ಒಮ್ಮೆ ಕೈಲಾಸದಲ್ಲಿ ಒಂದು ಸಭೆ ಸೇರಿದರು. ಆ ಸಭೆಗೆ ದೇವಾನು- ದೇವತೆಗಳು ಸೇರಿದ್ದರು. ಯಮ ದೇವ ತನ್ನ ವಾಹನ ಕೋಣನ ಮೇಲೆ ಸಭೆಗೆ ಬಂದನು. ಸಭಾಭವನದ ಒಳಗೆ ಹೋಗುವ ಮೊದಲು ಕೋಣ ವನ್ನು ಒಂದೆಡೆ ನಿಲ್ಲಿಸಿ ಇಳಿದು ಆ ಕಡೆ ಈ ಕಡೆ ನೋಡಿದ. ಒಂದು ಮರದ ಮೇಲೆ ಪುಟ್ಟ ಗುಬ್ಬಚ್ಚಿ ಕುಳಿತಿತ್ತು. ಯಮ ಅದರ ಕಡೆಗೆ ದೃಷ್ಟಿ ಇಟ್ಟು ಕ್ಷಣ ನೋಡಿ ಸಭಾ ಭವನದ ಒಳಗೆ ಹೋದನು. ಗುಬ್ಬಿಗೆ ಭಯ ವಾಯಿತು ಯಮದೇವ ಯಾಕೆ ತನ್ನ ಮೇಲೆ ದೃಷ್ಟಿ ಬೀರಿದ. ಇನ್ನು ತನ್ನ ಕಥೆ ಮುಗಿಯತು. ತನ್ನ ಸಾವು ಹತ್ತಿರ ಬಂದಿದೆ ಎಂದುಕೊಂಡ ಗುಬ್ಬಿ ಹೆದರಿಕೆಯಿಂದ ನಡುಗುತ್ತಿತ್ತು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಸ್ವಲ್ಪ ಹೊತ್ತಿಗೆ ವಿಷ್ಣು ತನ್ನ ವಾಹನ ಗರುಡನ ಮೇಲೆ ಬಂದಿಳಿದು ಸಭೆಯ ಕಲಾಪಕ್ಕೆ ಒಳಗೆ ಹೋದನು. ಅಲ್ಲೇ ನಿಂತಿದ್ದ ಗರುಡ ಸುತ್ತ ಮುತ್ತ ತಿರುಗಿದಾಗ ಪುಟ್ಟ ಗುಬ್ಬಿ ಹೆದರಿ ನಡುಗುವುದನ್ನು ನೋಡಿದ. ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ ಅವನು ಯಾಕೆ ನಡುಗುತ್ತಿದ್ದಾನೆ ಸಮಾಧಾನ ಮಾಡಬೇಕು ಎಂದು ಅದರ ಬಳಿ ಹೋಗಿ, ಗುಬ್ಬಿ ನೀನು ಯಾಕೆ ನಡು ಗುತ್ತಿರುವೆ ಎಂದು ಕೇಳಿದ, ಗುಬ್ಬಿ ಹೇಳಿತು. ಈಗ ತಾನೆ ಯಮರಾಜನ ನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾ ವಧಿ ಮುಗಿದಿದೆ, ಯಮ ನನ್ನನ್ನು ಕರೆದೊಯ್ಯಲು ಬಂದಿದ್ದಾನೆ ನನಗೆ ತುಂಬಾ ಭಯವಾಗಿದೆ ಎಂದಿತು. ಗರುಡ ಅದನ್ನು ಸಮಾಧಾನ ಪಡಿಸಿ ನೀನು ಹೆದರಬೇಡ. ನೀನು ಯಮನ ಕಣ್ಣಿಗೆ ಬೀಳದಂತೆ ನಿನ್ನನ್ನು ಸುರಕ್ಷಿತವಾಗಿ ದೂರದ ಹಿಮಾಲಯದ ತಪ್ಪಲಿನ ಪರ್ವತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯಾರಿಗೂ ಕಾಣದಂತೆ ಅಲ್ಲಿ ಭದ್ರವಾದ ಜಾಗ ದಲ್ಲಿ ಇಡುವೆ ಎಂದು ಗುಬ್ಬಚ್ಚಿ ಯನ್ನು ತನ್ನ ಮೇಲೆ ಕೂರಿಸಿಕೊಂಡು ಹಾರಿ ಪರ್ವತದ ಬಳಿ ಬಂದು ಅಲ್ಲಿದ್ದ ಒಂದು ಗುಹೆಯೊಳಗೆ ಗುಬ್ಬಚ್ಚಿಯನ್ನು ಮುಚ್ಚಿಟ್ಟು ಗರುಡ ಬಂದನು.
ಇಷ್ಟು ಸಮಯ ಆಗುವುದರಲ್ಲಿ ಒಳಗೆ ಸಭೆ ಮುಗಿದಿತ್ತು. ಸಭೆಯ ಕಲಾಪ ಮುಗಿಸಿ ಯಮ ಹೊರಗೆ ಬಂದು ಗರುಡನನ್ನು ನೋಡಿ ನಕ್ಕನು. ಗರುಡನಿಗೆ ಯಮನ ನಗು ಹಿಡಿಸಲಿಲ್ಲ, ಹೇಳಿದ ನೀನು ಗುಬ್ಬಚ್ಚಿಯನ್ನು ನೋಡಿದಂತೆ ನನ್ನ ನೋಡಿ ನಕ್ಕ ಮಾತ್ರಕ್ಕೆ ನಾನೇನು ಹೆದರುವುದಿಲ್ಲ . ನನ್ನ ಮೇಲೆ ಮಹಾವಿಷ್ಣು ಕುಳಿತು ಕೊಳ್ಳುತ್ತಾನೆ ನಿನಗೂ ಗೊತ್ತಿರಬೇಕಲ್ಲ ಎಂದ. ಯಮರಾಜ ಮತ್ತೂ ಜೋರಾಗಿ ನಗುತ್ತಾ ನಾನು ನಕ್ಕಿದ್ದು ಅದಕ್ಕ ಲ್ಲ, ನೀನು ನನ್ನ ಹತ್ತಿರವೇ ನಾಟಕ ಆಡುವೆಯಲ್ಲ ಎಂದಾಗ, ಏನೀಗ ಆ ಪುಟ್ಟ ಪಕ್ಷಿಯ ಮೇಲೆ ನಿನ್ನ ದೃಷ್ಟಿ ನೆಟ್ಟು ಹೆದರಿಸಿದಿಯಲ್ಲ ಅದನ್ನು ನಾನು ಜೋಪಾನ ಮಾಡಿ ಬಂದಿರುವೆ, ಇನ್ನು ಗುಬ್ಬಚ್ಚಿಗೆ ನಿನ್ನ ಭಯ ವಿಲ್ಲ ಎಂದಿತು. ಯಮ ಇನ್ನಷ್ಟು ಜೋರಾಗಿ ನಕ್ಕ, ಗರುಡನಿಗೆ ಮತ್ತೂ ಆಶ್ಚರ್ಯವಾಯಿತು. ಯಮ ಹೇಳಿದ ನಾನು ಆ ಗುಬ್ಬಿಯನ್ನು ಮೊದಲು ನೋಡಿದಾಗ ನನಗನ್ನಿಸಿತು, ಇದಕ್ಕೆ ಸಾವು ಇನ್ನು ಸ್ವಲ್ಪ ಹೊತ್ತಿಗೆ ಬರುವುದು. ಅದೂ ಸಹ ಹಿಮಾಲಯ ಪರ್ವತದ ಗುಹೆಯೊಳಗೆ ಒಂದು ಹಾವಿನ ಬಾಯಲ್ಲಿ ಎಂದು ಲಿಖಿತವಿತ್ತು ಎಂಬುದನ್ನು ತಿಳಿದು ಆಶ್ಚರ್ಯವಾಯಿತು. ಈ ಪುಟ್ಟ ಗುಬ್ಬಿ ಹಿಮಾಲಯ ಪರ್ವತಕ್ಕೆ ಇಷ್ಟು ಕಡಿಮೆ ಸಮಯದಲ್ಲಿ ಹೋಗುವುದು ಹೇಗೆ? ಅದರ ಸಾವು ಅಲ್ಲಿರುವ ಹಾವಿನ ಬಾಯಲ್ಲಿ ಎಂದರೇನು? ಎಂದು ನನಗೇ ಆಶ್ಚರ್ಯವಾಗಿತ್ತು.
ಇನ್ನು ಆಶ್ಚರ್ಯವಾದ ಸಂಗತಿ ಎಂದರೆ, ಕೇಳು ಗರುಡ ರಾಜ, ಆ ಪುಟ್ಟ ಪಕ್ಷಿ ಯನ್ನು ಹಾವಿನ ಬಾಯಿಗೆ ಹಾಕಲು ಆ ವಿಧಿಯು ನಿನ್ನನ್ನೇ ಬಳಸಿ ಕೊಂಡಿಲ್ಲ ಅದನ್ನು ಕಂಡು ನನಗೆ ಆಶ್ಚರ್ಯವಾಗಿದ್ದು ಎಂದ ಯಮ ರಾಜ.
ಶ್ರೀಕೃಷ್ಣ ಹೇಳುವಂತೆ ಯಾರಿಗೆ ಯಾರೂ ರಕ್ಷಕರೂ ಅಲ್ಲ, ಯಾರ ಸಾವಿಗೆ ಯಾರು ಹೊಣೆಯು ಅಲ್ಲ. ವಿಧಿ ಬರಹವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ವಿಧಿ ಬರೆದ ಅಡ್ಡ ಪಟ್ಟಿಯನ್ನು ಉದ್ದ ನಾಮ ದಿಂದ ಅಳಿಸುತ್ತೇವೆ. (ಹೀಗೆ ಹೇಳಿದ್ದನ್ನು ಕೇಳಿದ್ದೆ) ಎಂಬುದು ನೆನಪಾಗಿ ನಗು ಬಂದಿತು. ಕರ್ಮದಿಂದ ಪಾರಾಗ ಬೇಕೆಂದು, ವಾಸಿಸುವ ಮನೆ ಬಿಟ್ಟು ,ಕಾಡಿಗೆ ಹೋಗಿ ಪರ್ವತಗಳ ಗುಹೆಯಲ್ಲಿ ಅಡಗಿ ಕುಳಿತರೆ, ಅಥವಾ ಊರು ದೇಶವನ್ನೇ ತೊರೆದು ಹೋದರೆ ಹಣೆಬರಹ ಬದಲಾಯಿಸಲು ಆಗುತ್ತದೆಯೇ ಅಥವಾ ವ್ರತ -ನಿಯಮ, ಹೋಮ- ಹವನ, ಶಾಂತಿ, ಪೂಜೆ ಇತ್ಯಾದಿ ಮಾಡಿ ತಪ್ಪಿಸಿಕೊಳ್ಳಲೇ, ದೇಶವನ್ನೇ ತೊರೆದು ಬೇರೆ ದೇಶಕ್ಕೆ ಹೋದ ಮಾತ್ರಕೆ ವಿಧಿ ಬರಹ ಅಳಿಸದು, ಯಾರು ಬದಲಾಯಿಸಲು ಸಾಧ್ಯವಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದಕುಸಿಯೇ ನೆಲವಿಹುದು ಮಂಕುತಿಮ್ಮ