LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಂಡನ್‌ನಲ್ಲಿ ಬಾಸ್-ಲೇಡಿ ಲುಕ್‌ನಲ್ಲಿ ಮಿಂಚಿದ ಕತ್ರಿನಾ ಕೈಫ್: ಧೋತಿ ಶೈಲಿಯ ಟ್ರೌಸರ್ಸ್ ಧರಿಸಿ ಗಮನ ಸೆಳೆದ ನಟಿ

ಬಾಲಿವುಡ್‌ನ ಸ್ಟಾರ್ ನಟಿ ಕತ್ರಿನಾ ಕೈಫ್ ತಮ್ಮ ಅಪರೂಪದ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಅಕ್ಟೋಬರ್ 8 ರಂದು ಲಂಡನ್‌ನಲ್ಲಿ ನಡೆದ ತಮ್ಮ ಸೌಂದರ್ಯವರ್ಧಕ ಬ್ರ್ಯಾಂಡ್ ‘ಕೇ ಬ್ಯೂಟಿ’ಯ (Kay Beauty) ಯುಕೆ ಶಾಖೆಯ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕತ್ರಿನಾ, ತಮ್ಮ ಹೊಸ ಮತ್ತು ವಿಭಿನ್ನ ‘ಬಾಸ್-ಲೇಡಿ’ ಅವತಾರದಲ್ಲಿ ಮಿಂಚಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕತ್ರಿನಾ, ಚಾಕೊಲೇಟ್ ಬ್ರೌನ್ ಬಣ್ಣದ ಸೂಟ್ ಧರಿಸಿದ್ದು, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸಮ್ಮಿಶ್ರಣವಾಗಿ ಕಂಡುಬಂದರು.

ಧೋತಿ ಶೈಲಿಯ ಟ್ರೌಸರ್ಸ್ ಹಾಗೂ ಸಿಂಪಲ್ ಲುಕ್:

ಕತ್ರಿನಾ ಧರಿಸಿದ್ದ ಈ ವಿಶೇಷ ಉಡುಪಿನಲ್ಲಿ ಅಗಲವಾದ ಓವರ್‌ಸೈಸ್ಡ್ ಬ್ಲೇಜರ್ ಮತ್ತು ಅದಕ್ಕೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದ ಧೋತಿ ಮಾದರಿಯ ಲೇಯರ್ಡ್ ಟ್ರೌಸರ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಈ ಉಡುಪಿನ ಜೊತೆಗೆ ಕಪ್ಪು ಬಣ್ಣದ ಲೇಸ್ ಪಾಯಿಂಟೆಡ್ ಬೂಟ್‌ಗಳನ್ನು ಧರಿಸಿದ್ದ ನಟಿ, ಕನಿಷ್ಠ ಮೇಕಪ್ ಹಾಗೂ ಸರಳವಾದ ಕೇಶವಿನ್ಯಾಸದೊಂದಿಗೆ ನೋಡುಗರನ್ನು ಸೆಳೆದರು.

ಸಾಮಾಜಿಕ ಜಾಲತಾಣಗಳ ವಿಮರ್ಶೆ ಕುರಿತು ಕತ್ರಿನಾ ಮಾತು:

ಇದೇ ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ವಿಮರ್ಶೆಗಳು ಹಾಗೂ ಟೀಕೆಗಳ ಕುರಿತು ಮಾತನಾಡಿದ ಕತ್ರಿನಾ, “ಆನ್‌ಲೈನ್‌ನಲ್ಲಿ ಬರುವ ಪ್ರತಿಯೊಂದು ಅಭಿಪ್ರಾಯಕ್ಕೂ ತಲೆಕೆಡಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊರಟರೆ ನಾವೇನೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ನಮ್ಮನ್ನು ಕೊಂಡಾಡುವ ದಿನಗಳಿರುತ್ತವೆ, ಹಾಗೆಯೇ ಕಷ್ಟದ ದಿನಗಳೂ ಇರುತ್ತವೆ. ಅಂತಹ ಸಮಯದಲ್ಲಿ ನಮಗೆ ನಾವೇ ಅತಿದೊಡ್ಡ ಬೆಂಬಲವಾಗಿ ನಿಲ್ಲಬೇಕು. ಟೀಕೆಗಳಿಗೆ ಹೆದರಿದರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ,” ಎಂದು ಸಕಾರಾತ್ಮಕ ಸಂದೇಶ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ