LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಗಿಲ್ಕ್ರಿಸ್ಟ್’ ಹೆಸರಿದ್ದರೂ ಇವರ ಆರಾಧ್ಯ ದೈವ ಕುಮಾರ್ ಸಂಗಕ್ಕಾರ ! ಪಾಕ್ ಯುವ ಕ್ರಿಕೆಟಿಗನ ಹೆಸರಿನ ಹಿಂದಿದೆ ಅಪರೂಪದ ಕಥೆ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹಾಗೂ ವಿಕೆಟ್‌ಕೀಪರ್ ಬ್ಯಾಟರ್ ಆಡಮ್ ಗಿಲ್ಕ್ರಿಸ್ಟ್ ಹೆಸರು ಕೇಳಿದರೆ ಕ್ರಿಕೆಟ್ ಪ್ರೇಮಿಗಳಿಗೆ ಅವರ ಸ್ಪೋಟಕ ಬ್ಯಾಟಿಂಗ್ ನೆನಪಾಗುತ್ತದೆ. ಆದರೆ ಇದೀಗ ಪಾಕಿಸ್ತಾನದ ಶಾಲಾ ಕ್ರಿಕೆಟ್‌ನಲ್ಲಿ ಆಡಮ್ ಗಿಲ್ಕ್ರಿಸ್ಟ್ ಹೆಸರಿನ ಯುವ ಕ್ರಿಕೆಟಿಗನೊಬ್ಬ 108 ಎಸೆತಗಳಲ್ಲಿ 117 ರನ್‌ ಬಾರಿಸುವ ಮೂಲಕ ಭಾರಿ ಸದ್ದು ಮಾಡಿದ್ದಾನೆ. ಕಾಮ್ರಾನ್ ಪಬ್ಲಿಕ್ ಶೂಲ್ ಪರ ಆಡುತ್ತಿರುವ ಈ ಯುವಕ ಕೂಡ ಎಡಗೈ ವಿಕೆಟ್‌ಕೀಪರ್ ಬ್ಯಾಟರ್ ಆಗಿರುವುದು ವಿಶೇಷ.

ಜಿನ್ನಾ ಕಾಲೇಜು ಮೈದಾನದಲ್ಲಿ ಹ್ಯಾಪಿ ಪ್ಯಾಲೇಸ್ ಗ್ರಾಮ್ ಶಾಲೆಯ ವಿರುದ್ಧ ನಡೆದ ಪಂದ್ಯದಲ್ಲಿ ಗಿಲ್ಕ್ರಿಸ್ಟ್ ಈ ಅದ್ಭುತ ಶತಕ ಸಿಡಿಸಿ ಗಮನ ಸೆಳೆದಿದ್ದಾನೆ.

ಹೆಸರಿನ ಹಿಂದಿದೆ ಅಪರೂಪದ ಕಥೆ:

ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗನ ಹೆಸರು ತಮಗೆ ಹೇಗೆ ಬಂತು ಎಂಬುದರ ಕುರಿತು ಮಾತನಾಡಿರುವ ಯುವಕ, “ನನ್ನ ತಾಯಿ ನನಗೆ ‘ಆಡಮ್’ ಎಂದು ಹೆಸರಿಟ್ಟಿದ್ದರು. ನನ್ನ ತಂದೆಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ, ಅವರು ಅಪಾರ ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ಆಸ್ಟ್ರೇಲಿಯಾದ ಆಡಮ್ ಗಿಲ್ಕ್ರಿಸ್ಟ್ ಬ್ಯಾಟಿಂಗ್‌ಗೆ ಮಾರುಹೋಗಿದ್ದ ನನ್ನ ತಂದೆ, ನನ್ನ ಹೆಸರಿನ ಜೊತೆಗೆ ‘ಗಿಲ್ಕ್ರಿಸ್ಟ್’ ಎಂದು ಸೇರಿಸಿದರು. ಹಾಗಾಗಿ ನನ್ನ ಹೆಸರು ಆಡಮ್ ಗಿಲ್ಕ್ರಿಸ್ಟ್ ಆಯಿತು,” ಎಂದು ವಿವರಣೆ ನೀಡಿದ್ದಾನೆ.

ಪಿಸಿಬಿ ಟ್ಯಾಲೆಂಟ್ ಪ್ರೋಗ್ರಾಂ ಭಾಗ:

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಂಡರ್-15 ಹಾಗೂ ಅಂಡರ್-17 ವಿಭಾಗದ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದಾನೆ. ಯುವ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಗಿಲ್ಕ್ರಿಸ್ಟ್ ಧನ್ಯವಾದ ತಿಳಿಸಿದ್ದಾನೆ.

ಆಸ್ಟ್ರೇಲಿಯಾದ ದಿಗ್ಗಜನ ಹೆಸರನ್ನೇ ಹೊಂದಿದ್ದರೂ, ಈ ಯುವಕನ ಸಾರ್ವಕಾಲಿಕ ನೆಚ್ಚಿನ ಆಟಗಾರ ಗಿಲ್ಕ್ರಿಸ್ಟ್ ಅಲ್ಲವಂತೆ. ಶ್ರೀಲಂಕಾದ ದಂತಕಥೆ ಕುಮಾರ ಸಂಗಕ್ಕಾರ ಅವರಂತೆ ಬೆಳೆಯುವುದು ತಮ್ಮ ಕನಸು ಎಂದು ಈ ಯುವ ಬ್ಯಾಟರ್ ಹೇಳಿಕೊಂಡಿದ್ದಾನೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!