LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೃಹಪ್ರವೇಶಕ್ಕೆ ಸಹೋದ್ಯೋಗಿಗಳನ್ನು ಕರೆದು ಸಂಸಾರವನ್ನೇ ಕಳೆದುಕೊಂಡ ವ್ಯಕ್ತಿ ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ !

ಆಫೀಸ್ ಸಹೋದ್ಯೋಗಿಗಳನ್ನು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕರೆದ ವ್ಯಕ್ತಿಯೊಬ್ಬರ ದಾಂಪತ್ಯ ಜೀವನದಲ್ಲೇ ಬಿರುಕು ಮೂಡಿ, ಕೊನೆಗೆ ಪ್ರಕರಣ ಕೋರ್ಟ್-ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಹೋದ್ಯೋಗಿಯ ಕಹಿ ಅನುಭವ ಬಿಚ್ಚಿಟ್ಟ ಪೋಸ್ಟ್

ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟ್ಟರ್) ಬಳಕೆದಾರ ಗೌರವ್ ತೋಮರ್ ಎಂಬುವವರು ಈ ಸತ್ಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಗೌರವ್ ಅವರ ಕಚೇರಿಯ ಸಹೋದ್ಯೋಗಿಯೊಬ್ಬರು ಸಣ್ಣ ವಯಸ್ಸಿನಲ್ಲೇ ಸ್ವಂತ ಮನೆ ಖರೀದಿಸಿ, ಆ ಸಂತೋಷವನ್ನು ಆಚರಿಸಲು ಕಚೇರಿಯ ಗಂಡು ಮತ್ತು ಹೆಣ್ಣು ಸಹೋದ್ಯೋಗಿಗಳಿಗೆ ಮನೆ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಪಾರ್ಟಿ ಸಮಯದಲ್ಲಿ ಬಂದಿದ್ದ ಕೆಲವು ಯುವತಿಯರು ಆ ವ್ಯಕ್ತಿಯ ಪತ್ನಿಯೊಂದಿಗೆ ಮಾತನಾಡುವಾಗ, “ನೀವು ಅಡುಗೆಯನ್ನು ತುಂಬಾ ಚೆನ್ನಾಗಿ ಮಾಡುತ್ತೀರಿ” ಹಾಗೂ “ಪಾಪ, ನಿಮ್ಮ ಗಂಡ ಆಫೀಸ್‌ನಲ್ಲಿ ಯಾವಾಗಲೂ ಅಷ್ಟಾಗಿ ಸಂತೋಷವಾಗಿರುವುದಿಲ್ಲ” ಎಂದು ತಮಾಷೆಯಾಗಿ ಹೇಳಿದ್ದರು.

ಪಾರ್ಟಿ ಮುಗಿದ ನಂತರ ಆರಂಭವಾಯ್ತು ಹೈಡ್ರಾಮಾ

ವಾರಾಂತ್ಯದ ನಂತರ ಗೌರವ್ ಕಚೇರಿಗೆ ಬಂದಾಗ ಆ ಸಹೋದ್ಯೋಗಿ ಕೆಲಸಕ್ಕೆ ಬಂದಿರಲಿಲ್ಲ. ಗೌರವ್ ಆತನಿಗೆ ಕರೆ ಮಾಡಿದಾಗ, ಆ ಸಹೋದ್ಯೋಗಿ ತನಗೆ ಜಾಮೀನು (Bail) ನೀಡಲು ಗ್ಯಾರಂಟರ್ ಆಗಿ ಬರಲು ಸಾಧ್ಯವೇ ಎಂದು ವಿನಂತಿಸಿಕೊಂಡಿದ್ದಾರೆ. ವಿಚಾರಿಸಿದಾಗ, ಅಂದು ಮನೆಗೆ ಬಂದಿದ್ದ ಯುವತಿಯರು ತಮಾಷೆಯಾಗಿ ಹೇಳಿದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಆತನೊಂದಿಗೆ ತೀವ್ರ ಜಗಳ ತೆಗೆದು, ಕೊನೆಗೆ ಆತನ ವಿರುದ್ಧ ಪೊಲೀಸರಿಗೆ ದೂರು (FIR) ನೀಡಿದ್ದರು.

ಬಾಡಿಗೆ ಮನೆಯಲ್ಲಿ ವಾಸ, ಕೈಯಿಂದ ಎಂಐ ಪಾವತಿ

ಅನೇಕ ವರ್ಷಗಳ ಕಾಲ ಕಷ್ಟಪಟ್ಟು ಕಟ್ಟಿದ ಸ್ವಂತ ಮನೆಯಿಂದಲೇ ಆ ವ್ಯಕ್ತಿ ಹೊರಬರಬೇಕಾಯಿತು. ಪ್ರಸ್ತುತ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಯ ಇಎಮ್‌ಐ (EMI) ಹಾಗೂ ಕೋರ್ಟ್ ಕೇಸಿನ ವೆಚ್ಚಗಳನ್ನು ತಾವೇ ಭರಿಸುತ್ತಿದ್ದಾರೆ. “ನಿಮ್ಮ ಶಾಂತಿಯುತ ಮನೆಗೆ ಆಫೀಸ್ ಜನರನ್ನು ಕರೆಯಬೇಡಿ” ಎಂದು ಗೌರವ್ ಜನರಿಗೆ ಎಚ್ಚರಿಕೆಯ ಸಲಹೆ ನೀಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ವೃತ್ತಿಜೀವನ (Professional life) ಮತ್ತು ವೈಯಕ್ತಿಕ ಜೀವನದ (Personal life) ನಡುವೆ ಸೂಕ್ತ ಗಡಿ ಇರಬೇಕು ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!