LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಮಹಿಳೆ: ಎಎಪಿ ನಾಯನನ್ನು ಮದುವೆಯಾಗಿ ವಂಚನೆ: ಹಣ,ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆದ ಲೇಡಿ

ಅಮೃತಸರ: ಇತ್ತೀಚಿನ ದಿನಗಳಲ್ಲಿ ಸುಳ್ಳು ಹೇಳಿ ಮದುವೆಯಾಗಿ ಬಳಿಕ ಹಣ, ಚಿನ್ನಾಭರಣಗಳನ್ನು ದೋಚಿ ನಾಪತ್ತೆಯಾಗುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಕಾರಣಿಯೊಬ್ಬರು ಇಂತದ್ದೊಂದು ವಂಚನೆಗೆ ಒಳಗಾಗಿದ್ದಾರೆ.

ಮಹಿಳೆಯೊಬ್ಬರು ತಮ್ಮನ್ನು ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಎಪಿ ನಾಯಕರೊಬ್ಬರನ್ನು ಮದುವೆಯಾಗಿ ಬಳಿಕ ಹಣ, ಆಭರಣಗಳ ಜತೆ ನಾಪತ್ತೆಯಗೈರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

ಎಎಪಿ ನಾಯಕ ಅಮರಿಂದರ್ ಸಿಂಗ್ ಮಂಡೋಫಲ್ ಅವರನ್ನು ವಿವಾಹವಾಗಿದ್ದ ನಕಲಿ ಪಿಎಸ್ ಅಧಿಕಾರಿ, ಅವರ ಬಳಿ ಇದ್ದ ಹಣ, ಒಡವೆಗಳನ್ನು ಕದ್ದು ಮಹಿಳೆ ಪರಾರಿಯಾಗಿದ್ದಾಳೆ ಪೊಲೀಸರಿಗೆ ದೂರು ನೀಡಲಾಗಿದೆ.

ಅಮರಿಂದರ್ ಸಿಂಗ್ ಮಂಡೋಫಲ್ ಅವರ ಆರೋಪದ ಪ್ರಕಾರ, ಮನ್‌ವಿಂದರ್ ಕೌರ್ ಮತ್ತು ಆಕೆಯ ಕುಟುಂಬದವರು ಆಕೆಯನ್ನು ಅವಿವಾಹಿತ ಪಿಸಿಎಸ್ ಅಧಿಕಾರಿಯೆಂದು ಪರಿಚಯಿಸಿದ್ದರು. ಆಕೆಯ ವಯಸ್ಸಿನ ಬಗ್ಗೆಯೂ ತಪ್ಪು ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದಾರೆ. ಮಹಿಳೆ ಜಲಂಧರ್‌ನಲ್ಲಿ ಪಿಸಿಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಬಳಿಕ ಮೊಹಾಲಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ (ADC) ಹುದ್ದೆಯ ಜವಾಬ್ದಾರಿ ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದರೆಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಅಮರಿಂದರ್ ಸಿಂಗ್ ಮತ್ತು ಮನ್‌ವಿಂದರ್ ಕೌರ್ ಅವರ ಮದುವೆ ಫೆಬ್ರವರಿ 10, 2026ರಂದು ನಡೆದಿತ್ತು. ಪಂಜಾಬ್ ವಿಧಾನಸಭಾ ಸ್ಪೀಕರ್ ಸೇರಿದಂತೆ ಹಲವು ಎಎಪಿ ನಾಯಕರು ಮತ್ತು ಜನಪ್ರತಿನಿಧಿಗಳು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಂಡೋಫಲ್ ಅವರು ಸಿರ್ಹಿಂದ್ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.

ಮದುವೆಯ ನಂತರ ಮನ್‌ವಿಂದರ್ ಕೌರ್ ಮನೆಯಿಂದ ಹೊರಟುಹೋಗುವಾಗ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಂಡೋಫಲ್ ಆರೋಪಿಸಿದ್ದಾರೆ.

ಸುಮಾರು 14 ತೊಲೆ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದು ಹಣವನ್ನು ಮನ್ ವಿಂದರ್ ಕೌರ್ ತೆಗೆದುಕೊಂಡು ಹೋಗಿದ್ದಾರೆ ಎಂದು ಮೊಂಡಲ್ ದೂರಿನಲ್ಲಿ ತಿಳಿಸಿದ್ದಾರೆ.

ಪತ್ನಿ ನಾಪತ್ತೆಯಾಗುತ್ತಿದ್ದಂತೆ ಮಂಡೋಫಲ್ ಅವರು ಆಕೆಯ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆಕೆ ಈ ಹಿಂದೆ ಮದುವೆಯಾಗಿದ್ದು ವಿಚ್ಛೇದನ ಪಡೆದಿರುವುದು ತಿಳಿದುಬಂದಿದೆ. ಅಲ್ಲದೇ ಆಕೆಗೆ 18 ವರ್ಷದ ಮಗನಿದ್ದಾನೆ ಎಂಬುದು ಗೊತ್ತಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಅಮರಿಂದರ್ ಸಿಂಗ್ ಮಂಡೋಫಲ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಮನ್‌ವಿಂದರ್ ಕೌರ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಸಹೋದರ, ತಾಯಿ, ಸೋದರಸಂಬಂಧಿ, ಅತ್ತಿಗೆ ಮತ್ತು ಮಾಜಿ ಗ್ರಾಮ ಸರಪಂಚ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಎಲ್ಲರೂ ತರಣ್ ತರಣ್ ಜಿಲ್ಲೆಯ ಭಿಖಿವಿಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ ಸಿಂಗ್ ಗ್ರಾಮದವರು, ಸದ್ಯ ಪೊಲೀಸರು ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯ ವಿರುದ್ಧದ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!