LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಸಲು ನೀಡುತ್ತಿದ್ದ ಮರಗಳ ಮಾರಣಹೋಮ: ಸಾಗರ ತಹಶೀಲ್ದಾರ್ ಕಚೇರಿ ಎದುರು ಕಡಿದ ಮರಗಳ ರಾಶಿ ಹಾಕಿ ರೈತರ ಆಕ್ರೋಶ!

ಶಿವಮೊಗ್ಗ: ಬಡ ರೈತನೊಬ್ಬ ಬೆವರು ಸುರಿಸಿ ಬೆಳೆಸಿದ್ದ ಅಡಿಕೆ, ತೆಂಗು ಸೇರಿದಂತೆ ನೂರಾರು ಫಸಲು ನೀಡುವ ಮರಗಳನ್ನು ನೆಲಸಮಗೊಳಿಸಿರುವ ತಹಶೀಲ್ದಾರ್ ಕ್ರಮವನ್ನು ಖಂಡಿಸಿ, ಸಾಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆಲಹಳ್ಳಿ ಗ್ರಾಮದ ರೈತ ಮುಖಂಡ ದೇವು ಎಂಬುವವರ ಜಮೀನಿನಲ್ಲಿ ಕಡಿದುರುಳಿಸಲಾದ 150ಕ್ಕೂ ಹೆಚ್ಚು ಮರಗಳ ದಿಮ್ಮಿಗಳನ್ನು ತಾಲೂಕು ಕಚೇರಿಯ ಮುಂಭಾಗದಲ್ಲೇ ರಾಶಿ ಹಾಕಿ ಧರಣಿ ಕುಳಿತ ರೈತರು, ಕಂದಾಯ ಅಧಿಕಾರಿಗಳ ರೈತವಿರೋಧಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಒತ್ತಡಕ್ಕೆ ಮಣಿದು ಅಮಾನವೀಯ ಕೃತ್ಯ: ಶಿವಾನಂದ ಕುಗ್ವೆ ಕಿಡಿ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, "ಆಲಹಳ್ಳಿ ಮತ್ತು ಕಾನೆಲೆ ಗ್ರಾಮಗಳ ಗಡಿ ವಿವಾದವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ ಪರಿಹರಿಸಬೇಕಿದ್ದ ತಹಶೀಲ್ದಾರ್ ಡಾ. ಪ್ರತಿಭಾ ಅವರು, ಪ್ರಭಾವಿ ರಾಜಕಾರಣಿಗಳ ಮಾತಿಗೆ ಮಣಿದು ಪೊಲೀಸರೊಂದಿಗೆ ತೆರಳಿ ಬಡ ರೈತನ ಜಮೀನಿನಲ್ಲಿದ್ದ ಮರಗಳನ್ನು ಧ್ವಂಸಗೊಳಿಸಿದ್ದಾರೆ. ಪಹಣಿಯಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿದ್ದರೂ, ಫಸಲು ನೀಡುತ್ತಿದ್ದ ಮರಗಳನ್ನು ಕಡಿದು ಹಾಕುವ ಮೂಲಕ ತಹಶೀಲ್ದಾರ್ ಅಮಾನವೀಯವಾಗಿ ವರ್ತಿಸಿದ್ದಾರೆ. ಕೂಡಲೇ ನೊಂದ ರೈತ ದೇವು ಅವರಿಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ಪಟ್ಟುಹಿಡಿದರು.

'ಲೇಡಿ ಸಿಂಗಂ' ಬಿರುದು ವಾಪಸ್ ಪಡೆದ ರೈತ ಸಂಘಟನೆಗಳು

ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್ ಕುಮಾರ್ ಮಾತನಾಡಿ, "ಹಿಂದೆ ತಹಶೀಲ್ದಾರ್ ಅವರ ದಿಟ್ಟ ಹೆಜ್ಜೆಗಳನ್ನು ಕಂಡು ರೈತ ಸಂಘವೇ ಗೌರವದಿಂದ ನೀಡಿದ್ದ 'ಲೇಡಿ ಸಿಂಗಂ' ಎಂಬ ಬಿರುದನ್ನು ಇಂದಿನಿಂದ ವಾಪಸ್ ಪಡೆಯುತ್ತಿದ್ದೇವೆ. ಬಡ ರೈತನ ತೋಟಕ್ಕೆ ನುಗ್ಗಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಈ ರೀತಿ ಮರ ಕಡಿತಲೆ ಮಾಡಿರುವುದು ಅಧಿಕಾರದ ದುರುಪಯೋಗ" ಎಂದು ಹರಿಹಾಯ್ದರು. ಸಂಘಟನೆಯ ಅಧ್ಯಕ್ಷ ಸುಂದರ್ ಸಿಂಗ್ ಮಾತನಾಡಿ, ಸರ್ವೇ ನಂಬರ್ 80ರ ಎರಡು ಎಕರೆ ಬಗರ್‌ಹುಕುಂ ಜಾಗದಲ್ಲಿದ್ದ ಹಸಿರು ಗಿಡಮರಗಳನ್ನು ಬುಡಸಹಿತ ನಾಶಪಡಿಸಿದ ಕೃತ್ಯ ತೀವ್ರ ಖಂಡನೀಯ ಎಂದರು.

ಸಚಿವ ಮಧು ಬಂಗಾರಪ್ಪ ಮನೆ ಎದುರು ಧರಣಿ ಎಚ್ಚರಿಕೆ

ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು ಮಾತನಾಡಿ, "ಫಸಲು ನೀಡುತ್ತಿದ್ದ ಜೀವಂತ ಮರಗಳನ್ನು ಕಡಿದು ಹಾಕಿ ಕ್ರೌರ್ಯ ಮೆರೆದಿರುವ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಸಂತ್ರಸ್ತ ರೈತನಿಗೆ ನ್ಯಾಯ ಒದಗಿಸದಿದ್ದರೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನಿವಾಸದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು" ಎಂದು ಗಡುವು ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ರಮೇಶ್ ಐಗಿನಬೈಲು, ರಾಮಪ್ಪ ಶಿರವಾಳ, ಕುಮಾರ ಗೌಡ, ಭದ್ರೇಶ್ ಬಾಳಗೋಡು, ಮಂಜಪ್ಪ ಎಂ.ಬಿ., ಕನ್ನಪ್ಪ, ಕಿರಣ್ ಕುಮಾರ್, ಬೇಬಿ ಗೋಳಿಗೋಡು, ಲಕ್ಷ್ಮಮ್ಮ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?