LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೆಹಲಿ ಪ್ರತಿಭಟನೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗಿ ಹಿನ್ನೆಲೆ, : ಉಡುಪಿ, ಮಂಗಳೂರು ಪ್ರವಾಸ ದಿಢೀರ್ ರದ್ದು!

ಬೆಂಗಳೂರು : ಅನಿವಾರ್ಯ ಕಾರಣಗಳಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಇಂದಿನ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಪ್ರವಾಸ ಕಾರ್ಯಕ್ರಮ ಅಧಿಕೃತವಾಗಿ ರದ್ದಾಗಿದೆ. ಈ ಕುರಿತು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಸರ್ಕಾರದ ಜಂಟಿ ಕಾರ್ಯದರ್ಶಿ ಬಿ.ಎಸ್. ಶ್ರೀಧರ್ ಅಧಿಕೃತ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ವಿವಾದಿತ ಎಸ್‌ಐಆರ್ (SIR) ನೀತಿಗಳನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 'ಇಂಡಿಯಾ' ಮೈತ್ರಿಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ನಿರ್ಣಾಯಕ ಹೋರಾಟದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಬೇಕಿರುವ ಕಾರಣದಿಂದ ಡಿ.ಕೆ. ಶಿವಕುಮಾರ್ ಅವರ ಕರಾವಳಿ ಪ್ರವಾಸವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕರೆಯ ಮೇರೆಗೆ ದೇಶದ ವಿವಿಧ ಭಾಗಗಳಿಂದ ಮುಖಂಡರು ಮತ್ತು ಕಾರ್ಯಕರ್ತರು ದೆಹಲಿಗೆ ತೆರಳುತ್ತಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಕ್ಷ-ಧರ್ಮದ ಭೇದ ಮರೆತು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರತಿಭಟನೆಗೆ ತೆರಳಲು ನಿರ್ಧರಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ : ಬಿಕೆ ಹರಿಪ್ರಸಾದ್ ವಾಗ್ದಾಳಿ!“ಧೈರ್ಯವಿದ್ದರೆ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿ!” ದೆಹಲಿ ಪೊಲೀಸರಿಗೆ ಅಭಿಜೀತ್ ದೀಪ್ಕೆ ಸವಾಲು! |WATCH VIDEOಹಿರಿಯೂರು 'ಇಂದಿರಾ ಕ್ಯಾಂಟಿನ್‌'ಗೆ ಪೌರಾಯುಕ್ತ ವಾಸೀಂ ದಿಢೀರ್ ಭೇಟಿ: ಉಪಾಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲನೆಬೆಂಗಳೂರಲ್ಲಿ KPCC ಕಚೇರಿಗೆ ಮುತ್ತಿಗೆ ಹಾಕಲು ಯತ್ನ : ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪೊಲೀಸ್ ವಶಕ್ಕೆ!ಬ್ಯಾಂಕ್ ಖಾತೆಗೆ ದಿಢೀರ್ ಹಣ ಜಮೆಯಾದರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ಖಾತೆಯೇ ಖಾಲಿ!SIR ವಿರುದ್ಧ ಕಾಂಗ್ರೆಸ್ ಸಮರದ ನಡುವೆ ‘ಸ್ಟಿಂಗ್ ಆಪರೇಷನ್ ಬಾಂಬ್’ ಸ್ಫೋಟಿಸಿದ ಡಿಕೆ ಶಿವಕುಮಾರ್; ಕರ್ನಾಟಕ ರಾಜಕೀಯದಲ್ಲಿ ಸಂಚಲನಕರ್ನಾಟಕಕ್ಕೆ ಮತ್ತೆ ಬರಗಾಲದ ಭೀತಿ: 13 ಪ್ರಮುಖ ಜಲಾಶಯಗಳಲ್ಲಿ ಕೇವಲ 69% ನೀರು ಸಂಗ್ರಹಹೊಸ VLF ಸ್ಟ್ರಾಡಾ ಎಲೆಕ್ಟ್ರಿಕ್ ಸ್ಕೂಟರ್‌ ಭಾರತದಲ್ಲಿ ಬಿಡುಗಡೆ: ವಿಶಿಷ್ಟ ವಿನ್ಯಾಸ; 250 ಕಿಮೀ ಸಾಮರ್ಥ್ಯBIG NEWS : ನಂದಿನಿ ಮಿಲ್ಕ್ ಪೌಡರ್ ಸಂಪೂರ್ಣ ಸುರಕ್ಷಿತ : 'FSSAI' ಲ್ಯಾಬ್ ರಿಪೋರ್ಟ್ ನಲ್ಲಿ ಬಹಿರಂಗ, ಗ್ರಾಹಕರು ನಿರಾಳ!ಅದಿತಿ ಬ್ರೇಕಪ್ ನಂತರವೂ ಸ್ನೇಹ, Soulmate ಸಿದ್ಧಾರ್ಥ್