ಶಿವಮೊಗ್ಗ : ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯ ಗಾಂಧಿ ಮೈದಾನದಲ್ಲಿ ಪ್ರಜಾ ಆಂದೋಲನ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಾರ್ವಜನಿಕ ಪ್ರಾಣದ ಜೊತೆಗೆ ನಗರಸಭೆ ಚೆಲ್ಲಾಟ ಆಡಿದಂತಿದೆ. ಗಾಂಧಿ ಮೈದಾನದ ನಗರಸಭೆ ಆವರಣದ ಸಭೆಯ ಕೌಂಟರ್ ಬಳಿಯಲ್ಲಿ ಚರಂಡಿ ಓಪನ್ ಬಿಡಲಾಗಿದೆ. ಇದನ್ನು ಕಾಣದೇ ಸಾರ್ವಜನಿಕರು ಮುಗ್ಗರಿಸಿ ಬೀಳುವಂತೆ ಆಗಿದೆ. ಅಂಗವಿಕಲರು ತೆರಳೋದಕ್ಕೆ ಪರದಾಡುವಂತೆ ಆಗಿದೆ.
ಇನ್ನೂ ಈ ಬಗ್ಗೆ ಸಾಗರ ನಗರಸಭೆ ಆಯುಕ್ತ ಹೆಚ್.ಕೆ ನಾಗಪ್ಪ ಅವರ ಗಮನಕ್ಕೆ ತಂದರೇ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತವೇ ಸರಿ. ಬಹುಶಃ ಸಾರ್ವಜನಿಕರು, ಅಂಗವಿಕಲರು ಕೈಕಾಲು ಮುರಿದುಕೊಂಡಾಗೋ ಚರಂಡಿಯನ್ನು ಪ್ಲೇಟ್ ಹಾಕಿ ಮುಚ್ಚಬಹುದಾ? ಎನ್ನುವ ಪ್ರಶ್ನೆ ಎದ್ದಿದೆ. ಅದರೆ ಅದಕ್ಕೂ ಮುನ್ನ ಕೌಂಟರ್ ಬಳಿ ತೆರಳುವ ಚರಂಡಿಗೆ ಪ್ಲೇಟ್ ಹಾಕಿ ಮುಚ್ಚಲಿ. ಮುಂದಾಗುವ ಅನಾಹುತ ತಪ್ಪಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.
ವಸಂತ ಬಿ ಈಶ್ವರಗೆರೆ, ಸಂಪಾದಕರು, www.kannadanewsnow.com - 9738123234