LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನ್ಮದಿನಕ್ಕೆ ರಕ್ತದಾನದ ಕೊಡುಗೆ: ಸಾಗರದಲ್ಲಿ ಸೈಯದ್ ಜಾಕೀರ್ ಕಾರ್ಯಕ್ಕೆ ಸ್ನೇಹಿತರ ಸಾಥ್!

ಶಿವಮೊಗ್ಗ: ಸಾಗರ ನಗರಸಭೆಯ ನಿಕಟಪೂರ್ವ ಸದಸ್ಯ ಹಾಗೂ ಜನಪ್ರಿಯ ಯುವ ಮುಖಂಡ ಸೈಯದ್ ಜಾಕೀರ್ ಅವರ 42ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗ ನಗರದ ಗ್ರೀನ್ ಎಂಬೆಸ್ಸಿ ಸಭಾಂಗಣದಲ್ಲಿ ಸಾಗರ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಅರ್ಥಪೂರ್ಣ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.

ಮೊದಲು ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದ ಜಾಕೀರ್

ಕಾರ್ಯಕ್ರಮದಲ್ಲಿ ಸ್ವತಃ ತಾವೇ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಸೈಯದ್ ಜಾಕೀರ್, ಹುಟ್ಟುಹಬ್ಬದ ಆಚರಣೆ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ಕೆ ನಾಂದಿಯಾಗಬೇಕು ಎಂದರು.

news_1790869945_2_529.webp

ಜನ್ಮದಿನದ ನೆಪದಲ್ಲಿ ಅನಗತ್ಯ ದುಂದುವೆಚ್ಚ ಮಾಡುವ ಬದಲು, ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ರಕ್ತದಾನದಂತಹ ಪವಿತ್ರ ಕಾರ್ಯ ಕೈಗೊಂಡಿರುವುದು ತಮಗೆ ಅತೀವ ತೃಪ್ತಿ ತಂದಿದೆ ಎಂದು ತಿಳಿಸಿದರು. 

ಪ್ರತಿಯೊಬ್ಬ ಆರೋಗ್ಯವಂತ ಯುವಕ-ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಹಾಗೂ ಸಮಾಜದ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

news_1790869945_0_386.webp

ಸ್ನೇಹಿತರು ಹಾಗೂ ಮುಖಂಡರಿಂದ ಮೆಚ್ಚುಗೆಯ ಮಾತುಗಳು

ಶಿಬಿರದಲ್ಲಿ ಪಾಲ್ಗೊಂಡಿದ್ದ ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮಾತನಾಡಿ, ಜಾಕೀರ್ ಅವರು ಸದಾ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವ ಜನಪರ ಕಾಳಜಿಯುಳ್ಳ ಯುವ ಮುಖಂಡರಾಗಿದ್ದು, ತಮ್ಮ ಹುಟ್ಟುಹಬ್ಬವನ್ನು ರಕ್ತದಾನದಂತಹ ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

news_1790869946_6_814.webp

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ರಾಜಕೀಯದ ಜೊತೆಗೆ ಸಮಾಜಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಜಾಕೀರ್ ಅವರ ಸ್ನೇಹಪರ ಮತ್ತು ಸರಳ ವ್ಯಕ್ತಿತ್ವ ಯುವಪೀಳಿಗೆಗೆ ಪ್ರೇರಣೆಯಾಗಿದೆ. ಅವರ ಸಮಾಜಮುಖಿ ಸೇವೆಗಳು ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

news_1790869945_1_177.webp

ಮುಖಂಡ ಕಿರಣ್ ದೊಡ್ಮನೆ ಮಾತನಾಡಿ, ಸೈಯದ್ ಜಾಕೀರ್ ಅವರು ಜಾತಿ-ಮತ ಬೇಧವಿಲ್ಲದೆ ಜನರ ಹಿತಕ್ಕಾಗಿ ಶ್ರಮಿಸುತ್ತಿರುವ ನಾಯಕರಾಗಿದ್ದು, ಇಂತಹ ಅರ್ಥಪೂರ್ಣ ಶಿಬಿರದ ಮೂಲಕ ಹಲವು ಜೀವಗಳನ್ನು ಉಳಿಸುವ ಕೆಲಸಕ್ಕೆ ಅವರ ಅಭಿಮಾನಿಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

news_1790870084_0_947.webp

ರಕ್ತದಾನ ಮಾಡಿದ ಸೈಯದ್ ಜಾಕೀರ್ ಅವರ ಆಪ್ತ ಸ್ನೇಹಿತ ಪುರುಷೋತ್ತಮ್ (ಪುಚ್ಚಿ) ಮಾತನಾಡಿ, "ಜಾಕೀರ್ ಕೇವಲ ಒಬ್ಬ ನಾಯಕನಷ್ಟೇ ಅಲ್ಲ, ನಮ್ಮೆಲ್ಲರ ಹೃದಯ ಗೆದ್ದಿರುವ ನಿಷ್ಠಾವಂತ ಸ್ನೇಹಿತ. ಯಾರೇ ಕಷ್ಟ ಎಂದು ಬಂದರೂ ಜಾತಿ, ಮತ, ಭೇದ ನೋಡದೆ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡುವ ಗುಣ ಅವರದ್ದು. ಸ್ನೇಹಿತರ ಹುಟ್ಟುಹಬ್ಬ ಎಂದರೆ ಸಾಮಾನ್ಯವಾಗಿ ಸಂಭ್ರಮಾಚರಣೆ, ಪಾರ್ಟಿ ಮಾಡುವುದು ವಾಡಿಕೆ. ಆದರೆ ಜಾಕೀರ್ ತಮ್ಮ 42ನೇ ಜನ್ಮದಿನವನ್ನು ಜೀವ ಉಳಿಸುವ ರಕ್ತದಾನ ಶಿಬಿರದ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

news_1790869945_4_888.webp

ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಕಾಂಗ್ರೆಸ್ ಮುಖಂಡೆ ಭವ್ಯ ಕೃಷ್ಣಮೂರ್ತಿ ಅವರು ಮಾತನಾಡಿ, "ಸೈಯದ್ ಜಾಕೀರ್ ಅವರು ಸದಾ ಸಾರ್ವಜನಿಕರ ನೋವು-ನಲಿವುಗಳಿಗೆ ಮಿಡಿಯುವ ಅಪರೂಪದ ಯುವ ನಾಯಕ. ಹುಟ್ಟುಹಬ್ಬವನ್ನು ಕೇವಲ ಆಡಂಬರದಿಂದ ಆಚರಿಸಿಕೊಳ್ಳುವ ಇಂದಿನ ದಿನಗಳಲ್ಲಿ, ರಕ್ತದಾನ ಶಿಬಿರದಂತಹ ಅತ್ಯಂತ ಅಗತ್ಯ ಹಾಗೂ ಪವಿತ್ರ ಕಾರ್ಯಕ್ರಮದ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ. ಒಂದು ಯೂನಿಟ್ ರಕ್ತವು ತುರ್ತು ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಜೀವವನ್ನಷ್ಟೇ ಅಲ್ಲ, ಒಂದು ಇಡೀ ಕುಟುಂಬವನ್ನೇ ಉಳಿಸುತ್ತದೆ ಎಂದು ಕೊಂಡಾಡಿ, ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು..

news_1790869945_3_584.webp

42 ಯೂನಿಟ್ ರಕ್ತ ಸಂಗ್ರಹ

ಜಾಕೀರ್ ಅವರ 42ನೇ ಜನ್ಮದಿನದ ಸವಿನೆನಪಿಗೆ ಸಾಂಕೇತಿಕವಾಗಿ ಒಟ್ಟು 42 ಯೂನಿಟ್ ರಕ್ತ ಸಂಗ್ರಹವಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಹನೀಫ್ ಕುಂಜಾಲಿ, ಮಹಾಬಲ ಕೌತಿ, ಶ್ರೀನಿವಾಸ್, ಆನಂದ ಭೀಮನೇರಿ, ಅನ್ವರ್ ಭಾಷಾ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಿ ಜಾಕೀರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ