LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಗಳೂರು ದಸರಾ ಸಂಭ್ರಮದ ನಡುವೆ ಪರೀಕ್ಷೆ: ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಗಳೂರು: ಕರಾವಳಿಯ ಪ್ರಮುಖ ಹಬ್ಬವಾದ ಮಂಗಳೂರು ದಸರಾ ಸಂಭ್ರಮದ ವಾತಾವರಣವಿರುವಾಗಲೇ, ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ ನಗರದ ಖ್ಯಾತ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜಿನ ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಯಾವುದೇ ರಜೆಯನ್ನು ನೀಡದೆ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಧರಣಿ ಕುಳಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕೂಡ ಸಾಥ್ ನೀಡಿದೆ.

ಪರೀಕ್ಷೆಯ ವೇಳಾಪಟ್ಟಿಯಿಂದಾಗಿ ದಸರಾ ಹಬ್ಬದ ಆಚರಣೆ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಹಬ್ಬದ ರಜೆ ನೀಡಿ ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮಂಡಳಿಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು. ಆದರೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸಿ, ಯಾವುದೇ ಸಕಾರಾತ್ಮಕ ಸ್ಪಂದನೆ ನೀಡದೆ ಆಡಳಿತ ಮಂಡಳಿ ಉದ್ದಟತನ ಪ್ರದರ್ಶಿಸುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ : ಬಿಕೆ ಹರಿಪ್ರಸಾದ್ ವಾಗ್ದಾಳಿ!“ಧೈರ್ಯವಿದ್ದರೆ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿ!” ದೆಹಲಿ ಪೊಲೀಸರಿಗೆ ಅಭಿಜೀತ್ ದೀಪ್ಕೆ ಸವಾಲು! |WATCH VIDEOಹಿರಿಯೂರು 'ಇಂದಿರಾ ಕ್ಯಾಂಟಿನ್‌'ಗೆ ಪೌರಾಯುಕ್ತ ವಾಸೀಂ ದಿಢೀರ್ ಭೇಟಿ: ಉಪಾಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲನೆಬೆಂಗಳೂರಲ್ಲಿ KPCC ಕಚೇರಿಗೆ ಮುತ್ತಿಗೆ ಹಾಕಲು ಯತ್ನ : ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪೊಲೀಸ್ ವಶಕ್ಕೆ!ಬ್ಯಾಂಕ್ ಖಾತೆಗೆ ದಿಢೀರ್ ಹಣ ಜಮೆಯಾದರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ಖಾತೆಯೇ ಖಾಲಿ!SIR ವಿರುದ್ಧ ಕಾಂಗ್ರೆಸ್ ಸಮರದ ನಡುವೆ ‘ಸ್ಟಿಂಗ್ ಆಪರೇಷನ್ ಬಾಂಬ್’ ಸ್ಫೋಟಿಸಿದ ಡಿಕೆ ಶಿವಕುಮಾರ್; ಕರ್ನಾಟಕ ರಾಜಕೀಯದಲ್ಲಿ ಸಂಚಲನಕರ್ನಾಟಕಕ್ಕೆ ಮತ್ತೆ ಬರಗಾಲದ ಭೀತಿ: 13 ಪ್ರಮುಖ ಜಲಾಶಯಗಳಲ್ಲಿ ಕೇವಲ 69% ನೀರು ಸಂಗ್ರಹಹೊಸ VLF ಸ್ಟ್ರಾಡಾ ಎಲೆಕ್ಟ್ರಿಕ್ ಸ್ಕೂಟರ್‌ ಭಾರತದಲ್ಲಿ ಬಿಡುಗಡೆ: ವಿಶಿಷ್ಟ ವಿನ್ಯಾಸ; 250 ಕಿಮೀ ಸಾಮರ್ಥ್ಯBIG NEWS : ನಂದಿನಿ ಮಿಲ್ಕ್ ಪೌಡರ್ ಸಂಪೂರ್ಣ ಸುರಕ್ಷಿತ : 'FSSAI' ಲ್ಯಾಬ್ ರಿಪೋರ್ಟ್ ನಲ್ಲಿ ಬಹಿರಂಗ, ಗ್ರಾಹಕರು ನಿರಾಳ!ಅದಿತಿ ಬ್ರೇಕಪ್ ನಂತರವೂ ಸ್ನೇಹ, Soulmate ಸಿದ್ಧಾರ್ಥ್