LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೊರಬ ತಾಲ್ಲೂಕಿನಲ್ಲೂ ‘ಬೀಗರೂಟ’ ನಿಷೇಧ: ದುಂದುವೆಚ್ಚಕ್ಕೆ ಕಡಿವಾಣ ಹಾಕಿದ ಚಿಕ್ಕಶಕುನ ಹಾಗೂ ಸೀಗೆಹಳ್ಳಿ ಗ್ರಾಮಸ್ಥರು

ಸೊರಬ : ಕುಟುಂಬಗಳನ್ನು ಸಾಲದ ಸುಳಿಯಿಂದ ಪಾರು ಮಾಡುವ ಮತ್ತು ಅದ್ದೂರಿ ಆಚರಣೆಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮಹತ್ವದ ಉದ್ದೇಶದಿಂದ ಸೊರಬ ತಾಲ್ಲೂಕಿನ ಚಿಕ್ಕಶಕುನ ಹಾಗೂ ಸೀಗೆಹಳ್ಳಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಬೀಗರೂಟವನ್ನು ನಿಷೇಧಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮದ ಬಳಿಕ, ಈಗ ಸೊರಬ ತಾಲ್ಲೂಕಿನಲ್ಲೂ ಈ ಮಾದರಿ ಹೆಜ್ಜೆ ಇಡಲಾಗಿದೆ.

ಮಲೆನಾಡಿನ ದೀವರು (ಈಡಿಗ) ಸಮುದಾಯದಲ್ಲಿ ಮದುವೆ ಸಂದರ್ಭದಲ್ಲಿ ನಡೆಯುವ ಬೀಗರೂಟದ ಆಚರಣೆಯು ವರ್ಷದಿಂದ ವರ್ಷಕ್ಕೆ ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಟ್ಟಿತ್ತು. ಬರಗಾಲ ಮತ್ತು ತೀವ್ರ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸಾಲ ಮಾಡಿ ಅದ್ದೂರಿ ಔತಣಕೂಟಗಳನ್ನು ಏರ್ಪಡಿಸುವುದು ಕುಟುಂಬಗಳ ಮೇಲೆ ಅಪಾರ ಆರ್ಥಿಕ ಹೊರೆಯನ್ನು ಹೊರಿಸುತ್ತಿತ್ತು. ಈ ದುಂದುವೆಚ್ಚದ ಪೈಪೋಟಿಗೆ ಅಂತ್ಯ ಹಾಡಲು ಗ್ರಾಮಸ್ಥರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಕುರಿತು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ಚಿಕ್ಕಶಕುನ ಮತ್ತು ಸೀಗೆಹಳ್ಳಿ ಗ್ರಾಮಸ್ಥರು, ಇನ್ಮುಂದೆ ಯಾವುದೇ ಕುಟುಂಬಗಳು ಅದ್ದೂರಿ ಬೀಗರೂಟ ನಡೆಸದಿರಲು ನಿರ್ಧರಿಸಿದ್ದಾರೆ. ಔತಣಕೂಟಕ್ಕಾಗಿ ಮಾಡುವ ಅನಗತ್ಯ ಖರ್ಚನ್ನು ಉಳಿಸಿ, ಆ ಹಣವನ್ನು ಕುಟುಂಬದ ಆರ್ಥಿಕ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಸರಳ ಆಚರಣೆಗಳಿಗೆ ಒತ್ತು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಈ ಗ್ರಾಮಗಳು, ಸೊರಬ ತಾಲ್ಲೂಕಿನಲ್ಲಿಯೇ ಸ್ವಯಂಪ್ರೇರಿತವಾಗಿ ಬೀಗರೂಟಕ್ಕೆ ಕಡಿವಾಣ ಹಾಕಿದ ಮೊದಲ ಗ್ರಾಮಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಸಭೆಯಲ್ಲಿ ಗ್ರಾಮದ ಮುಖಂಡರಾದ ಸಣ್ಣಪ್ಪ, ಕೆರಿಯಪ್ಪ, ವೀರಭದ್ರ, ಪರಶುರಾಮ, ವೈ.ಜಿ. ಗುರುಮೂರ್ತಿ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ : ಬಿಕೆ ಹರಿಪ್ರಸಾದ್ ವಾಗ್ದಾಳಿ!“ಧೈರ್ಯವಿದ್ದರೆ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿ!” ದೆಹಲಿ ಪೊಲೀಸರಿಗೆ ಅಭಿಜೀತ್ ದೀಪ್ಕೆ ಸವಾಲು! |WATCH VIDEOಹಿರಿಯೂರು 'ಇಂದಿರಾ ಕ್ಯಾಂಟಿನ್‌'ಗೆ ಪೌರಾಯುಕ್ತ ವಾಸೀಂ ದಿಢೀರ್ ಭೇಟಿ: ಉಪಾಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲನೆಬೆಂಗಳೂರಲ್ಲಿ KPCC ಕಚೇರಿಗೆ ಮುತ್ತಿಗೆ ಹಾಕಲು ಯತ್ನ : ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪೊಲೀಸ್ ವಶಕ್ಕೆ!ಬ್ಯಾಂಕ್ ಖಾತೆಗೆ ದಿಢೀರ್ ಹಣ ಜಮೆಯಾದರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ಖಾತೆಯೇ ಖಾಲಿ!SIR ವಿರುದ್ಧ ಕಾಂಗ್ರೆಸ್ ಸಮರದ ನಡುವೆ ‘ಸ್ಟಿಂಗ್ ಆಪರೇಷನ್ ಬಾಂಬ್’ ಸ್ಫೋಟಿಸಿದ ಡಿಕೆ ಶಿವಕುಮಾರ್; ಕರ್ನಾಟಕ ರಾಜಕೀಯದಲ್ಲಿ ಸಂಚಲನಕರ್ನಾಟಕಕ್ಕೆ ಮತ್ತೆ ಬರಗಾಲದ ಭೀತಿ: 13 ಪ್ರಮುಖ ಜಲಾಶಯಗಳಲ್ಲಿ ಕೇವಲ 69% ನೀರು ಸಂಗ್ರಹಹೊಸ VLF ಸ್ಟ್ರಾಡಾ ಎಲೆಕ್ಟ್ರಿಕ್ ಸ್ಕೂಟರ್‌ ಭಾರತದಲ್ಲಿ ಬಿಡುಗಡೆ: ವಿಶಿಷ್ಟ ವಿನ್ಯಾಸ; 250 ಕಿಮೀ ಸಾಮರ್ಥ್ಯBIG NEWS : ನಂದಿನಿ ಮಿಲ್ಕ್ ಪೌಡರ್ ಸಂಪೂರ್ಣ ಸುರಕ್ಷಿತ : 'FSSAI' ಲ್ಯಾಬ್ ರಿಪೋರ್ಟ್ ನಲ್ಲಿ ಬಹಿರಂಗ, ಗ್ರಾಹಕರು ನಿರಾಳ!ಅದಿತಿ ಬ್ರೇಕಪ್ ನಂತರವೂ ಸ್ನೇಹ, Soulmate ಸಿದ್ಧಾರ್ಥ್