LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆನ್‌ಲೈನ್‌ನಲ್ಲಿ ತರಕಾರಿ ತರಿಸುವ ಮುನ್ನ ಎಚ್ಚರ ; ‘ಹೂಕೋಸು’ ಆರ್ಡರ್ ಮಾಡಿ ಬೇಸ್ತುಬಿದ್ದ ಗ್ರಾಹಕ !

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗ್ರೋಸರಿ ಆ್ಯಪ್‌ಗಳ ಮೂಲಕ ನಿಮಿಷಾರ್ಧದಲ್ಲಿ ತರಕಾರಿ ತರಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಆದರೆ ಆನ್‌ಲೈನ್‌ನಲ್ಲಿ ಕೊಡುವ ಚಿತ್ರಕ್ಕೂ, ಮನೆಗೆ ಬರುವ ತರಕಾರಿಯ ಗುಣಮಟ್ಟಕ್ಕೂ ಎಷ್ಟು ವ್ಯತ್ಯಾಸವಿರುತ್ತದೆ ಎಂಬುದಕ್ಕೆ ಚೆನ್ನೈನಲ್ಲಿ ನಡೆದ ಘಟನೆಯೊಂದು ಸೂಕ್ತ ಉದಾಹರಣೆಯಾಗಿದೆ. ಚೆನ್ನೈ ಮೂಲದ ಅಶ್ವಿನ್ ಮುರಳಿ ಎಂಬುವವರು ಜೆಪ್ಟೋ ಆ್ಯಪ್ ಮೂಲಕ ಆರ್ಡರ್ ಮಾಡಿದ ಹೂಕೋಸು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಅಶ್ವಿನ್ ಮುರಳಿ ಅವರಿಗೆ ತಲುಪಿದ ಹೂಕೋಸಿನಲ್ಲಿ ತಿನ್ನಲು ಯೋಗ್ಯವಾದ ಹೂವಿನ ಭಾಗಕ್ಕಿಂತ ಹೆಚ್ಚಾಗಿ ಎಲೆಗಳು ಮತ್ತು ದಪ್ಪನೆಯ ದಿಂಡುಗಳೇ ತುಂಬಿದ್ದವು. ತಕ್ಷಣವೇ ಅದನ್ನು ತೂಕ ಮಾಡಿ ನೋಡಿದಾಗ, ಎಲೆ ಮತ್ತು ದಿಂಡಿನ ಭಾಗವೇ ಮುನ್ನೂರು ಗ್ರಾಂ ತೂಗಿದರೆ, ನಿಜವಾದ ಹೂಕೋಸಿನ ಭಾಗ ಕೇವಲ ನೂರ ನಲವತ್ತೊಂಬತ್ತು ಗ್ರಾಂ ಇತ್ತು. ಇದರಿಂದ ತೀವ್ರ ನಿರಾಶೆಗೊಂಡ ಅಶ್ವಿನ್, ತಮಗೆ ಬಂದ ತರಕಾರಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗ್ರಾಹಕ ಸೇವಾ ವಿಭಾಗಕ್ಕೆ ದೂರು ನೀಡಿದಾಗ ಸಂಸ್ಥೆಯ ಸ್ವಯಂಚಾಲಿತ ಬಾಟ್ ಸಿಸ್ಟಮ್ ನೀಡಿದ ಉತ್ತರ ಅಶ್ವಿನ್ ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. ಆ್ಯಪ್ ನೀಡಿದ ಪ್ರತಿಕ್ರಿಯೆಯಲ್ಲಿ, ತಮಗೆ ತಲುಪಿದ ಹೂಕೋಸು ಸಂಸ್ಥೆಯ ಗುಣಮಟ್ಟದ ಮಾನದಂಡಕ್ಕೆ ಬದ್ಧವಾಗಿದೆ ಹಾಗೂ ಇದನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿ ಹಣ ಮರುಪಾವತಿ ಅಥವಾ ತರಕಾರಿ ಬದಲಾಯಿಸಿಕೊಡಲು ನಿರಾಕರಿಸಿದೆ. ಬದಲಿಗೆ ಇಮೇಲ್ ಕಳುಹಿಸುವಂತೆ ಸೂಚಿಸಿದೆ. ಇದರಿಂದ ಬೇಸತ್ತ ಅಶ್ವಿನ್, ರಸ್ತೆಯಲ್ಲಿ ಭಿಕ್ಷೆ ಬೇಡುವುದು ಉತ್ತಮ, ಈ ರೀತಿಯ ದರೋಡೆ ಸಲ್ಲದು ಎಂದಿದ್ದಾರೆ.

ಅಶ್ವಿನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಆಸಕ್ತಿಕರ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ‘ಅವರು ಹೂಕೋಸು ಕಳುಹಿಸುವುದನ್ನು ಮರೆತು ಬರಿ ಕೋಸು ಕಳುಹಿಸಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಆನ್‌ಲೈನ್‌ನಲ್ಲಿ ತರಕಾರಿ ಖರೀದಿಸುವ ಬದಲು ಸ್ಥಳೀಯ ಮಾರುಕಟ್ಟೆಗೆ ಹೋಗಿ ಕಣ್ಣಾರೆ ನೋಡಿ ತರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜೆಪ್ಟೋ ಸಂಸ್ಥೆಯು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಶೀಘ್ರದಲ್ಲೇ ಪರಿಹರಿಸುವುದಾಗಿ ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!