LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯಾರದ್ದೋ ಸಾಲಕ್ಕೆ ಇನ್ಯಾರದ್ದೋ ಆಸ್ತಿ ಹರಾಜು? ಪೊಳಲಿ ಸೇವಾ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ, ಶಿಸ್ತು ಕ್ರಮಕ್ಕೆ ಶಿಫಾರಸು

ಮಂಗಳೂರು: ಸಾಲಗಾರನಿಗೆ ಸಂಬಂಧಿಸದ ಸ್ಥಿರಾಸ್ತಿಯನ್ನು ಸಾಲ ವಸೂಲಾತಿಗಾಗಿ ಹರಾಜು ಮಾಡಲು ಪ್ರಕ್ರಿಯೆ ಆರಂಭಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಳಲಿ ಸೇವಾ ಸಹಕಾರ ಸಂಘದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹಕಾರ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನೋಂದಣಾಧಿಕಾರಿ ರಮೇಶ್ ಅವರು ನೋಂದಣಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಸಾಲಗಾರನ ಹೆಸರಿನಲ್ಲಿ ಅಥವಾ ಆತನ ಮಾಲೀಕತ್ವದಲ್ಲಿಲ್ಲದ ಆಸ್ತಿಯನ್ನು ಅಮಲ್ದಾರಿ ಪ್ರಕರಣದಡಿ ಹರಾಜು ಮಾಡಲು ಆದೇಶಿಸಿರುವುದು ನಿಯಮಾನುಸಾರವಲ್ಲ ಎಂದು ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ವರದಿ ಸೂಚಿಸಿದೆ.

ಪೊಳಲಿ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯು 2017ರ ಫೆಬ್ರವರಿ 13ರಂದು ಸುರೇಂದ್ರ ಎಂಬವರಿಗೆ ₹2.25 ಲಕ್ಷ ಸಾಲ ಮಂಜೂರು ಮಾಡಿತ್ತು. ಸಾಲದ ಸಂಪೂರ್ಣ ಮೊತ್ತ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸಂಘವು ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿ, ಸಾಲಗಾರ ಹಾಗೂ ಜಮೀನುದಾರರ ವಿರುದ್ಧ ಜಪ್ತಿ ಆದೇಶ ಪಡೆದಿತ್ತು.

ಆದರೆ, ಈ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಸಾಲಕ್ಕೆ ನೇರ ಸಂಬಂಧವಿಲ್ಲದ ಸುರೇಂದ್ರ ಅವರ ತಂದೆ ಗೋಪಾಲ ಅವರ ಆಸ್ತಿಯನ್ನು ಹರಾಜು ಮಾಡಲು 2026ರ ಜನವರಿ 9ರಂದು ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 

ವಿಷಯ ಬೆಳಕಿಗೆ ಬಂದ ಬಳಿಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಸಂದರ್ಭದಲ್ಲಿ ಸುರೇಂದ್ರ ಅವರು ತಮ್ಮ ತಂದೆ ಗೋಪಾಲ ನೀಡಿದ್ದ ಜಿಪಿಎ (GPA) ಆಧರಿಸಿ ಸಾಲ ಪಡೆದಿರುವುದರಿಂದ ಗೋಪಾಲ ಅವರ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ ಎಂದು ಸಂಘದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಿಪಿಎಯಲ್ಲಿ ಗೋಪಾಲ ಅವರ ಸಹಿ ಇಲ್ಲ ಹಾಗೂ ಅದು ಸಾಲ ಮಂಜೂರಾದ ನಂತರದ ಆರ್ಥಿಕ ವರ್ಷದಲ್ಲಿ ಸಿದ್ಧಪಡಿಸಿರುವಂತೆ ಕಂಡುಬರುತ್ತದೆ.

ಈ ಬಗ್ಗೆ ಸರ್ಕಾರದ ನಿರ್ದೇಶನದಂತೆ ವಿಚಾರಣೆ ನಡೆಸಿದ ಸಹಕಾರ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನೋಂದಣಾಧಿಕಾರಿ ರಮೇಶ್ ಅವರು, 28.10.2026ರಂದು ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.  ಜಿಪಿಎಗೂ ಸಾಲಕ್ಕೂ ನೇರ ಸಂಬಂಧ ಕಂಡುಬಂದಿಲ್ಲ. ಸಾಲದ ಅರ್ಜಿಯಲ್ಲಿಯೂ ಜಿಪಿಎ ಬಗ್ಗೆ ಉಲ್ಲೇಖವಿಲ್ಲ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.

ಇಡೀ ಆದೇಶವನ್ನೇ ಪ್ರಶ್ನಿಸಲು ಲಿಬರ್ಟಿ ನೀಡಿದ್ದ ಹೈಕೋರ್ಟ್‌:

ಆಸ್ತಿ ಹರಾಜು ಆದೇಶವನ್ನು ಪ್ರಶ್ನಿಸಿ ಗೋಪಾಲ ಅವರ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದರು. ಕೇವಲ ಹರಾಜು ನೋಟಿಸ್‌ನ್ನು ಪ್ರಶ್ನಿಸುವ ಬದಲು, ಸಹಾಯಕ ನಿಬಂಧಕರ ನ್ಯಾಯಾಲಯದ ಮೂಲ ಆದೇಶವನ್ನೇ ಸಕ್ಷಮ ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅರ್ಜಿದಾರರಿಗೆ ಸಂಪೂರ್ಣ ಲಿಬರ್ಟಿ ನೀಡಿತ್ತು ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದವರಿಗೆ ನೆರವಾಗಲು ಮುಂದಾದ ಸಿಟಿಜನ್ ರೈಟ್ಸ್ ಫೌಂಡೇಶನ್, ಸಾಲಕ್ಕೆ ಸಂಬಂಧವಿಲ್ಲದ ಆಸ್ತಿಯ ಹರಾಜು ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿತ್ತು. ಇದೇ ವಿಚಾರವಾಗಿ ಪ್ರವೀಣ್ ಕುಮಾರ್ ಎಂಬವರೂ ಸಂಬಂಧಪಟ್ಟ ಸಚಿವರು ಹಾಗೂ ಶಾಸಕರಿಗೆ ದೂರು ಸಲ್ಲಿಸಿದ್ದರು. ಸಚಿವರು ಮತ್ತು ಶಾಸಕರು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮಕ್ಕೆ ಶಿಫಾರಸು

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸುವಂತೆ ಸೂಚಿಸಿದ್ದರು. ಸಹಕಾರ ಇಲಾಖೆಯ ನೋಂದಣಾಧಿಕಾರಿಯೂ ಪ್ರಕರಣದ ಕುರಿತು ವಿಚಾರಣೆ ನಡೆಸಿ ವಸ್ತುನಿಷ್ಠ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಪನೋಂದಣಾಧಿಕಾರಿಗೆ ನಿರ್ದೇಶನ ನೀಡಿದ್ದರು. ಅದರಂತೆ ವಿಚಾರಣೆ ನಡೆಸಿದ ಜಿಲ್ಲಾ ಉಪನೋಂದಣಾಧಿಕಾರಿ ರಮೇಶ್ ಅವರು ಸೆಪ್ಟೆಂಬರ್ 28ರಂದು ಸಹಕಾರ ಇಲಾಖೆಯ ನೋಂದಣಾಧಿಕಾರಿಗೆ ವಿಚಾರಣಾ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಹರಾಜು ಪ್ರಕ್ರಿಯೆ ಆರಂಭಿಸಿ ಫಾರಂ ನಂ. 8 ಮತ್ತು 9 ಹೊರಡಿಸಿರುವುದು ನಿಯಮಬಾಹಿರವಾಗಿದೆ. ಸಾಲಗಾರನ ಹೆಸರಿನಲ್ಲಿ ಅಥವಾ ಮಾಲೀಕತ್ವದಲ್ಲಿಲ್ಲದ ಜಾಗವನ್ನು ಅಮಲ್ಜಾರಿ ಪ್ರಕರಣದಡಿ ದಾಖಲಿಸಿಕೊಂಡು ಹರಾಜು ಮಾಡಲು ಆದೇಶಿಸಿರುವುದು ನಿಯಮಾನುಸಾರ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಕಲಂ 64ರಡಿ ಪೊಳಲಿ ಸೇವಾ ಸಹಕಾರ ಸಂಘದ ವಿರುದ್ಧ ವಿಚಾರಣೆ ನಡೆಸುವಂತೆ ಈ ವಿಚಾರಣಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?