LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕರ ಭವನಕ್ಕೆ ಉಪಸಭಾಪತಿ ಡಾ.ಉಮಾಶ್ರೀ ದಿಢೀರ್‌ ಭೇಟಿ, ಪರಿಶೀಲನೆ

ಬೆಂಗಳೂರು: ಶಾಸಕರ ಭವನದಲ್ಲಿ ವಾಸ್ತವ್ಯವಿರುವ ಶಾಸಕರುಗಳ ಶಾಂತಿ ಮತ್ತು ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗಬಾರದು; ವೈದ್ಯಕೀಯ ಸೇವೆ ಇನ್ನಿತರ ಸೌಲಭ್ಯಗಳ ಬಗ್ಗೆ ಗಮನಹರಿಸುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳು ಹಾಗೂ ಪರಿಷತ್ತಿನ ವಸತಿ ಸಮಿತಿಯ ಅಧ್ಯಕ್ಷರಾದ ಡಾ. ಉಮಾಶ್ರೀ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  

ಗುರುವಾರ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಸತಿ ಸಮಿತಿಯ ಸಭೆ ನಡೆಸಿದ ಬಳಿಕ ಸಮಿತಿಯ ಸದಸ್ಯರೊಂದಿಗೆ ಶಾಸಕರ ಭವನಕ್ಕೆ ದಿಢೀರ್ ಭೇಟಿ ಮಾಡಿದ ಉಪಸಭಾಪತಿಗಳು, ಶಾಸಕರ ಭವನದ ಕೊಠಡಿಗಳು, ಕಾರಿಡಾರ್ಗಳು ಹಾಗೂ ಆವರಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರು, ವಿದ್ಯುತ್ ಮತ್ತು ಪೀಠೋಪಕರಣಗಳ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ಹೇಳಿದರು.

ಮಹಿಳಾ ಶಾಸಕರಿಗೆ ಪ್ರತ್ಯೇಕ ಹೆಲ್ತ್ ಕ್ಲಬ್ 

ಮೊದಲಿಗೆ ಶಾಸಕರ ಭವನದ ಹೆಲ್ತ್ ಕ್ಲಬ್ ಗೆ ಭೇಟಿ ನೀಡಿ, ಶಾಸಕರುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು; ಅಗತ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಸಾಧ್ಯವಾದರೆ ಮಹಿಳಾ ಶಾಸಕರಿಗೆ ಪ್ರತ್ಯೇಕವಾದ ಹೆಲ್ತ ಕ್ಲಬ್ ತೆರೆಯಬೇಕು ಎಂದು ಸಲಹೆ ನೀಡಿದರು. 

ವಾಚಾಲಯಕ್ಕೆ ಶಾಸಕರು ಹೆಚ್ಚು ಬರುವಂತೆ ಮಾಡಬೇಕು.  ಗ್ರಂಥಾಲಯದಲ್ಲಿ ಶಾಸಕರಿಗೆ ಶೌಚಾಲಯ ಕೊಠಡಿ ನಿರ್ಮಿಸಬೇಕು.  ಪಂಚಕರ್ಮ ಚಿಕಿತ್ಸಾ ಕೇಂದ್ರವನ್ನು ಮತ್ತಷ್ಟು ಸುಸರ್ಜಿತಗೊಳಿಸಬೇಕು. ಶಾಸಕರ ಚಿಕಿತ್ಸಾಲಯ ಕೇಂದ್ರದಲ್ಲಿ ಉತ್ತಮ ಸೇವೆ ನೀಡಬೇಕೆಂದು ಉಪಸಭಾಪತಿಗಳು ಸೂಚಿಸಿದರು.

ನೈರ್ಮಲ್ಯಕ್ಕೆ ಒತ್ತು ನೀಡಿ

ಶಾಸಕರ ಭವನದಲ್ಲಿರುವ ಕೊಠಡಿಗಳು, ಸಮ್ಮೇಳನ ಸಭಾಂಗಣಗಳು ಹಾಗೂ ಅಲ್ಲಿ ಒದಗಿಸಲಾಗುತ್ತಿರುವ ಮೂಲಸೌಕರ್ಯ ಮತ್ತು ನೈರ್ಮಲ್ಯದ ಸ್ಥಿತಿಗತಿಗಳನ್ನು ಅವರು ಹತ್ತಿರದಿಂದ ಪರಿಶೀಲಿಸಿದರು. 

ಪ್ರತ್ಯೇಕ ಶೌಚಾಲಯ ನಿರ್ಮಿಸಿ

ನಂತರ ಶಾಸಕರ ಭವನದ ಹೊರಾಂಗಣ ಪರಿಶೀಲಿಸಿ, ಚಿಲುಮೆ, ಉದ್ಯಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಹೇಳಿದರು. ಸಮೃದ್ಧಿ ಹೋಟೆಲ್ ಗೂ ತೆರಳಿ, ಅಡುಗೆ ಮನೆ, ದಾಸ್ತಾನು ಕೊಠಡಿ ಪರಿಶೀಲಿಸಿದರು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಗಮನಹರಿಸಬೇಕು ಉಪಸಭಾಪತಿಗಳು  ಹೇಳಿದರು.

ಶಾಸಕರ ಭವನದಲ್ಲಿ ಸಚಿವಾಲಯದ ಸಿಬ್ಬಂದಿ, ವೈದ್ಯಕೀಯ ಘಟಕ ಹಾಗೂ ಭದ್ರತಾ ಸಿಬ್ಬಂದಿ ಸದಾ ಕರ್ತವ್ಯಕ್ಕೆ ಸನ್ನದ್ಧರಾಗಿರಬೇಕು ಎಂದು ವೇಳೆ ಉಪಸಭಾಪತಿ ಡಾ. ಉಮಾಶ್ರೀ ಅವರು ಸಂಬಂಧಪಟ್ಟ ಅಧಿಕಾರಿಗಳು ಆದೇಶ ನೀಡಿದರು.

ಈ ವೇಳೆ ಪರಿಷತ್ತಿನ ವಸತಿ ಸಮಿತಿಯ ಸದಸ್ಯ ಬಿ.ಜಿ. ಪಾಟೀಲ್ ಅವರು, ಶಾಸಕರ ಭವನದ ಕ್ಷೇತ್ರಾಧಿಕಾರಿ ಸಿ.ಟಿ. ರೂಪ ಇನ್ನಿತರ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!