ಬೆಂಗಳೂರು : ಸಾಲ ತೀರಿಸುವ ಸಲುವಾಗಿ ತಂದೆಗೆ ವಂಚಿಸಲು ಮುಂದಾಗಿದ್ದ ಮಗ ಕಿಡ್ನ್ಯಾಪ್ ನಾಟಕವಾಡಿ ತಂದೆಯಿಂದ ಹಣ ವಸೂಲಿಗೆ ಯತ್ನಿಸಿದ್ದಾನೆ. ಸದ್ಯ ಮೂವರನ್ನು ಬೆಂಗಳೂರಿನ ಆರ್ ಆರ್ ನಗರ ಠಾಣೆ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಫ್ರೆಂಡ್ಸ್ ಮೂಲಕ ಕರೆ ಮಾಡಿಸಿ 90 ಲಕ್ಷಕ್ಕೆ ಮನೀಶ್ ಬೇಡಿಕೆ ಇಟ್ಟಿದ್ದಾನೆ. ಕರೆ ಮಾಡಿ ಮನುಷ್ ಕಿಡ್ನಾಪ್ ಮಾಡಿದ್ದೇವೆ ಅಂತ ಆತನ ಫ್ರೆಂಡ್ಸ್ ಹೇಳಿದ್ದಾರೆ. ಸೆಪ್ಟೆಂಬರ್ 29ರಂದು ಮನೀಶ್ ತಂದೆ ಮನೋಹರ್ ಪಾಟೀಲ್ ಗೆ ಕರೆ ಮಾಡಿ ತಿಳಿಸಿದ್ದಾರೆ.
ಮನೀಶ್ ಮೊಬೈಲ್ ನಿಂದ ವಾಟ್ಸಾಪ್ ಕರೆ ಮಾಡಿದ್ದ ಗ್ಯಾಂಗ್ ನಿಮ್ಮ ಮಗನ ಕಿಡ್ನಾಪ್ ಮಾಡಿದ್ದೇವೆ ಎಂದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಗದಗಕ್ಕೆ ಹೋಗುತ್ತೇನೆ ಎಂದು ಮನೀಶ್ ಮನೆಯಿಂದ ತೆರಳಿದ್ದ. ಹಣದ ವ್ಯವಹಾರಕ್ಕಾಗಿ ಗದಗಕ್ಕೆ ಹೋಗುವುದಾಗಿ ತೆರಳಿದ ಟ್ರೈನ್ ನಲ್ಲಿ ಹೋಗ್ತೀನಿ ಬೆಳಗ್ಗೆ ಫೋನ್ ಮಾಡ್ತೀನಿ ಅಂತ maneeshb ತೆರಳಿದ್ದಾನೆ. ಆದರೆ ಕಿಡ್ನಾಪ್ ಕರೆಯಿಂದ ಮನೀಶ್ ತಂದೆ ಮನೋಹರ್ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅವರು ಆರ್ ಆರ್ ನಗರ ಪೊಲೀಸ್ ರಿಗೆ ಮಾಹಿತಿ ನೀಡಿದ್ದು ಪೊಲೀಸರು ಮನೀಶ್ ಮೊಬೈಲ್ ಟ್ರ್ಯಾಕ್ ಮಾಡಿದಾಗ ಸ್ವಿಚ್ ಆಫ್ ಅಂತ ಬಂದಿದೆ.
ಬಳಿಕ ಬೇರೊಂದು ನಂಬರ್ ನಿಂದ ಹಣ ಅರೆಂಜ್ ಆಯ್ತಾ ಎಂದು ಕರೆ ಮಾಡಿದ್ದಾರೆ ನಂಬರ್ ಟ್ರಾಕ್ ಮಾಡಿ ಹಾಸನ ಭಾಗದಲ್ಲಿ ಪೊಲೀಸರು ಹುಡುಕಾಡಿದ್ದಾರೆ ಈ ವೇಳೆ ಇಬ್ಬರು ಸ್ನೇಹಿತರ ಜೊತೆಗೆ ಮನೀಶ್ ಆರಾಮಾಗಿ ಮಲಗಿದ್ದಾನೆ. ಮನೀಶ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಕರೆತಂದಿದ್ದಾರೆ ಪೊಲೀಸರ ವಿಚಾರಣೆ ವೇಳೆ ಮನೀಶ್ ಕಿಡ್ನಾಪ್ ನಾಟಕ ಬಯಲಾಗಿದೆ ಎಲೆಕ್ಟ್ರಿಕ್ ಸಂಪರ್ಕಗೆ 1.5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದ ಸಾಲ ತೀರಿಸಲು ಕಿಡ್ನಾಪ್ ನಾಟಕವಾಡಿರೊದಾಗಿ ಮನೀಶ್ ತಪ್ಪು ಒಪ್ಪಿಕೊಂಡಿದ್ದಾನೆ ಸದ್ಯ ಆರ್ ಆರ್ ನಗರ ಪೊಲೀಸ್ರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.