LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಕ್ಷಣಗಳೇ ಇಲ್ಲದೆ ಹೃದಯದ ಸ್ನಾಯುಗಳಲ್ಲಿ ಉರಿಯೂತ: ಏಮ್ಸ್ ವಿಜ್ಞಾನಿಗಳಿಂದ ಭರವಸೆಯ ಹೊಸ ತಂತ್ರಜ್ಞಾನ ಪತ್ತೆ !

ಹೃದಯ ಸಂಬಂಧಿ ಕಾಯಿಲೆ ಎಂದರೆ ಕೇವಲ ರಕ್ತನಾಳಗಳ ಬ್ಲಾಕೇಜ್ ಅಥವಾ ಹೃದಯಾಘಾತ (ಹಾರ್ಟ್ ಅಟ್ಯಾಕ್) ಮಾತ್ರವಲ್ಲ. ಹಲವು ಬಾರಿ ಯಾವುದೇ ಬಾಹ್ಯ ರೋಗಲಕ್ಷಣಗಳು ಕಂಡುಬರದೆ ಹೃದಯದ ಸ್ನಾಯುಗಳಲ್ಲಿ ಸದ್ದಿಲ್ಲದೆ ಉರಿಯೂತ ಅಥವಾ ಹಾನಿ ಉಂಟಾಗುವ ಸಾಧ್ಯತೆಯಿರುತ್ತದೆ. ರೋಗಲಕ್ಷಣಗಳು ಗೋಚರಿಸುವಷ್ಟರಲ್ಲಿ ಹೃದಯದ ಕಾರ್ಯಕ್ಷಮತೆ ಕ್ಷೀಣಿಸಿರುತ್ತದೆ. ಇಂತಹ ಗುಪ್ತ ಹೃದಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ದೆಹಲಿಯ ಏಮ್ಸ್ (ಎಐಐಎಮ್‌ಎಸ್) ಸಂಸ್ಥೆಯ ಸಂಶೋಧಕರು ಅತ್ಯಾಧುನಿಕ ಕಾರ್ಡಿಯಾಕ್ ಎಂಆರ್‌ಐ ತಂತ್ರಜ್ಞಾನವನ್ನು ಬಳಸಿ ಹೊಸ ಭರವಸೆ ಮೂಡಿಸಿದ್ದಾರೆ.

ಏಮ್ಸ್ ವೈದ್ಯರ ಜಂಟಿ ಅಧ್ಯಯನ

ದೆಹಲಿಯ ಏಮ್ಸ್ ಸಂಸ್ಥೆಯ ಕಾರ್ಡಿಯೋವಾಸ್ಕ್ಯುಲರ್ ರೇಡಿಯೋಲಜಿ, ಕಾರ್ಡಿಯೋಲಜಿ ಹಾಗೂ ಜೆರಿಯಾಟ್ರಿಕ್ ಮೆಡಿಸಿನ್ ವಿಭಾಗಗಳು ಜಂಟಿಯಾಗಿ ಈ ಸಂಶೋಧನೆ ನಡೆಸಿವೆ. ‘ಕಾರ್ಡಿಯಾಕ್ ಸಾರ್ಕೋಯಿಡೋಸಿಸ್’ ನಂತಹ ಹೃದಯದ ಸ್ನಾಯುಗಳನ್ನು ಕಾಡುವ ಹಾಗೂ ಪಂಪಿಂಗ್ ಕ್ಷಮತೆ ತಗ್ಗಿಸುವ ಕಾಯಿಲೆಯನ್ನು ಸಾಮಾನ್ಯ ಪರೀಕ್ಷೆಗಳು ಪತ್ತೆಹಚ್ಚಲು ವಿಫಲವಾದಾಗ, ಈ ಹೊಸ ಕಾರ್ಡಿಯಾಕ್ ಎಂಆರ್‌ಐ ತಂತ್ರಜ್ಞಾನವು ಅತ್ಯಂತ ನಿಖರವಾಗಿ ಆರಂಭಿಕ ಹಾನಿಯನ್ನು ಗುರುತಿಸಿದೆ. ಈ ಅಧ್ಯಯನದ ವಿವರಗಳು ಪ್ರಸಿದ್ಧ ‘ಇಂಡಿಯನ್ ಜರ್ನಲ್ ಆಫ್ ರೇಡಿಯೋಲಜಿ ಅಂಡ್ ಇಮೇಜಿಂಗ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.

ಅತ್ಯಾಧುನಿಕ ಎಂಆರ್‌ಐ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ?

ಏಮ್ಸ್ ಸಂಸ್ಥೆಯ ರೇಡಿಯೋಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಮರಿಂದರ್ ಸಿಂಗ್ ಮಲ್ಹಿ ಅವರ ಪ್ರಕಾರ, ಟಿ1 ಮ್ಯಾಪಿಂಗ್, ಟಿ2 ಮ್ಯಾಪಿಂಗ್ ಹಾಗೂ ಲೇಟ್ ಗ್ಯಾಡೋಲಿನಿಯಮ್ ಎನ್‌ಹ್ಯಾನ್ಸ್‌ಮೆಂಟ್ (ಎಲ್‌ಜಿಇ) ಎಂಬ ಮೂರು ಸುಧಾರಿತ ತಂತ್ರಜ್ಞಾನಗಳನ್ನು ಎಂಆರ್‌ಐ ಪರೀಕ್ಷೆಯಲ್ಲಿ ಬಳಸಲಾಗುತ್ತದೆ.

ಟಿ1 ಮ್ಯಾಪಿಂಗ್: ಹೃದಯದ ಸ್ನಾಯುಗಳ ಅಂಗಾಂಶಗಳ ಆರೋಗ್ಯವನ್ನು ಅಳೆದು, ಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ.

ಟಿ2 ಮ್ಯಾಪಿಂಗ್: ಅಂಗಾಂಶಗಳಲ್ಲಿನ ನೀರಿನ ಪ್ರಮಾಣ ಹಾಗೂ ಮೊಲೆಕ್ಯುಲರ್ ಬದಲಾವಣೆಗಳನ್ನು ನಿಖರವಾಗಿ ತಿಳಿಸುತ್ತದೆ.

ಎಲ್‌ಜಿಇ ತಂತ್ರಜ್ಞಾನ: ಸ್ನಾಯುಗಳಲ್ಲಿ ಉಂಟಾದ ಗಾಯ, ಕಲೆ ಅಥವಾ ಮೃತಪಟ್ಟ ಅಂಗಾಂಶಗಳನ್ನು ಗುರುತಿಸುತ್ತದೆ.

ಸಾಮಾನ್ಯ ಪರೀಕ್ಷೆಗಳಲ್ಲಿ ವರದಿ ನಾರ್ಮಲ್ ಬಂದಿದ್ದ 7 ರೋಗಿಗಳಲ್ಲಿಯೂ ಈ ಟಿ1 ಮ್ಯಾಪಿಂಗ್ ತಂತ್ರಜ್ಞಾನವು ಸ್ನಾಯುಗಳೊಳಗಿನ ಲೋಪಗಳನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿಯಾಗಿದೆ.

68 ಶೇಕಡಾ ರೋಗಿಗಳಲ್ಲಿ ಸತತ ಹೃದಯ ಬಡಿತದ ದೂರು

ಈ ಅಧ್ಯಯನಕ್ಕೆ ಒಳಪಟ್ಟ ರೋಗಿಗಳ ಸರಾಸರಿ ವಯಸ್ಸು 38 ವರ್ಷವಾಗಿತ್ತು. ಇವರಲ್ಲಿ ಶೇಕಡಾ 68.4 ರಷ್ಟು ರೋಗಿಗಳು ವೇಗವಾದ ಅಥವಾ ಅಸಹಜ ಹೃದಯ ಬಡಿತದ ದೂರು ನೀಡಿದ್ದರೆ, ಶೇಕಡಾ 52.63 ರಷ್ಟು ರೋಗಿಗಳು ಉಸಿರಾಟದ ತೊಂದರೆ ಎದುರಿಸುತ್ತಿದ್ದರು. ಎಂಆರ್‌ಐ ಸ್ಕ್ಯಾನಿಂಗ್ ನಡೆಸಿದಾಗ ಶೇಕಡಾ 63.15 ರಷ್ಟು ರೋಗಿಗಳಲ್ಲಿ ಸ್ನಾಯುಗಳ ಹಾನಿಯ ಲಕ್ಷಣಗಳು ಕಂಡುಬಂದಿವೆ.

ಹೃದಯದ ಸ್ನಾಯುಗಳ ಉರಿಯೂತವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದರಿಂದ ಮುಂಬರುವ ಭಾರಿ ಅಪಾಯವನ್ನು ತಡೆಯಬಹುದು. ಜೊತೆಗೆ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಹೃದಯದ ಪಂಪಿಂಗ್ ಕ್ಷಮತೆ ಕುಸಿಯದಂತೆ ತಡೆಯಲು ಈ ಸಂಶೋಧನೆ ಪ್ರಮುಖ ದಾರಿಯಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!