LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 16 ದಿನಗಳ ಸಾಂಸ್ಕೃತಿಕ ಹಬ್ಬ ‘ಬಾಲಿ ಇನ್ ಬೆಂಗಳೂರು’ ಅಂಗವಾಗಿ, ಅ.9ರ ಶುಕ್ರವಾರ ಸಂಜೆ ನಗರದ ಪ್ರತಿಷ್ಠಿತ ‘ಮೀನಾಕ್ಷಿ ರಂಗಮಂಚ’ದಲ್ಲಿ ಇಂಡೋನೇಷ್ಯಾದ ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತದ ಭವ್ಯ ಕಾರ್ಯಕ್ರಮ ಆಯೋಜನೆಗೊಂಡಿದೆ.

ಪರಮ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಈ ವಿಶೇಷ ಸಂಜೆಯು ಬಾಲಿ ಮತ್ತು ಕರ್ನಾಟಕದ ಜೀವಂತ ಕಲಾ ಪರಂಪರೆಗಳ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಕಾರ್ಯಕ್ರಮದಲ್ಲಿ ಬಾಲಿಯ ಜಗತ್ಪ್ರಸಿದ್ಧ ‘ಕೆಚಕ್’ (Kecak) ನೃತ್ಯ, ಸಾಂಪ್ರದಾಯಿಕ ಬಾಲಿ ನೃತ್ಯ ಪ್ರಕಾರಗಳು, ‘ಗ್ಯಾಮೆಲನ್’ (Gamelan) ವಾದ್ಯಮೇಳ ಹಾಗೂ ನಮ್ಮ ನೆಲದ ಹೆಮ್ಮೆಯ ‘ಯಕ್ಷಗಾನ’ದೊಂದಿಗೆ ಅಪರೂಪದ ಸಹಯೋಗದ ಪ್ರದರ್ಶನ (Collaboration) ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ.

news_1791447539_1_486.webp

ಫ್ಯೂಷನ್ ಅಲ್ಲ, ಪರಸ್ಪರ ಕಲಾ ವಿನಿಮಯ:

ಈ ಉತ್ಸವವು ಕೇವಲ ಎರಡು ಕಲೆಗಳನ್ನು ಬೆರೆಸಿ ಪ್ರಸ್ತುತಪಡಿಸುವ (Fusion) ವೇದಿಕೆಯಲ್ಲ. ಬದಲಿಗೆ ಉಭಯ ದೇಶಗಳ ಕಲಾ ಪರಂಪರೆಗಳು, ಕಥನ ಶೈಲಿ ಮತ್ತು ಹಾವಭಾವಗಳ ನೈಜತೆಯನ್ನು ಉಳಿಸಿಕೊಂಡು ಪರಸ್ಪರ ಕಲಿಯುವ ಹಾಗೂ ಆಪ್ತವಾಗಿ ಅನುಭವಿಸುವ ಸಾಂಸ್ಕೃತಿಕ ವಿನಿಮಯವಾಗಿದೆ. ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಪ್ರಾಚೀನ ಸಾಂಸ್ಕೃತಿಕ ನಂಟನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಕಲಾವಿದರು ಮತ್ತು ಕಲಾಪ್ರೇಮಿಗಳ ನಡುವೆ ಮುಕ್ತ ಸಂವಾದಕ್ಕೂ ಇದು ಮುನ್ನುಡಿ ಬರೆದಿದೆ.

news_1791447538_0_352.webp

16 ದಿನಗಳ ಕಾಲ ನಡೆಯುತ್ತಿರುವ ಈ ಸಮಗ್ರ ಉತ್ಸವದಲ್ಲಿ ತೊಗಲುಗೊಂಬೆಯಾಟ, ಕಾರ್ಯಾಗಾರಗಳು ಹಾಗೂ ಪ್ರಾತ್ಯಕ್ಷಿಕೆಗಳು ನಗರದಾದ್ಯಂತ ಅಕ್ಟೋಬರ್ 18ರವರೆಗೆ ಮುಂದುವರಿಯಲಿದ್ದು, ಅ.9ರಂದು ಮೀನಾಕ್ಷಿ ರಂಗಮಂಚದಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ಕಲಾಪ್ರಿಯರಿಗೆ ರಸದೌತಣ ನೀಡಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!