LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಫ್‍ಐಆರ್ ದಾಖಲಿಸಿದರೆ ಹೋರಾಟ:ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಂಗಳೂರು: ಎಸ್‍ಐಆರ್ ಫಾರಂ ಸಂಖ್ಯೆ 7ರ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದರೆ ನಾವು ಕೈಕಟ್ಟಿ ಕುಳಿತಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.ನೃಪತುಂಗ ರಸ್ತೆಯಲ್ಲಿರುವ ಪೆÇಲೀಸ್ ಮಹಾನಿರ್ದೇಶಕರ ಕಚೇರಿಗೆ ಇಂದು ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಹೀಗೆ ಎಫ್‍ಐಆರ್ ದಾಖಲಿಸಲು ಖಂಡಿತ ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ದಾಖಲಿಸದಂತೆ ನಾವು ಡಿಜಿಪಿ ಅವರಿಗೆ ಒತ್ತಾಯ ಮಾಡಿದ್ದೇವೆ. ಹೀಗೆ ಕೇಸು ದಾಖಲಿಸಿದರೆ, ನಾವು ಭಾರತೀಯ ಜನತಾ ಪಾರ್ಟಿ ಕೈಕಟ್ಕೊಂಡು ಕೂರುವ ಪ್ರಶ್ನೆನೇ ಇಲ್ಲ ಎಂದು ತಿಳಿಸಿದರು.ಈ ವಿಷಯದಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಬೀದಿಗಿಳಿÀದು ಹೋರಾಟ ಮಾಡಬೇಕಿದ್ದರೆ ಅದಕ್ಕೂ ನಾವು ತಯಾರಿದ್ದೇವೆ. ಇದೇ ರೀತಿ ಎಫ್.ಐ.ಆರ್. ದಾಖಲು ಮಾಡುವುದನ್ನು ಮುಂದುವರಿಸಿದರೆ ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕುವ ಕೆಲಸವನ್ನೂ ಮಾಡುತ್ತೇವೆ ಎಂದು ತಿಳಿಸಿದರು.


ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾವ ಹಂತಕ್ಕೂ ಕೂಡ ನಾವು ಹೋಗುವುದಕ್ಕೆ ತಯಾರಿದ್ದೇವೆ ಅನ್ನುವ ಸ್ಪಷ್ಟ ಸಂದೇಶವನ್ನು ಪೆÇಲೀಸ್ ಮಹಾನನಿರ್ದೇಶಕರಿಗೆ ನಾವು ನೀಡಿದ್ದೇವೆ. ಪೆÇಲೀಸ್ ಇಲಾಖೆ ಇವತ್ತು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಇವತ್ತು ಅವರು ಕೂಡ ಕಾನೂನು ಉಲ್ಲಂಘನೆ ಮಾಡುವ ಕೆಲಸ ನಿರ್ಮಾಣ ಆಗಿದೆ. ಹಾಗಾಗಿ ಇದಕ್ಕೆ ಅವಕಾಶವನ್ನು ಕೊಡಬಾರದು. ತಕ್ಷಣ ಏನು ಎಫ್.ಐ.ಆರ್. ಮಾಡುವುದನ್ನು ನಿಲ್ಲಿಸಬೇಕು. ಆ ನಿರ್ದೇಶ£ ನೀಡಬೇಕು ಅಂತ ಹೇಳಿ ನಾವು ಪೆÇಲೀಸ್ ಮಹಾನಿರ್ದೇಶಕರಲ್ಲಿ ನಾವು ಒತ್ತಾಯವನ್ನು ಮಾಡಿದ್ದೇವೆ ಎಂದು ವಿವರಿಸಿದರು.


ಎಸ್.ಐ.ಆರ್. ಫಾರಂ 7 ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗದ ಮುಂದೆ ಹೋಗಿ ಧರಣಿ ಮಾಡಿದ್ದರು. ತದನಂತರದಲ್ಲಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೆÇಲೀಸ್ ಇಲಾಖೆಯು ಕೂಡ ಫಾರಂ 7 ಯಾರು ಅರ್ಜಿದಾರರಿದ್ದಾರೋ, ಅದರಲ್ಲೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಬಿ.ಎನ್.ಎಸ್ ಕಾಯ್ದೆ ಪ್ರಕಾರ ಎಫ್.ಐ.ಆರ್. ದಾಖಲು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಡಿಜಿಪಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಎಸ್.ಐ.ಆರ್. ಪ್ರಕ್ರಿಯೆಯÀಲ್ಲಿ ಫಾರಂ 7 ಎಂಬುದು ಚುನಾವಣಾ ಆಯೋಗ ನಮಗೆ ಕೊಟ್ಟಿರತಕ್ಕಂತ ಹಕ್ಕು. ಇದು ಕೇವಲ ಭಾರತೀಯ ಜನತಾ ಪಾರ್ಟಿಗೆ ಅಲ್ಲ. ಎಲ್ಲಾ ರಾಜಕೀಯ ಪಕ್ಷಗಳಿಗೂ ಕೂಡ ಫಾರಂ 7 ಮೂಲಕ ಯಾರು ಅನಧಿಕೃತವಾಗಿ ಅಥವಾ ಕಾನೂನುಬಾಹಿರವಾಗಿ  ಮತದಾರರ ಪಟ್ಟಿಯಲ್ಲಿ ಹೆಸರಿದೆಯೋ ಅವರನ್ನು ಕೈಬಿಡತಕ್ಕಂತಹ ಪ್ರಕ್ರಿಯೆಯೇ ಫಾರಂ 7. ಆ ಫಾರಂ 7 ನಲ್ಲಿ ನಾವು ಕೊಟ್ಟಿರತಕ್ಕಂತದ್ದು ಸರಿ ಇದ್ದರೆ ರಿಟನಿರ್ಂಗ್ ಆಫೀಸರ್ ಅದನ್ನು ಒಪ್ಪುತ್ತಾರೆ. ತಪ್ಪಿದ್ದರೆ ಅದನ್ನ ತಿರಸ್ಕರಿಸುತ್ತಾರೆ. ಅದರಲ್ಲಿ ಸರಿ ಇಲ್ಲ ಅಂತ ಇದ್ದರೆ ಚುನಾವಣಾ ಆಯೋಗ ಜನಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮವನ್ನ ಕೈಗೊಳ್ಳಬಹುದೇ ವಿನಹ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೆÇಲೀಸ್ ಇಲಾಖೆ ಬಿ.ಎನ್.ಎಸ್ ಆಕ್ಟ್ ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್.ಗಳನ್ನು ದಾಖಲಿಸಿದ್ದು ಸರಿಯಲ್ಲ ಎಂದು ಟೀಕಿಸಿದರು.


ಇವರು ಇವತ್ತು ಗೂಂಡಾಗರ್ದಿಗೆ ಇಳಿಯಲು ಹೊರಟಂತೆ ಕಾಣುತ್ತಿದೆ. ಕೋತ್ವಾಲ್ ರಾಮಚಂದ್ರನ ಶಿಷ್ಯ ಎಂಬುದನ್ನು ರಾಜ್ಯದ ಜನತೆಗೆ ಮತ್ತೊಮ್ಮೆ ನೆನಪು ಮಾಡಿಕೊಡೋದಕ್ಕೆ ಡಿ.ಕೆ. ಶಿವಕುಮಾರ್ ಹೊರಟಂತಿದೆ ಎಂದು ಆಕ್ಷೇಪಿಸಿದರು. ಈ ರೀತಿ ದಾದಾಗಿರಿ, ಗೂಂಡಾಗಿರಿ, ಎಸ್‍ಐಟಿ- ಇದ್ಯಾವುದಕ್ಕೂ ಹೆದರಿಕೊಳ್ಳುವ ಪ್ರಶ್ನೆ ಇಲ್ಲ ಎಂದು ನುಡಿದರು.
ಕಾನೂನಾತ್ಮಕವಾಗಿ ಇರುವ ಕ್ರಮ ತೆಗೆದುಕೊಳ್ಳಿ. ಅಧಿಕಾರ ನಿಮ್ಮಪ್ಪನ ಮನೆ ಆಸ್ತಿ ಅಲ್ಲ. ಈ ರೀತಿ ಎಫ್‍ಐಆರ್ ದಾಖಲು ಮಾಡಿ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಗುಂಡಾಗಿರಿ ಮಾಡಲು ಬಂದಲ್ಲಿ ನಮಗೂ ಕೂಡ ಬೀದಿಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು, ಬೀದಿಗಳಲ್ಲಿ ಯಾವ ರೀತಿ ನಿಮಗೆ ಎಚ್ಚರಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ