಮಟ್ಟದಲ್ಲಿ ರಾಜಿಯಿಲ್ಲ: ಪೌರಾಯುಕ್ತ ವಾಸೀಂ

​ಕ್ಯಾಂಟೀನ್‌ನ ಅಡುಗೆ ಕೋಣೆ, ಪಾತ್ರೆ ತೊಳೆಯುವ ಸ್ಥಳ ಹಾಗೂ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದ ಪೌರಾಯುಕ್ತರು, ಇಂದಿರಾ ಕ್ಯಾಂಟಿನ್ ಬಡವರು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಅನ್ನದಾಸರೆಯಾಗಿದೆ. ಇಲ್ಲಿ ಸಾರ್ವಜನಿಕರಿಗೆ ನೀಡುವ ಆಹಾರವು ಪೌಷ್ಟಿಕ ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದರು.

ಅಡುಗೆ ತಯಾರಿಸುವ ಸಿಬ್ಬಂದಿ ಕಡ್ಡಾಯವಾಗಿ ಶುಚಿತ್ವ ನಿಯಮಗಳನ್ನು ಪಾಲಿಸಬೇಕು. ಕುಡಿಯುವ ನೀರು ಶುದ್ಧವಾಗಿರಬೇಕು ಮತ್ತು ತ್ಯಾಜ್ಯವನ್ನು ಪ್ರತಿದಿನ ಸಕಾಲಕ್ಕೆ ವಿಲೇವಾರಿ ಮಾಡಬೇಕು ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

​ಹಿರಿಯೂರು ನಗರವನ್ನು ಮಾದರಿಯಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ

​ಇದೇ ಸಂದರ್ಭದಲ್ಲಿ ನಗರದ ನೈರ್ಮಲ್ಯ ಹಾಗೂ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, "ಹಿರಿಯೂರು ನಗರವನ್ನು ಸ್ವಚ್ಛ, ಸುಂದರ ಮತ್ತು ಹಸಿರು ನಗರವನ್ನಾಗಿ ರೂಪಿಸುವುದು ನಮ್ಮ ಪ್ರಮುಖ ಆದ್ಯತೆ. ನಗರಸಭೆ ವತಿಯಿಂದ ಮನೆ ಮನೆ ಕಸ ಸಂಗ್ರಹಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೇವಲ ನಗರಸಭೆಯಿಂದ ಮಾತ್ರ ಸ್ವಚ್ಛತೆ ಸಾಧ್ಯವಿಲ್ಲ; ಸಾರ್ವಜನಿಕರೂ ರಸ್ತೆ ಬದಿ ಹಾಗೂ ಚರಂಡಿಗಳಿಗೆ ಕಸ ಎಸೆಯದೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಿದರೆ ಮಾತ್ರ ಹಿರಿಯೂರನ್ನು ಜಿಲ್ಲೆಯಲ್ಲೇ ಮಾದರಿ ನಗರವನ್ನಾಗಿ ಮಾಡಲು ಸಾಧ್ಯ ಎಂದು ಮನವಿ ಮಾಡಿದರು.

​ಈ ವೇಳೆ ನಗರಸಭೆಯ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ಹಾಗೂ ಕ್ಯಾಂಟೀನ್ ನಿರ್ವಾಹಕರು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಷೇರುಪೇಟೆಯಲ್ಲಿ ಸೆನ್ಸೆಕ್ಸ್ 500 ಅಂಕ ಪತನ, 22,400ರ ಕೆಳಗೆ ನಿಫ್ಟಿ; ಕುಸಿತಕ್ಕೆ 4 ಕಾರಣಗಳಿವುBREAKING : ಮರಾಠಿ ಚಿತ್ರರಂಗಕ್ಕೆ ಮತ್ತೊಂದು ಆಘಾತ; ಖ್ಯಾತ ನಟಿ ಮಧು ಕಾಂಬಿಕರ್ ನಿಧನಶ್ರೀಮಂತ ರಾಷ್ಟ್ರಗಳ ಬಡವರ ಜೀವನಮಟ್ಟಕ್ಕಿಂತಲೂ ಕೆಳಗೆ ಭಾರತದ ಶ್ರೀಮಂತರ ಸ್ಥಿತಿ ವಿಶ್ವಬ್ಯಾಂಕ್ ವರದಿ ಕಳವಳಕಾರಿರಾಹುಲ್ ಗಾಂಧಿ ಭೇಟಿಗೆ ಸಿಜೆಐ ನಕಾರ; ಸುಪ್ರೀಂ ಕೋರ್ಟ್‌ಗೆ ಇಂಡಿಯಾ ಬ್ಲಾಕ್ ಮೆರವಣಿಗೆಧೈರ್ಯವಿದ್ದರೆ ಪೂರ್ಣ ವಿಡಿಯೋ ಬಿಡುಗಡೆ ಮಾಡಿ’: ದೆಹಲಿ ಪೊಲೀಸರಿಗೆ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಸವಾಲುಅಕ್ರಮವಾಗಿ ಗುರುದ್ವಾರ ಪ್ರವೇಶ: ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಶಾಸಕರು, ನಾಯಕರ ವಿರುದ್ಧ FIR ದಾಖಲು‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್; ₹50 ಕೋಟಿ ಕ್ಲಬ್ ಸೇರಿದ ಸಿನಿಮಾಮತದಾರರ ಪಟ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಫೋಟೋ ಪತ್ತೆ! ವ್ಯಾಪಕ ಟೀಕೆಅಮಿತ್ ಶಾ ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ : ಬಿಕೆ ಹರಿಪ್ರಸಾದ್ ವಾಗ್ದಾಳಿ!“ಧೈರ್ಯವಿದ್ದರೆ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿ!” ದೆಹಲಿ ಪೊಲೀಸರಿಗೆ ಅಭಿಜೀತ್ ದೀಪ್ಕೆ ಸವಾಲು! |WATCH VIDEO