LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ರಾಜ್‌ಕುಮಾರ್ ದಾಂಪತ್ಯ ಕಲಹಕ್ಕೆ ಹೊಸ ಟ್ವಿಸ್ಟ್ : ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಭೈರಪ್ಪ ಮಾರ್ಮಿಕ ಪೋಸ್ಟ್!

ಬೆಂಗಳೂರು : ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ಭಿನ್ನಾಭಿಪ್ರಾಯ ಹಾಗೂ ವಿಚ್ಛೇದನದ ಸುದ್ದಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ನಡುವೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದು ಈಗಾಗಲೇ ಸುದ್ದಿಯಾಗಿತ್ತು. ಆದರೆ ಇದೀಗ ಶ್ರೀದೇವಿ ಭೈರಪ್ಪ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಹಾಗೂ ಅದಕ್ಕೆ ನೀಡಿರುವ 'ಡಿಯರ್ ಹಸ್ಬೆಂಡ್' ಎಂಬ ಕ್ಯಾಪ್ಷನ್ ನೆಟ್ಟಿಗರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ತಮ್ಮ ಕೆಲವು ಸುಂದರ ಫೋಟೊಗಳನ್ನು ಶೇರ್ ಮಾಡಿಕೊಂಡಿರುವ ಶ್ರೀದೇವಿ, ಪತಿ ಯುವ ರಾಜ್‌ಕುಮಾರ್ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಸಾಲುಗಳನ್ನು ಬರೆದುಕೊಂಡಿದ್ದಾರೆ. "ಅವನ ಫೋನ್‌ನಲ್ಲಿ ನನ್ನ ಇಂತಹ ಸಾವಿರಾರು ಫೋಟೊಗಳಿದ್ದವು.. ಅವುಗಳನ್ನು ನೋಡಿ ನಾನೇನೋ ತುಂಬಾ ಸ್ಪೆಷಲ್ ಎಂದುಕೊಂಡಿದ್ದೆ. ಆದರೆ, ಒಂದು ದಿನ ಅವನ ಗ್ಯಾಲರಿಯಲ್ಲಿ ಮತ್ತೊಬ್ಬ ಹುಡುಗಿಯ ಇದೇ ರೀತಿಯ ಫೋಟೊಗಳನ್ನು ನೋಡುವವರೆಗೂ ಮಾತ್ರ ನನಗೆ ಆ ನಂಬಿಕೆ ಇತ್ತು..!" ಎಂದು ಬರೆಯುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟಕ್ಕೇ ನಿಲ್ಲದೆ, ಆ ಅಪರಿಚಿತ ಹುಡುಗಿಯನ್ನು ಉದ್ದೇಶಿಸಿ ಮಾತು ಮುಂದುವರಿಸಿರುವ ಅವರು, "ನಾನು ಆಕೆಗೆ ಇಷ್ಟನ್ನು ಹೇಳಲು ಬಯಸುತ್ತೇನೆ - 'ನೀನು ಏನು ಸ್ಪೆಷಲ್ ಅಲ್ಲ'. ಆ ಫೋಟೊಗಳ ಮೇಲೆ ದೃಷ್ಟಿಬೊಟ್ಟಿಟ್ಟು ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಿಲ್ಲ.." ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ. ಶ್ರೀದೇವಿ ಅವರ ಈ ಸಾಲುಗಳು ಇದೀಗ ನೆಟ್ಟಿಗರ ಗಮನ ಸೆಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಶ್ರೀದೇವಿ ಭೈರಪ್ಪ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪೈಕಿ ಒಬ್ಬ ನೆಟ್ಟಿಗರು, "ಒಂದ್ವೇಳೆ, ಅಪ್ಪು ಸರ್ ಜೀವಂತವಾಗಿದ್ದಿದ್ದರೆ ಖಂಡಿತವಾಗಿಯೂ ನಿಮ್ಮ ಪರವಾಗಿ ನಿಲ್ಲುತ್ತಿದ್ದರು ಅಲ್ವಾ..?" ಎಂದು ಪ್ರಶ್ನಿಸಿದ್ದರು. ಈ ಕಾಮೆಂಟ್‌ಗೆ ತಕ್ಷಣವೇ ಸ್ಪಂದಿಸಿದ ಶ್ರೀದೇವಿ, "100000%" ಎಂದು ರಿಯಾಕ್ಟ್ ಮಾಡುವ ಮೂಲಕ ಅಪ್ಪು ಅವರ ಬೆಂಬಲ ತಮಗೆ ಇರುತ್ತಿತ್ತು ಎಂಬ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಇನ್ನೊಂದೆಡೆ, ಯುವ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕೆಲ ನೆಟ್ಟಿಗರು ಯುವ ಪರವಾಗಿಯೂ ಧ್ವನಿ ಎತ್ತಿದ್ದಾರೆ. "ಟೀಕೆ ಮಾಡೋರ್ಗೆಲ್ಲಾ ಟೀಗೂ ಕಾಸಿರಲ್ಲ, ಕೇರ್ ಮಾಡಬೇಡ ಯುವ" ಎಂದು ಕಾಮೆಂಟ್ ಮಾಡಿ ನಟನಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ, ಶ್ರೀದೇವಿ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಇಬ್ಬರ ನಡುವಿನ ವೈವಾಹಿಕ ಕಹಿಸಂಗತಿಯನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಚರ್ಚೆ ಕಾವು ಪಡೆದುಕೊಂಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ