ಬೆಂಗಳೂರು: ನಾವು ನಿನ್ನೆ ಕಮಿಷನರ್ ಅವರನ್ನು ಭೇಟಿ ಮಾಡಿ ಸಚಿವಸಂಪುಟ, ಸಿಎಂ ಅವರ ವಿರುದ್ಧ ಕ್ರಮ ಜರುಗಿಸಬೇಕು ಅಂತ ಹೇಳಿದ ಮೇಲೆ ಮುಖ್ಯಮಂತ್ರಿಗಳೇ ಇವತ್ತು ಯು-ಟರ್ನ್ ತಗೊಂಡಿದ್ದಾರೆ. ನಾವು ಧರಣಿ ಮಾಡೇ ಇಲ್ಲ ಅಂತ ಮತ್ತೆ ಅವರು ಹೇಳ್ತಾರೆ. ಅಂದ್ರೆ ಏನು ಇದರ ಅರ್ಥ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ನೃಪತುಂಗ ರಸ್ತೆಯಲ್ಲಿರುವ ಪೆÇಲೀಸ್ ಮಹಾನಿರ್ದೇಶಕರ ಕಚೇರಿಗೆ ಇಂದು ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಇದು ಸರ್ಕಾರದ ತಪ್ಪು ನಡೆ, ತಪ್ಪು ಹೆಜ್ಜೆ. ಇದನ್ನ ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಫಾರ್ಮ್ ಸೆವೆನ್ ಯಾರು ಬೇಕಾದರೂ ಕೊಡಬಹುದು. ನೀವು ಬಿ.ಎಸ್.ಎನ್ ಅಡಿಯಲ್ಲಿ ಕೇಸ್ ದಾಖಲಿಸಿದರೆ ಯಾವ ವ್ಯಕ್ತಿಯೂ ಫಾರಂ ನಂಬರ್ ಸೆವೆನ್ ನೀಡುವುದಿಲ್ಲ. ಹೀಗಿದ್ದಾಗ ಫಾರಂ ಸೆವೆನ್ ಯಾಕೆ ಇಟ್ಟಿದ್ದೀರಿ ನೀವು? ಎಂದರು. ಬೆದರಿಕೆ ಹಾಕಲಾಗುತ್ತಿದೆ. ಈಗಾಗಲೇ ನಿಮ್ಮ ಮತದಾರರು ಅಂತ ನೀವು ಹೊರದೇಶದವರನ್ನು ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿ ಇಟ್ಕೊಂಡಿದ್ದೀರೋ ಅವರನ್ನು ಕೈಬಿಡಬಾರದು ಅನ್ನೋದು ನಿಮ್ಮ ಉದ್ದೇಶ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಕಳ್ಳ ಮತದಾರರಿಗೆ ಮಣೆ ಹಾಕುವ ಕೆಲಸ ಮಾಡಲು ಹೊರಟಿದೆ. ಅದನ್ನು ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೆ ನಾವು ಒಪೆÇ್ಪೀದು ಇಲ್ಲ, ಸಹಕರಿಸುವುದಿಲ್ಲ ಎಂದು ತಿಳಿಸಿದರು. ನಮ್ಮ ಹಳ್ಳಿ ಕಡೆ ಒಂದು ಗಾದೆ ಮಾತಿದೆ. "ಮೂರು ಬಿಟ್ಟವರು ಊರಿಗೆ ದೊಡ್ಡವರು" ಅಂತ. ಬಹುಶಃ ಈ ಕಾಂಗ್ರೆಸ್ ಸರ್ಕಾರವು ಸೇರಿ ನಾವು ಇವಾಗ ಹೇಳಬೇಕಾಗುತ್ತೆ ಮೂರು ಬಿಟ್ಟವರು ಅಂತ. ಅವರಿಗೆ ಮಾನ ಇಲ್ಲ, ಮರ್ಯಾದೆ ಇಲ್ಲ, ಗೌರವ ಇಲ್ಲ, ಘನತೆ ಇಲ್ಲ. ಎಲ್ಲವನ್ನು ಬಿಟ್ಟಿದ್ದಾರೆ ಅಂತ ಹೇಳಬೇಕಾಗುತ್ತದೆ ಎಂದರು. ನಿನ್ನೆ ಅವರೇ ಧರಣಿ ಮಾಡಿದ್ದೇವೆ ಅಂತ ಹೇಳಿದ್ದರು. ಇವತ್ತು ನಾವು ಧರಣಿ ಮಾಡಿಲ್ಲ ಎಂದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಕೇಳಿದರು.
ಈಗಾಗಲೇ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರ ಇದೆ; ಆದರೆ, ಪರಿಹಾರದ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಸರಕಾರ 2,500 ರೂಪಾಯಿಗಳ ಘೋಷಣೆ ಮಾಡಿದೆ. ಆದರೆ ಒಂದು ರೂಪಾಯಿ ಕೂಡ ರೈತರಿಗೆ ಬಿಡುಗಡೆ ಮಾಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರೈತರಿಗೆ ಒಂದು ಎಕರೆಗೆ 25,000 ಕೊಡಬೇಕು ಎಂದು ಆಗ್ರಹಿಸಿದರು. ಹಿಂದೆ ನಮ್ಮ ಸರ್ಕಾರ ಇರುವಾಗ ಯಡಿಯೂರಪ್ಪನವರು ಕೂಡ ಇದನ್ನು ಕೊಟ್ಟಿದ್ದರು. ಇದಕ್ಕೆ ಉತ್ತರಿಸಲಾರದೆ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ. ಅನ್ಯಾಯ ಮಾಡುತ್ತಿದೆ ಎಂದು ದೂರಿದರು.