LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫ್ಲೈದುಬೈ ವಿಮಾನವನ್ನು ಇಸ್ರೇಲ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಲು ಸಂಚು? ಸಹ-ಪೈಲಟ್ ವಿರುದ್ಧ ಗಂಭೀರ ಆರೋಪ

ಅಬುಧಾಬಿ- ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸುವ ಸಂಚನ್ನು ಅದರ ಒಮನ್ ಮೂಲದ ಸಹ-ಪೈಲಟ್ ರೂಪಿಸಿದ್ದ ಎನ್ನಲಾಗಿದ್ದು, ಪ್ರಕರಣದ ತನಿಖೆಯಲ್ಲಿ ಆತ ನೀಡಿದ್ದಾನೆ ಎನ್ನಲಾದ ಹೇಳಿಕೆಗಳು ಭದ್ರತಾ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

29 ವರ್ಷದ ಫಸ್ಟ್ ಆಫೀಸರ್ ಹಮಾಮ್ ಅಲ್-ಹಮ್ಮಮಿ, ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕಾಕ್‌ಪಿಟ್‌ನಲ್ಲಿ ದಾಳಿ ನಡೆಸಿದ ಬಳಿಕ ವಿಮಾನದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯ ಪ್ರಕಾರ, ಬೆನ್ ಗುರಿಯನ್ ವಿಮಾನ ನಿಲ್ದಾಣ ತಲುಪುವ ಮುನ್ನವೇ ವಿಮಾನವನ್ನು ಕಟ್ಟಡ ಅಥವಾ ಮತ್ತೊಂದು ವಿಮಾನಕ್ಕೆ ಅಪ್ಪಳಿಸುವುದು ಆತನ ಉದ್ದೇಶವಾಗಿತ್ತು ಎನ್ನಲಾಗಿದೆ.

ವಿಮಾನ ಜೋರ್ಡಾನ್ ವಾಯುಪ್ರದೇಶದಲ್ಲಿದ್ದಾಗ ಕ್ಯಾಪ್ಟನ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದ್ದು, ಪ್ರಾರ್ಥನೆ ಮಾಡುವುದಾಗಿ ಹೇಳಿ ಬಳಿಕ ವಿಮಾನದ ತುರ್ತು ಕ್ರ್ಯಾಶ್ ಆಕ್ಸ್‌ನಿಂದ ಕ್ಯಾಪ್ಟನ್ ತಲೆಗೆ ಹೊಡೆದಿದ್ದಾನೆ ಎಂದು ವರದಿಯಾಗಿದೆ.

ಆರಂಭದಲ್ಲಿ ವಿಮಾನಕ್ಕೆ ಏನೋ ಡಿಕ್ಕಿ ಹೊಡೆದಿದೆ ಎಂದು ಭಾವಿಸಿದ್ದ ಕ್ಯಾಪ್ಟನ್, ಹೊಡೆತಗಳು ಮುಂದುವರಿದಾಗ ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್‌ನೇ ದಾಳಿ ನಡೆಸುತ್ತಿದ್ದಾನೆ ಎಂಬುದನ್ನು ಅರಿತುಕೊಂಡರು ಎನ್ನಲಾಗಿದೆ.

ಗಾಯಗೊಂಡಿದ್ದರೂ ಕ್ಯಾಪ್ಟನ್ ಪ್ರತಿರೋಧ ತೋರಿಸಿ ಅಪಾಯದ ಸಂಕೇತಗಳನ್ನು ರವಾನಿಸುವಲ್ಲಿ ಮತ್ತು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು.

ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಬಳಿಕ ಕರ್ತವ್ಯದಲ್ಲಿರದ ಇಬ್ಬರು ಪೈಲಟ್‌ಗಳು ವಿಮಾನದ ನಿಯಂತ್ರಣ ಪಡೆದು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಿದರು ಎಂದು ವರದಿಯಾಗಿದೆ.

ಫ್ಲೈದುಬೈಗೆ ಸೇರುವ ಮುನ್ನವೇ ಸಂಚು?

ಫ್ಲೈದುಬೈಗೆ ಸೇರುವ ಮುನ್ನವೇ ಸಂಚು?

ಇಸ್ರೇಲಿ ಮಾಧ್ಯಮಗಳ ವರದಿಗಳ ಪ್ರಕಾರ, ಅಲ್-ಹಮ್ಮಮಿ ಫ್ಲೈದುಬೈಗೆ ಸೇರುವ ಮೊದಲೇ ದಾಳಿಯ ಯೋಜನೆ ರೂಪಿಸಿದ್ದಾಗಿ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ.

ಟೆಲ್ ಅವೀವ್‌ಗೆ ವಿಮಾನ ಹಾರಿಸುವ ವಿಮಾನಯಾನ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ಆತ ಹೇಳಿದ್ದಾನೆ ಎಂಬುದೂ ವರದಿಯಾಗಿದೆ.

ಇಸ್ರೇಲ್‌ಗೆ ತನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸಿ ದಾಳಿಗೆ ಸಿದ್ಧತೆ ನಡೆಸಿದ್ದ ಎನ್ನುವ ಆರೋಪವೂ ಕೇಳಿಬಂದಿದೆ. ಜುಲೈನಲ್ಲೇ ದಾಳಿ ನಡೆಸಲು ಉದ್ದೇಶಿಸಿದ್ದರೂ, ಸಿಬ್ಬಂದಿಯೊಬ್ಬರೊಂದಿಗಿನ ಸ್ನೇಹದ ಕಾರಣ ಯೋಜನೆಯನ್ನು ಮುಂದೂಡಿದ್ದ ಎಂದು ಚಾನೆಲ್ 12 ಉಲ್ಲೇಖಿಸಿದೆ.

ದಾಳಿಯ ಸಂದರ್ಭದಲ್ಲಿ ವಿಮಾನದ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ವಿಮಾನದ ನಿಯಂತ್ರಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಆತ ಯತ್ನಿಸಿದ್ದ ಎನ್ನಲಾಗಿದ್ದು, ಇದರಿಂದ ವಿಮಾನ ಅಲ್ಪಾವಧಿಯಲ್ಲಿ ತೀವ್ರವಾಗಿ ಕೆಳಕ್ಕೆ ಕುಸಿದಿತ್ತು.

ಭದ್ರತಾ ಲೋಪಗಳ ಕುರಿತು ಪ್ರಶ್ನೆ

ಭದ್ರತಾ ಲೋಪಗಳ ಕುರಿತು ಪ್ರಶ್ನೆ

ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ಅಲ್-ಹಮ್ಮಮಿಗೆ ಸಂಬಂಧಿಸಿದಂತೆ ಹಿಂದೆಯೇ ಭದ್ರತಾ ಕಳವಳಗಳಿದ್ದವು ಎಂಬ ಮಾಹಿತಿ ಅಧಿಕಾರಿಗಳಿಂದ ಹೊರಬಂದಿದೆ.

ಉಗ್ರಗಾಮಿ ಸಿದ್ಧಾಂತಗಳತ್ತ ಆತನ ಆಕರ್ಷಣೆ ಕುರಿತು ಓಮನ್‌ನಲ್ಲಿಯೇ ಕಳವಳವಿದ್ದು, ವಿಮಾನ ಹಾರಿಸುವುದಕ್ಕೆ ನಿರ್ಬಂಧವಿದ್ದ ಎನ್ನುವ ವರದಿಗಳೂ ಬಂದಿವೆ.

ಇಂತಹ ಹಿನ್ನೆಲೆಯಿದ್ದ ವ್ಯಕ್ತಿ ಇಸ್ರೇಲ್‌ಗೆ ಪ್ರಯಾಣಿಕರನ್ನು ಕರೆದೊಯ್ಯುವ ವಾಣಿಜ್ಯ ವಿಮಾನದ ಸಹ-ಪೈಲಟ್ ಆಗಿ ಹೇಗೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂಬುದು ಇದೀಗ ತನಿಖೆಯ ಪ್ರಮುಖ ಪ್ರಶ್ನೆಯಾಗಿದೆ.

ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಮಚ್ಚಾರ್ ಅವರು ಕಳೆದ ವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಘಟನೆಯ ವಿವರಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದ ಆರೋಪಗಳು ಇನ್ನೂ ತನಿಖೆಯಲ್ಲಿದ್ದು, ಸಹ-ಪೈಲಟ್ ವಿರುದ್ಧದ ಆರೋಪಗಳ ಕುರಿತು ಅಂತಿಮ ನಿರ್ಧಾರ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ನಂತರವೇ ಸ್ಪಷ್ಟವಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?