LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ಸಾಗರ ರಾಜಕೀಯ'ದಲ್ಲಿ ಸಂಚಲನ: ಕೆಳದಿಯಿಂದ ಜಿಲ್ಲಾ ಪಂಚಾಯ್ತಿ ಚುನಾವಣೆಗೆ 'ಧರ್ಮೇಂದ್ರ ಶಿರವಾಳ' ಸ್ಪರ್ಧೆ ಫಿಕ್ಸ್!

ಶಿವಮೊಗ್ಗ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮಲೆನಾಡು ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಾಗರ ತಾಲೂಕಿನ ಕೆಳದಿ ಕ್ಷೇತ್ರದಿಂದ ಜನಾನುರಾಗಿ ಸಮಾಜ ಸೇವಕ ಧರ್ಮೇಂದ್ರ ಶಿರವಾಳ ಅವರು ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಳಿಯುವುದು ಬಹುತೇಕ ಅಂತಿಮಗೊಂಡಿದೆ. ಯಾವುದೇ ಅಧಿಕಾರದ ಹಪಹಪಿಯಿಲ್ಲದೆ, ನಿರಂತರ ಜನಸೇವೆಯ ಮೂಲಕವೇ ತಳಮಟ್ಟದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಅವರು ಈ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

ಸಂಘಟನಾ ಚತುರತೆಗೆ ಸಾಕ್ಷಿಯಾದ ಹಳೆಯ ಇತಿಹಾಸ

ಧರ್ಮೇಂದ್ರ ಶಿರವಾಳ ಅವರ ಸಾರ್ವಜನಿಕ ಜೀವನ ಹೋರಾಟಗಳಿಂದಲೇ ಬೆಳೆದು ಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಜಿ.ಪಂ ಚುನಾವಣೆಯಲ್ಲಿ ಇವರ ಸೋದರ ತುಕಾರಾಮ್ ಶಿರವಾಳ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ, ತೆರೆಮರೆಯಲ್ಲಿದ್ದುಕೊಂಡು ತಂತ್ರ ಹೆಣೆದಿದ್ದ ಧರ್ಮೇಂದ್ರ ಅವರು ಅಚ್ಚರಿಯ ಪ್ರಮಾಣದ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ತಮ್ಮ ಸಂಘಟನಾ ಬಲ ಹಾಗೂ ಚುನಾವಣಾ ಕೌಶಲ್ಯವನ್ನು ಮೊದಲ ಬಾರಿಗೆ ರುಜುವಾತುಪಡಿಸಿದ್ದರು.

ಜನಪರ ನಿಲುವು ಹಾಗೂ ಸಮಾಜಮುಖಿ ಕಳಕಳಿ

ಅರಣ್ಯ ಇಲಾಖೆಯ ಬಿಗಿ ನಿಯಮಗಳಿಂದ ಕಂಗಾಲಾಗಿದ್ದ ಜನಸಾಮಾನ್ಯರು ಮತ್ತು ರೈತರ ಪರವಾಗಿ ನಿಂತು ಹೋರಾಟ ರೂಪಿಸಿದ್ದು ಇವರ ಜನಪ್ರಿಯತೆಗೆ ಮುನ್ನುಡಿ ಬರೆಯಿತು. ಅರಣ್ಯ ಗುತ್ತಿಗೆದಾರರ ಸಂಘದ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಮುಂಚೂಣಿ ಜವಾಬ್ದಾರಿಗಳನ್ನು ಹೊತ್ತಿದ್ದರೂ, ಇವರು ಆದ್ಯತೆ ನೀಡಿದ್ದು ಮಾತ್ರ ರೈತರು ಮತ್ತು ಬಡವರ ಭೂಮಿ ಹಕ್ಕುಗಳ ಪರವಾಗಿ.

ತಾಲೂಕು ಆಡಳಿತ, ಮೆಸ್ಕಾಂ ಕಚೇರಿ ಅಥವಾ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ ಹೀಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಇವರು ಸದಾ ಮುಂದು. ಸಹಾಯ ಅರಸಿ ಮನೆ ಬಾಗಿಲಿಗೆ ಬಂದವರಿಗೆ ಆತಿಥ್ಯ ನೀಡಿ ಕಷ್ಟಕ್ಕೆ ಸ್ಪಂದಿಸುವ ಇವರ ಸರಳ ಗುಣವೇ ಇಂದಿಗೂ ಇವರ ದೊಡ್ಡ ಬಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಗೆಲುವಿಗಾಗಿ ಧರ್ಮೇಂದ್ರ ಶಿರವಾಳ ಹೆಗಲುಕೊಟ್ಟು ದುಡಿದಿದ್ದರು. ಕಸಬಾ ಹೋಬಳಿಯ ಹೊಣೆಗಾರಿಕೆ ಹೊತ್ತು, ಸ್ವಂತ ಶಕ್ತಿಯ ಮೇಲೆ ಹಳ್ಳಿ ಹಳ್ಳಿಗಳಲ್ಲಿ ಪಕ್ಷ ಸಂಘಟಿಸಿದ್ದರು. ಅದರಲ್ಲೂ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳೊಂದಿಗೆ ಇವರು ನಡೆಸಿದ ಬೃಹತ್ ಬೈಕ್ ರ್ಯಾಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಬಲವಾದ ಅಲೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸಾಮಾನ್ಯ ಮೀಸಲು ಕ್ಷೇತ್ರ; ಕೈ ವರಿಷ್ಠರ ಒಲವು

ಪ್ರಸ್ತುತ ಕೆಳದಿ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇವರ ಪಕ್ಷನಿಷ್ಠೆ ಹಾಗೂ ಜನರೊಂದಿಗಿನ ಗಾಢ ಒಡನಾಟವನ್ನು ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಕಣಕ್ಕಿಳಿಯಲು ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ. ಕುಟುಂಬ ಹಾಗೂ ಹಿತೈಷಿಗಳ ಜತೆ ಸಮಾಲೋಚನೆ ನಡೆಸಿರುವ ಧರ್ಮೇಂದ್ರ, ಸ್ಪರ್ಧೆಗೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಣಕ್ಕಿಳಿದರೆ ಕೆಳದಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಕೈಹಿಡಿಯಲಿದ್ದಾರೆ ಎಂಬ ಬಲವಾದ ವಿಶ್ವಾಸ ಅಭಿಮಾನಿ ವಲಯದಲ್ಲಿದೆ. ನಿರೀಕ್ಷೆಯಂತೆ ಟಿಕೆಟ್ ಒಲಿದು ಬಂದು, ಜನಸೇವಕನಿಗೆ ಗೆಲುವು ದಕ್ಕಲಿದೆಯೇ ಎಂಬುದನ್ನು ಮುಂದಿನ ದಿನಗಳೇ ನಿರ್ಧರಿಸಲಿವೆ.

ವಿಶೇಷ ವರದಿ: ವಸಂತ ಬಿ. ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!