LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂದೆ-ತಾಯಿಗೆ ಅವರು ಬದುಕಿರುವಾಗಲೇ ನಾವು ಉತ್ತಮ ಮಕ್ಕಳಾಗಬೇಕು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ತಂದೆ-ತಾಯಿಗಳು ಬದುಕಿರುವಾಗಲೇ ಮಕ್ಕಳಾದ ನಾವು ಅವರನ್ನು ಸದಾ ಗೌರವದಿಂದ ಕಾಣಬೇಕು. ತಂದೆ-ತಾಯಿಗೆ ಮಕ್ಕಳು ನೋವು ನೀಡಿ, ಅವರ ಕಣ್ಣೀರಿಗೆ ಕಾರಣರಾದರೆ, ಬದುಕಿನುದ್ದಕ್ಕೂ ಆ ಕೊರಗಿನಲ್ಲಿ ನಾವು ಸಾಯುತ್ತಿರಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ಹೇಳಿದರು.

ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮಾಜಿ ಶಾಸಕ ದಿವಂಗತ ಹೆಚ್.ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ತಂದೆ-ತಾಯಿಗಳು ಬದುಕಿರುವಾಗ ನಾವು ಅವರೊಂದಿಗೇ ಇರಬೇಕು. ಅವರಿಗಿಂತ ಮೊದಲು ನಾನು ಸಾಯಬೇಕು ಎಂದು ಎಷ್ಟೋ ಸಲ ಯೋಚಿಸಿದ್ದೆ. ಅದರ ಅರ್ಥ ಅವರು ಜೀವನ ಪರ್ಯಂತ ನಮ್ಮ ಜೊತೆಗೆ ಇರಲಿ ಎಂದು. ಆದರೆ ವಿಧಿ ಲಿಖಿತವೇ ಬೇರೆಯಾಗಿರುತ್ತದೆ. ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು. ಆದ್ದರಿಂದ ತಂದೆ-ತಾಯಿಗಳು ಬದುಕಿರುವಾಗಲೇ ನಾವು ಅವರಿಗೆ ಉತ್ತಮ ಮಕ್ಕಳಾಗಬೇಕು ಎಂದು  ಹೇಳಿದರು.

ತಮ್ಮ ಹಾಗೂ ಸಹೋದರನ ನಡುವಿನ ಸಂಬಂಧದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿ, ನಾವು ಯಾವುದೇ ತಪ್ಪು ಮಾಡದಿದ್ದರೂ ಕೆಲವೊಮ್ಮೆ ತಪ್ಪು ಮಾಡಿದ್ದೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಾಧ್ಯಮಗಳಲ್ಲಿ ನಾನು ಮತ್ತು ನನ್ನ ಸಹೋದರನ ನಡುವೆ ಜಗಳವಿದೆ ಎಂದು ಬರೆಯಲಾಗುತ್ತದೆ. ಆದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ತಂದೆ ಮತ್ತು ಸಹೋದರನ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ನನಗೆ ಬೇಸರವಿದೆ. ಇದನ್ನು ಹೊರತುಪಡಿಸಿ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರವಿಲ್ಲ ಎಂದರು.

‘ಸತ್ಯ ಹೇಳಿದರೆ ಸಿಟ್ಟು ಬಂದಿದೆ ಎನ್ನುತ್ತಾರೆ

ನಾನು ಸಿಟ್ಟಿನ ವ್ಯಕ್ತಿ ಎಂದು ಕೆಲವರು ಹೇಳುತ್ತಾರೆ. ನಾನು ನೇರ ನೇರವಾಗಿ ಸತ್ಯ ಹೇಳುತ್ತೇನೆ. ಆಗ ನಾನು ಸಿಟ್ಟು ಮಾಡಿಕೊಂಡಿದ್ದೇನೆ ಎಂದೇ ಎಲ್ಲರೂ ಭಾವಿಸುತ್ತಾರೆ. ನನ್ನ ವ್ಯಕ್ತಿತ್ವವೇ ಹಾಗೆ. ಸತ್ಯವನ್ನು ಹೇಳಬೇಕಾದ ಸಂದರ್ಭದಲ್ಲಿ ನೇರವಾಗಿಯೇ ಹೇಳುತ್ತೇನೆ. ಅದು ಕೆಲವರಿಗೆ ಇಷ್ಟವಾಗುವುದಿಲ್ಲ ಎಂದು ಸಚಿವರು ಹೇಳಿದರು.

ಚಂದ್ರಶೇಖರಪ್ಪ ಅವರೊಂದಿಗೆ ಹಳೆಯ ನಂಟು ಸ್ಮರಣೆ

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಸಚಿವರು, 1983ರಲ್ಲಿ ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಕ್ರಾಂತಿ ರಂಗದಲ್ಲಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯ ನೆನಪುಗಳನ್ನು ಹಂಚಿಕೊಂಡರು.
ನಮ್ಮ ತಂದೆಯವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರಕ್ಕೆ ತೆರಳಿ ಭರ್ಜರಿ ಪ್ರಚಾರ ಮಾಡುತ್ತಿರಲಿಲ್ಲ. ಕ್ಷೇತ್ರಕ್ಕೆ ಹೋಗದೆಯೇ ಗೆಲ್ಲುತ್ತಿದ್ದ ನಾಯಕರು. ಆದರೆ ಅಭಿಮಾನಿಗಳು ಮತ್ತು ಕಾರ್ಯಕರ್ತರು, ‘ಮಗನಾಗಿ ನೀವು ಬಂದು ಮತ ಕೇಳಬೇಕು’ ಎಂದು ಒತ್ತಾಯಿಸುತ್ತಿದ್ದರು. ಆಗಲೂ ನಮ್ಮ ತಂದೆಯವರು ನನ್ನನ್ನು ಕಳುಹಿಸುತ್ತಿರಲಿಲ್ಲ. ಆದರೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಮತಯಾಚನೆ ಮಾಡಿದ್ದು ಹೆಚ್.ಎಂ. ಚಂದ್ರಶೇಖರಪ್ಪ ಅವರ ಪರವಾಗಿ. ಅವರು ಗೆದ್ದು ವಿಧಾನಸೌಧಕ್ಕೆ ಬಂದಾಗ, ಅವರ ಪರವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದು ಸಾರ್ಥಕವೆನಿಸಿತ್ತು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು.

‘ಚಂದ್ರಶೇಖರಪ್ಪ ಅವರ ಒಳ್ಳೆಯ ಕೆಲಸಗಳು ಅವರನ್ನು ಜೀವಂತವಾಗಿರಿಸುತ್ತವೆ’

ಹೆಚ್.ಎಂ. ಚಂದ್ರಶೇಖರಪ್ಪ ಅವರು ಉತ್ತಮ ಕಾರ್ಯಗಳ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಂದು ಲಕ್ಷಾಂತರ ಬಂಗಾರಪ್ಪ ಅವರು ಇದ್ದಾರೆ. ಅದೇ ರೀತಿ ಲಕ್ಷಾಂತರ ಚಂದ್ರಶೇಖರಪ್ಪ ಅವರೂ ಇದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಜನರ ಮನಸ್ಸಿನಲ್ಲಿ ಅವರನ್ನು ಸದಾ ಜೀವಂತವಾಗಿರಿಸುತ್ತವೆ ಎಂದು ಸಚಿವರು ಹೇಳಿದರು.

ಚಂದ್ರಶೇಖರಪ್ಪ ಅವರ ಮಕ್ಕಳು ಉತ್ತಮ ಮಕ್ಕಳಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೇಶ್ ಅವರು ಸೇರಿದಂತೆ ಕುಟುಂಬದ ಎಲ್ಲರಿಗೂ ತಾನು ಸಹೋದರನಂತೆ, ಸದಾ ಬೆಂಬಲವಾಗಿ ನಿಲ್ಲುವುದಾಗಿ ಸಚಿವ ಮಧು ಬಂಗಾರಪ್ಪ ಆತ್ಮೀಯವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಿವಮೊಗ್ಗದ ಬಸವ ಕೇಂದ್ರದ  ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಾಸಕರಾದ ಬಿ ಕೆ ಸಂಗಮೇಶ್ವರ, ಎಸ್ ಎನ್ ಚನ್ನಬಸಪ್ಪ, ಡಿ ಎಸ್ ಅರುಣ್, ಮಾಜಿ ಸಂಸದ ಆಯನೂರು ಮಂಜುನಾಥ್ ಹಾಗೂ ಜಿಲ್ ಕಾಂಗ್ರೆಸ್ ಅಧ್ಯಕ್ಷ  ಎಚ್ ಸಿ ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ