ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ – ಮಂತ್ರಾಲಯ ರಾಯರ ಬಗ್ಗೆ ಏನೆಂದು ಬರೆಯಲಿ…? ಮಂತ್ರಾಲಯದ ಬಗ್ಗೆ ಏನೆಂದು ವರ್ಣಿಸಲಿ…?
ಕೆಲವು ಕ್ಷೇತ್ರಗಳ ಮಹಿಮೆಯನ್ನು ಕೇಳಿ ತಿಳಿಯಬಹುದು, ಕೆಲವು ಕ್ಷೇತ್ರಗಳ ಇತಿಹಾಸವನ್ನು ಓದಿ ತಿಳಿಯಬಹುದು. ಆದರೆ ಮಂತ್ರಾಲಯವನ್ನು ಮಾತ್ರ ಅನುಭವಿಸಬೇಕು. ಅಲ್ಲಿನ ಭಾವವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಮಂತ್ರಾಲಯ ತಲುಪಿದ ಕೂಡಲೇ ನಮ್ಮ ಮೊದಲ ಹೆಜ್ಜೆ ತುಂಗಭದ್ರಾ ನದಿಯತ್ತ. ಇಲ್ಲಿ ಮಳೆಯಿಲ್ಲ, ನದಿಯಲ್ಲಿ ನೀರೂ ಇರಲಿಲ್ಲ ಎಂದು ತಿಳಿಯಿತು. ಆದರೆ ನಮ್ಮದು ಎಂತಹ ಯೋಗವೋ… ಕಳೆದ ಎರಡು ದಿನಗಳಿಂದ ನದಿಗೆ ನೀರು ಬಿಟ್ಟಿದ್ದರು. ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡುವ ಅವಕಾಶ ದೊರೆಯಿತು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಆ ನೀರಿನಲ್ಲಿ ಮಿಂದೆದ್ದಾಗಲೇ ಮನಸ್ಸಿನಲ್ಲಿ ಒಂದು ರೀತಿಯ ನೆಮ್ಮದಿ.
“ರಾಯರ ದರ್ಶನಕ್ಕೆ ಹೋಗುತ್ತಿದ್ದೇವೆ” ಎಂಬ ಭಾವವೇ ಒಳಗಿನಿಂದ ರೋಮಾಂಚನ ಮೂಡಿಸುತ್ತಿತ್ತು.
ಸ್ನಾನ ಮುಗಿಸಿ ಮಠದ ಆವರಣಕ್ಕೆ ಬಂದೆವು.
ಆತ್ಮೀಯರೊಬ್ಬರು ನಮ್ಮನ್ನು ನೇರವಾಗಿ ರಾಯರ ದರ್ಶನಕ್ಕೆ ಕರೆದುಕೊಂಡು ಹೋದರು.
ರಾಯರ ಬೃಂದಾವನದ ಮುಂದೆ ನಿಂತ ಆ ಕ್ಷಣ…
ಏನು ಕೇಳಬೇಕು?
ಏನು ಬೇಡಬೇಕು?
ಯಾವ ಪ್ರಾರ್ಥನೆ ಮಾಡಬೇಕು?
ಏನೂ ತೋಚಲಿಲ್ಲ.
ಎಷ್ಟು ಸಮಯ ಅಲ್ಲಿ ನಿಂತಿದ್ದರೂ ಮನಸ್ಸಿನಲ್ಲಿ ಬೇಡಿಕೆಯೇ ಹುಟ್ಟಲಿಲ್ಲ. ಕಣ್ಣ ಮುಂದೆ ರಾಯರು… ಮನಸ್ಸಿನ ತುಂಬಾ ರಾಯರು… ಒಳಗೊಂದು ಹೇಳಲಾಗದ ಭಾವುಕತೆ…
ಅಷ್ಟೇ.
ಕೆಲವೊಮ್ಮೆ ದೇವರ ಮುಂದೆ ನಿಂತಾಗ ನಮ್ಮ ಬೇಡಿಕೆಗಳ ಪಟ್ಟಿ ನೆನಪಾಗುತ್ತದೆ. ಆದರೆ ಕೆಲವು ಸನ್ನಿಧಾನಗಳಲ್ಲಿ ನಮ್ಮನ್ನೇ ನಾವು ಮರೆತುಬಿಡುತ್ತೇವೆ.
ನನಗೆ ರಾಯರ ಮುಂದೆ ಆದದ್ದು ಅದೇ.
“ನನಗೆ ಇದು ಬೇಕು, ಅದು ಬೇಕು” ಎಂದು ಕೇಳುವುದಕ್ಕಿಂತ, “ನೀವು ಇದ್ದೀರಿ… ನಿಮ್ಮ ಸನ್ನಿಧಿಯಲ್ಲಿ ನಾನಿದ್ದೇನೆ” ಎಂಬ ಭಾವವೇ ಸಾಕಾಯಿತು.
ಆ ಕ್ಷಣದ ಮೌನದಲ್ಲೇ ಸಾವಿರ ಮಾತುಗಳಿದ್ದವು.
ಆ ಭಾವುಕತೆಯಲ್ಲೇ ಸಾವಿರ ಪ್ರಾರ್ಥನೆಗಳಿದ್ದವು.
ಆ ದರ್ಶನದಲ್ಲೇ ಮನಸ್ಸಿಗೆ ಬೇಕಾದ ಉತ್ತರಗಳೆಲ್ಲವೂ ಇದ್ದಂತಾಯಿತು.
ಅದರಲ್ಲೂ ರಾಯರ ಪಾದದ ಬಳಿಯ ಮಂತ್ರಾಕ್ಷತೆ ಪ್ರಸಾದವಾಗಿ ದೊರೆತಾಗ ಮನಸ್ಸು ಮತ್ತಷ್ಟು ತುಂಬಿಬಂತು. ಅದನ್ನು ಕೇವಲ ಮಂತ್ರಾಕ್ಷತೆ ಎಂದು ಭಾವಿಸಲು ಮನಸ್ಸಾಗಲಿಲ್ಲ — ರಾಯರ ಆಶೀರ್ವಾದವೇ ಕೈ ಸೇರಿತು ಎಂಬ ಭಾವ.
ಮಂತ್ರಾಲಯಕ್ಕೆ ಬಂದು ನಮಗೆ ಮತ್ತೊಮ್ಮೆ ಅನಿಸಿದ್ದು ಒಂದೇ —
ರಾಯರನ್ನು ನೋಡಲು ನಾವು ಬಂದೆವು ಎಂದುಕೊಳ್ಳುತ್ತೇವೆ…
ಆದರೆ ರಾಯರೇ ನಮ್ಮನ್ನು ಕರೆಸಿಕೊಂಡಾಗ ಮಾತ್ರ ಆ ಸನ್ನಿಧಿ ದೊರೆಯುತ್ತದೆ ಎನ್ನುವ ಭಾವ ಮೂಡುತ್ತದೆ.
ಪ್ರದಕ್ಷಿಣೆ ಮುಗಿಸಿ ಮತ್ತೊಮ್ಮೆ ಬೃಂದಾವನದತ್ತ ಕೈಮುಗಿದು ನಿಂತೆ.
ಹೊರಗೆ ಹೆಜ್ಜೆ ಇಡುತ್ತಿದ್ದರೂ ಮನಸ್ಸು ಮಾತ್ರ ರಾಯರ ಬಳಿಯೇ ಉಳಿದಿತ್ತು.
ಮಂತ್ರಾಲಯದಿಂದ ಹೊರಡುವಾಗ ಬೇಡಿಕೊಂಡದ್ದೇನೂ ಇರಲಿಲ್ಲ…
ಆದರೆ ಏನೋ ಬಹಳ ದೊಡ್ಡದನ್ನು ಪಡೆದುಕೊಂಡು ಹೊರಟ ಅನುಭವವಿತ್ತು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಅದೇ ಬಹುಶಃ ಗುರುಕೃಪೆ…
🙏 ರಾಯರಿದ್ದಾರೆ…
ರಾಯರ ಕೃಪೆಯಿದೆ…
ರಾಯರ ಆಶೀರ್ವಾದವೊಂದಿದ್ದರೆ ಸಾಕು. 🙏