LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾನ್ಯ ಪರೋಟ ತಿಂದು ಬೇಜಾರಾಗಿದೆಯೇ? ಇಲ್ಲಿದೆ ರಾಜಸ್ಥಾನಿ ಶೈಲಿಯ ಕ್ರಿಸ್ಪಿ ‘ಮೂಂಗ್ ದಾಲ್ ಪರೋಟ’ ರೆಸಿಪಿ!

ಸಾಮಾನ್ಯವಾಗಿ ಪರೋಟ ಎಂದರೆ ಹಿಟ್ಟಿನೊಳಗೆ ಹೂರ್ಣವನ್ನು ತುಂಬಿ (ಸ್ಟಫ್ ಮಾಡಿ) ಮಾಡುವುದು ನಮಗೆಲ್ಲ ಗೊತ್ತು. ಆದರೆ ರಾಜಸ್ಥಾನಿ ಶೈಲಿಯ ಹೆಸರುಬೇಳೆ ಪರೋಟದ ವಿಧಾನವೇ ವಿಶಿಷ್ಟ. ಇಲ್ಲಿ ನೆನೆಸಿದ ಹೆಸರುಬೇಳೆಯನ್ನು ಹಿಟ್ಟಿನೊಂದಿಗೆ ನೇರವಾಗಿ ಸೇರಿಸಿ ಕಲಸಲಾಗುತ್ತದೆ. ಇದರಿಂದ ಪರೋಟ ಅತ್ಯಂತ ಕುರುಕುಲಾಗಿ (ಕ್ರಿಸ್ಪಿ) ಮತ್ತು ರುಚಿಕರವಾಗಿ ಮೂಡಿಬರುತ್ತದೆ. ಬೆಳಗಿನ ಉಪಹಾರಕ್ಕೆ ಅಥವಾ ರಾತ್ರಿ ಊಟಕ್ಕೆ ಸವಿಯಲು ಸೂಕ್ತವಾದ ರಾಜಸ್ಥಾನಿ ಮೂಂಗ್ ದಾಲ್ ಪರೋಟ ಮಾಡುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಗೋದೂಧಿ ಹಿಟ್ಟು – 1 ಕಪ್, ನೆನೆಸಿದ ಹೆಸರುಬೇಳೆ – ಅರ್ಧ ಕಪ್, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1, ಜೀರಿಗೆ – ಅರ್ಧ ಚಮಚ, ಇಂಗು – ಚಿಟಿಕೆ, ಅರಿಶಿನ ಪುಡಿ – ಅರ್ಧ ಚಮಚ, ಸೋಂಪು – ಕಾಲು ಚಮಚ, ಕಪ್ಪು ಜೀರಿಗೆ (ಕಲೋಂಜಿ) – ಕಾಲು ಚಮಚ, ಗರಂ ಮಸಾಲಾ – ಅರ್ಧ ಚಮಚ, ಅಚ್ಚ ಖಾರದ ಪುಡಿ – 1 ಚಮಚ, ಕೊತ್ತಂಬರಿ ಸೊಪ್ಪು – ಅಗತ್ಯವಿರುವಷ್ಟು, ಎಣ್ಣೆ ಅಥವಾ ತುಪ್ಪ – ಹುರಿಯಲು, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಬೇಳೆ ನಾದಿದ ನಂತರ ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಿ.

ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ನೆನೆಸಿದ ಹೆಸರುಬೇಳೆ, ಅಚ್ಚ ಖಾರದ ಪುಡಿ, ಸೋಂಪು, ಕಪ್ಪು ಜೀರಿಗೆ, ಅರಿಶಿನ ಪುಡಿ, ಇಂಗು, ಜೀರಿಗೆ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ. ಸಿದ್ಧವಾದ ಹಿಟ್ಟನ್ನು ಒದ್ದೆ ಬಟ್ಟೆಯಿಂದ ಮುಚ್ಚಿ ಸುಮಾರು 30 ನಿಮಿಷಗಳ ಕಾಲ ನೆನೆಯಲು ಬಿಡಿ.

30 ನಿಮಿಷಗಳ ನಂತರ ಹಿಟ್ಟಿಗೆ ಸ್ವಲ್ಪ ತುಪ್ಪ ಸವರಿ ಮತ್ತೊಮ್ಮೆ ನಾದಿಕೊಳ್ಳಿ. ಹಿಟ್ಟನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಲಟ್ಟಣಿಗೆಯಿಂದ ಪರೋಟ ಆಕಾರದಲ್ಲಿ ಲಟ್ಟಿಸಿಕೊಳ್ಳಿ.

ಈಗ ಹಂಚನ್ನು ಸಾಧಾರಣ ಉರಿಯಲ್ಲಿ ಕಾಯಿಸಿ, ಲಟ್ಟಿಸಿದ ಪರೋಟವನ್ನು ಹಂಚಿನ ಮೇಲೆ ಹಾಕಿ. ಎರಡೂ ಬದಿಗಳಲ್ಲಿ ಹದವಾಗಿ ಬೆಂದ ನಂತರ ತುಪ್ಪ ಅಥವಾ ಎಣ್ಣೆ ಸವರಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ರಾಜಸ್ಥಾನಿ ಹೆಸರುಬೇಳೆ ಪರೋಟ ಸವಿಯಲು ಸಿದ್ಧ. ಇದನ್ನು ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!