LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆನ್‌ಲೈನ್‌ನಲ್ಲಿದ್ದರೂ ನಿಜಜೀವನದಲ್ಲಿ ತೀವ್ರ ಒಂಟಿತನ: ಭಾರತೀಯ ಯುವಜನತೆಯ ಮನಸ್ಥಿತಿ ಬಿಚ್ಚಿಟ್ಟ ಸಮೀಕ್ಷೆ!

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಡೇಟಿಂಗ್ ಆಪ್‌ಗಳ ಪ್ರಸಿದ್ಧ ಸಂಸ್ಥೆ ‘ಮ್ಯಾಚ್ ಗ್ರೂಪ್’ ಮತ್ತು ‘ಇಪ್ಸೋಸ್’ ಜಂಟಿಯಾಗಿ ಭಾರತದ ಮೆಟ್ರೋ ಹಾಗೂ ಮೊದಲ ಸ್ತರದ ನಗರಗಳಲ್ಲಿ 18 ರಿಂದ 45 ವರ್ಷ ವಯಸ್ಸಿನ 1,000 ಒಂಟಿ ವ್ಯಕ್ತಿಗಳನ್ನು ಒಳಪಡಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 35ರಷ್ಟು ಸಿಂಗಲ್ಸ್‌ಗಳು ತಮಗೆ ಸದಾ 'ಒಂಟಿ' ಎಂಬ ಭಾವನೆ ಕಾಡುತ್ತಿದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಭಾರತೀಯ ಯುವಜನತೆಗೆ ಜನರೊಂದಿಗೆ ಬೆರೆಯಲು ಅವಕಾಶಗಳ ಕೊರತೆಯೇನೂ ಇಲ್ಲ. ಶೇ. 75ರಷ್ಟು ಯುವಕ-ಯುವತಿಯರು ವಾರಕ್ಕೊಮ್ಮೆಯಾದರೂ ಹೊರಗಡೆ ಹೋಗಿ ಜನರನ್ನು ಭೇಟಿಯಾಗುತ್ತಾರೆ. ಆದಾಗ್ಯೂ, ಶೇ. 64ರಷ್ಟು ಮಂದಿ ತಮ್ಮ ಸಾಮಾಜಿಕ ಜೀವನಕ್ಕಿಂತ ಓದು ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಅವರನ್ನು ಒಂಟಿತನಕ್ಕೆ ತಳ್ಳಿದೆ. ಇದಲ್ಲದೆ, ಶೇ. 55ರಷ್ಟು ಸಿಂಗಲ್ಸ್‌ಗಳು ದಿನದ ಕೆಲಸ ಮುಗಿದ ಮೇಲೆ ಯಾರನ್ನಾದರೂ ಭೇಟಿಯಾಗಲು ಅಸಾಧ್ಯವಾಗುವಷ್ಟು ಸುಸ್ತಾಗಿರುತ್ತಾರೆ. ಶೇ. 58ರಷ್ಟು ಮಂದಿ ಆನ್‌ಲೈನ್‌ನಲ್ಲಿ ಎಲ್ಲರೊಂದಿಗೂ ಬೆರೆತಿದ್ದರೂ ನಿಜಜೀವನದಲ್ಲಿ ಒಂಟಿತನ ಅನುಭವಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಒಂಟಿತನ ಕಾಡುತ್ತಿದ್ದರೂ ಯುವಜನತೆ ಪ್ರೀತಿ ಮತ್ತು ಸಂಬಂಧಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ತಮಗೆ ಎಂಥವರ ಸಾಂಗತ್ಯ ಬೇಕು ಎಂಬ ಬಗ್ಗೆ ಅವರು ಹೆಚ್ಚು ಸ್ಪಷ್ಟತೆ ಹೊಂದಿದ್ದಾರೆ. ಸಮೀಕ್ಷೆಯಲ್ಲಿದ್ದ ಶೇ. 70ರಷ್ಟು ಮಂದಿ ಹೊಸ ಸಂಬಂಧಗಳನ್ನು ಬೆಳೆಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದರೆ, ಶೇ. 72ರಷ್ಟು ಯುವಜನತೆ ನೂರಾರು ಸ್ನೇಹಿತರ ಬದಲು ಬೆರಳೆಣಿಕೆಯಷ್ಟಿದ್ದರೂ 'ಗಾಢವಾದ ಮತ್ತು ಆಪ್ತವಾದ' ಸಂಬಂಧಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನವನ್ನು ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಶೇ. 40ರಷ್ಟು ಸಿಂಗಲ್ಸ್‌ಗಳು ಡೇಟಿಂಗ್ ಆಪ್‌ಗಳನ್ನು ಬಳಸುತ್ತಿದ್ದು, ಶೇ. 63ರಷ್ಟು ಮಂದಿ ಇದರಿಂದ ತಮ್ಮ ಒಂಟಿತನ ದೂರವಾಗಿದೆ ಎಂದಿದ್ದಾರೆ. ಮುಂದಿನ 12 ತಿಂಗಳಲ್ಲಿ ಡೇಟಿಂಗ್ ಆಪ್ ಬಳಸುವುದಾಗಿ ಶೇ. 55ರಷ್ಟು ಜನ ಹೇಳಿದ್ದಾರೆ. ಆದರೆ, ಶೇ. 60ರಷ್ಟು ಮಂದಿಗೆ ಆನ್‌ಲೈನ್ ಸುರಕ್ಷತೆಯ ಬಗ್ಗೆ ಕಳವಳವಿದ್ದು, ಶೇ. 52ರಷ್ಟು ಜನ ‘ವೆರಿಫೈಡ್ ಪ್ರೊಫೈಲ್’ ಮತ್ತು ಕಟ್ಟುನಿಟ್ಟಿನ ಭದ್ರತಾ ನಿಯಮಗಳಿರುವ ಆಪ್‌ಗಳಿಗೇ ಮೊದಲ ಆದ್ಯತೆ ನೀಡುತ್ತಿದ್ದಾರೆ.

ಈ ಕುರಿತು ವಿಶ್ಲೇಷಿಸಿರುವ ಮ್ಯಾಚ್ ಗ್ರೂಪ್‌ನ ಇಂಡಿಯಾ ಮತ್ತು ಮಧ್ಯಪ್ರಾಚ್ಯದ ಪ್ರಾದೇಶಿಕ ಮುಖ್ಯಸ್ಥ ಅನುಕೂಲ್ ಕುಮಾರ್, "ಇಂದಿನ ಯುವಜನತೆ ತಮಗೆ ಎಂಥವರ ಒಡನಾಟ ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಯಾಂತ್ರಿಕ ಜೀವನಶೈಲಿಯಲ್ಲಿ ಆಪ್ತ ಸಂಬಂಧಗಳನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಇಂತಹ ಸಮಯದಲ್ಲಿ ಜನರ ಆಸಕ್ತಿ ಮತ್ತು ಮನಸ್ಥಿತಿಗೆ ತಕ್ಕಂತಹ, ನೈಜ ಹಾಗೂ ಅರ್ಥಪೂರ್ಣ ಸಂಬಂಧಗಳನ್ನು ಕಲ್ಪಿಸಿಕೊಡುವಲ್ಲಿ ಡೇಟಿಂಗ್ ಆಪ್‌ಗಳು ಮತ್ತು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ