LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ರೈತರ ಬಗ್ಗೆ ಸರ್ಕಾರಕ್ಕೆ ಇಲ್ಲ: ಬಿ.ವೈ.ವಿಜಯೇಂದ್ರ ಕಿಡಿ

ಬಂಗಾರಪೇಟೆ: ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮತ್ತು ಸರಕಾರಕ್ಕೆ ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ರೈತರ ಬಗ್ಗೆ ಬರುತ್ತಿಲ್ಲ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಇತ್ತೀಚೆಗೆ ನಾವು ಬಳ್ಳಾರಿ ಚಲೋ 10 ದಿನಗಳ ಪಾದಯಾತ್ರೆ ಮಾಡಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವಂತ ಕೆಲಸವನ್ನು ಕೂಡ ಮಾಡಿದ್ದೇವೆ. ನಮ್ಮ ಹೋರಾಟದ ಪರಿಣಾಮ ವಿಶೇಷ ಅಧಿವೇಶನವನ್ನು ಕೂಡ ಕರೆದಿದ್ದರು. ಇಂತಹ ಭೀಕರ ಬರಗಾಲದ ಸಂದರ್ಭದಲ್ಲಿ ಪ್ರತಿ ಹೆಕ್ಟೇರ್ ಗೆ 50,000 ರೂಪಾಯಿ ಪರಿಹಾರವನ್ನ ಕೊಡಬೇಕು, 5 ಲಕ್ಷ ರೂಪಾಯಿ ವರೆಗೆ ಕೃಷಿ ಸಾಲ ಮನ್ನಾ ಮಾಡಬೇಕು, ಮತ್ತೆ ರೈತರಿಗೆ ಮೂರು ಫೇಸ್ ವಿದ್ಯುತ್ ಏಳು ತಾಸುಗಳ ಕಾಲ ಕೊಡಬೇಕು; ಎಂದು ಬಲವಾಗಿ ನಾವು ಪ್ರತಿಪಾದನೆ ಮಾಡಿದ್ದೆವು ಎಂದು ತಿಳಿಸಿದರು.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ, ಅನೇಕ ಸಂದರ್ಭದಲ್ಲಿ ಯಾವ ರೀತಿ ಪರಿಹಾರವನ್ನು ಕೊಟ್ಟರೋ ಅದನ್ನು ಗಮನಿಸಬೇಕು. ಬಡವರು ಮನೆ ಕಳೆದುಕೊಂಡರೆ, ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್. ನಿಯಮ ಪ್ರಕಾರ 1.5 ಲಕ್ಷ ರೂಪಾಯಿ ಕೊಡಬೇಕಾಗಿತ್ತು. ಆದರೆ ಅಂದಿನ ಮುಖ್ಯಮಂತ್ರಿಗಳು ಯಡಿಯೂರಪ್ಪನವರು 5 ಲಕ್ಷ ರೂಪಾಯಿ ಕೊಡುವ ಕ್ರಾಂತಿಕಾರಿ ನಿರ್ಧಾರವನ್ನು ಅಂದಿನ ಬಿಜೆಪಿ ಸರ್ಕಾರದಲ್ಲಿ ಮಾಡಿದ್ದರು ಎಂದು ಗಮನ ಸೆಳೆದರು.

ರೈತಪರ ಯೋಜನೆ ನೀಡಿದ ಬಿಜೆಪಿ, ಯಡಿಯೂರಪ್ಪ

ರೈತರಿಗೆ ಅನುಕೂಲ ಆಗುವಂಥ ಅನೇಕ ಯೋಜನೆಗಳನ್ನು ಕೊಟ್ಟರು. ಆದರೆ ಇವತ್ತು ಇಂತಹ ಬರಗಾಲದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿ, ಪ್ರತಿ ಹೆಕ್ಟೇರ್ ಗೆ 50,000 ರೂಪಾಯಿ ಪರಿಹಾರ ಕೊಡಿ ಅಂತ ಹೇಳಿದೆವು. ಮೊನ್ನೆ ಅಧಿವೇಶನ ಕರೆದು ಭಿಕ್ಷುಕರಿಗೆ ಕೊಟ್ಟಂತೆ 2500 ರೂಪಾಯಿ ಘೋಷಣೆ ಮಾಡಿದ್ದಾರೆ, ಇನ್ನು ಕೂಡ ಅದನ್ನು ಕೊಟ್ಟಿಲ್ಲ. ಕೇವಲ ಘೋಷಣೆಯನ್ನು ಮಾಡಿದ್ದಾರೆ ಎಂದು ಟೀಕಿಸಿದರು.

ನುಣುಚಿಕೊಳ್ಳುವ ಪ್ರಯತ್ನ ಬೇಡ..

ಈ ನಾಡಿಗೆ ಅನ್ನ ಕೊಡುವ ರೈತನ ಬದುಕನ್ನು ಬೀದಿಗೆ ತರುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಹಾಗೂ ಮುಖ್ಯಮಂತ್ರಿಗಳು ಮಾಡ್ತಾ ಇದ್ದಾರೆ. ಹಾಗಾಗಿ ನಾನು ಮಾನ್ಯ ಮುಖ್ಯಮಂತ್ರಿಗಳಲ್ಲಿ ತಮ್ಮ ಮುಖಾಂತರ ಮತ್ತೊಮ್ಮೆ ಆಗ್ರಹಪಡಿಸುತ್ತಿದ್ದೇನೆ, ಡಿ.ಕೆ. ಶಿವಕುಮಾರ್ ಅವರು ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಇವತ್ತು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಸುಮಾರು 26,000 ಕೋಟಿ ರೂಪಾಯಿಗಳಷ್ಟು ಇವತ್ತು ಅಲ್ಲಿ ರೈತರ ಸಾಲವನ್ನ 2 ಲಕ್ಷ ರೂಪಾಯಿ ವರೆಗೆ ಮನ್ನಾ ಮಾಡಿದ್ದಾರೆ, ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾಯದೇ ಇವತ್ತು ಘೋಷಣೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಪಾಕಿಸ್ತಾನ್ ಜಿಂದಾಬಾದ್ ಎಂದವರ ರಕ್ಷಣೆ

ಕಾಂಗ್ರೆಸ್ ಸರ್ಕಾರವು ವಿಧಾನಸೌಧದ ಮೆಟ್ಟಿಲಿನ ಮೇಲೆ ಉರ್ದು ಹಬ್ಬವನ್ನು ಆಚರಣೆ ಮಾಡಲು ಮುಂದಾಗಿದೆ ಎಂದು ಆಕ್ಷೇಪಿಸಿದರು. ನಾನು ಈ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿಗಳಿಗೆ ಕೇಳಲಿಕ್ಕೆ ಇಚ್ಛೆ ಪಡುತ್ತೇನೆ, ಕೇಂದ್ರ ಸರ್ಕಾರ ತ್ರಿಭಾμÁ ಸೂತ್ರವನ್ನು ತಂದಾಗ ಹಿಂದಿಯನ್ನು ಹೇರಿಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದೀರಿ. ಇದೀಗ ಇದೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗಿದರೆ ಅಂತ ದೇಶದ್ರೋಹಿಗಳನ್ನು ರಕ್ಷಣೆ ಮಾಡಿದ್ದೀರಿ ಎಂದು ಖಂಡಿಸಿದರು.

ಅಲ್ಪಸಂಖ್ಯಾತರ ಓಲೈಕೆ..

ಯಾವ ವಿಧಾನಸೌಧದ ಮೆಟ್ಟಿಲಿನ ಮೇಲೆ ಕನ್ನಡ ರಾರಾಜಿಸಬೇಕಾಗಿತ್ತೋ ಅಲ್ಲಿ ಉರ್ದು ಹಬ್ಬವನ್ನು ಆಚರಣೆ ಮಾಡುತ್ತೇವೆ ಅಂತ ಹೇಳಿ ಅಲ್ಪಸಂಖ್ಯಾತರ ಓಲೈಕೆಯನ್ನು ಮಾಡೋದಕ್ಕೆ ಇವತ್ತು ಕಾಂಗ್ರೆಸ್ ಸರ್ಕಾರ ಹೊರಟಿದೆ; ಡಿ.ಕೆ. ಶಿವಕುಮಾರ್ ಹೊರಟಿದ್ದಾರೆ ಎಂದು ಆಕ್ಷೇಪಿಸಿದರು. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಉತ್ತರವನ್ನು ಕೊಡಲಿದ್ದಾರೆ ಎಂದು ನುಡಿದರು.

 ಭಾರತೀಯ ಜನತಾ ಪಾರ್ಟಿ, ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಸಹ 'ಸಬ್ಕಾ ಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್' ದೇಶದಲ್ಲಿ ಇವತ್ತು ಅಭಿವೃದ್ಧಿ ಆಗಬೇಕು ಅಂತ ಹೇಳಿದ್ರೆ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಎಲ್ಲರೂ ಕೂಡ ಒಟ್ಟಿಗೆ ಸೇರಿ ದೇಶವನ್ನು ಮುನ್ನಡೆಸಬೇಕು ಅನ್ನುವ ಭಾವನೆಯಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಗಮನ ಸೆಳೆದರು. 

ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಓಲೈಕೆ ಮಾಡಲು ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಖಂಡಿತ ಇzನ್ನು ರಾಜ್ಯದ ಜನ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇವತ್ತು ಅಲ್ಪಸಂಖ್ಯಾತರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ; ಹಿಂದೂಗಳಿಗೂ ಕೂಡ ಯೋಜನೆಯನ್ನು ಕೊಡಿ, ಅದು ಬಿಟ್ಟು ಈ ರೀತಿ ಒಡೆದಾಳುವ ನೀತಿ ಬೇಡ ಎಂದರು. ಇವತ್ತು ಡಿ.ಕೆ. ಶಿವಕುಮಾರ್ ಅವರು ಅನುಸರಿಸುವ ನೀತಿಗೆ ಖಂಡಿತ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದರು. 

ಈಚೆಗೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಆರ್ಥಿಕ ಇಲಾಖೆಯವರೇ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಯಾವುದೇ ಘೋಷಣೆಗಳನ್ನು ಮಾಡಬೇಡಿ, ಗ್ಯಾರಂಟಿಗಳಿಂದ ಇವತ್ತು ಯಾವುದೇ ಒಂದು ಹೊಸ ಯೋಜನೆಗಳಿಗೆ ನಾವು ಹಣ ಕೊಡುವುದಕ್ಕೆ ಸಾಧ್ಯ ಆಗುವುದಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.

ಆರ್ಥಿಕ ದುಸ್ಥಿತಿಗೆ ತಲುಪಿದ ಸರ್ಕಾರ

ಕೆಎಸ್ಸಾರ್ಟಿಸಿಗೆ ಎಂಟೂವರೆ ಸಾವಿರ ಕೋಟಿ ಬಾಕಿ ಇದೆ ಎಂದು ಸ್ವತಃ ಸಚಿವ ಬೈರತಿ ಸುರೇಶ್ ಅವರು ಹೇಳಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಕೂಡ ಆಗುವುದಿಲ್ಲ, ರಾಜ್ಯದಲ್ಲಿ ಒಂದು ಅಭಿವೃದ್ಧಿ ಕೆಲಸ ಮಾಡೋದಕ್ಕೂ ಸಾಧ್ಯವಾಗುವುದಿಲ್ಲ, ಒಂದು ಗುಂಡಿಗಳನ್ನು ಕೂಡ ಮುಚ್ಚದೆ ಇರತಕ್ಕಂತಹ ಒಂದು ದುಸ್ಥಿತಿಗೆ ಇವತ್ತು ರಾಜ್ಯ ಸರ್ಕಾರದ ರಾಜ್ಯದ ಆರ್ಥಿಕ ಪರಿಸ್ಥಿತಿ ಬಂದಿದೆ ಎಂದು ಆಕ್ಷೇಪಿಸಿದರು.

ಎಸ್ಸಿ, ಎಸ್ಟಿ ಸಮುದಾಯಕ್ಕೆ ದ್ರೋಹ..

ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಸರಕಾರವು ಕಳೆದ ಮೂರು ವರ್ಷದಲ್ಲಿ 55,000 ಕೋಟಿ ರೂಪಾಯಿ ಎಸ್ಸಿಪಿ ಟಿಎಸ್ಪಿ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಕಾಂಗ್ರೆಸ್ ಸರ್ಕಾರ ಶೋಷಿತ- ಪೀಡಿತ ಸಮುದಾಯಗಳಿಗೆ ದ್ರೋಹ ಬಗೆಯುವ ಕೆಲಸ ಮಾಡಿದೆ ಎಂದು ದೂರಿದರು.

ಕುಸಿದು ಬಿದ್ದ ಕಾನೂನು- ಸುವ್ಯವಸ್ಥೆ

ರಾಜ್ಯದಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ. ರಾಯಚೂರಿನ ದೇವದುರ್ಗದಲ್ಲಿ ಮಾದಿಗ ಸಮುದಾಯದ ಒಬ್ಬ ವ್ಯಕ್ತಿಯ ಮೇಲೆ ವ್ಯಕ್ತಿಯ ಕೊಲೆ ಆಗಿದೆ. ಕಲ್ಬುರ್ಗಿ ಸೇಡಂನಲ್ಲೂ ಕೂಡ ದಲಿತ ದಲಿತನ ಬರ್ಬರ ಹತ್ಯೆ ಆಗಿದೆ. ಕಳೆದ ಎರಡು ತಿಂಗಳಲ್ಲಿ ಸುಮಾರು 15 ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ; ದಲಿತರ ಬರ್ಬರ ಹತ್ಯೆ ನಡೆದಿದೆ. ಬಂಗಾರಪೇಟೆ, ಮಾಲೂರಿನಲ್ಲಿ ಇವುಗಳು ಮರುಕಳಿಸಿವೆ.  ಕೆಲವು ಬರ್ಬರ ಹತ್ಯೆಗೆ ಪೆÇಲೀಸರ ಕುಮ್ಮಕ್ಕು ಕೂಡ ಇದೆ ಅಂತ ಹೇಳಿ ಸ್ಥಳೀಯರು ಇವತ್ತು ಮಾತನಾಡುತ್ತಾ ಇದ್ದಾರೆ ಎಂದು ಗಮನ ಸೆಳೆದರು. ಒಟ್ಟಾರೆಯಾಗಿ ನಾನು ಈ ರಾಜ್ಯದ ಗೃಹ ಸಚಿವರು ಪ್ರಿಯಾಂಕ್ ಖರ್ಗೆ ಅವರಿಗೆ ಕೇಳುವುದಕ್ಕೆ ಇಚ್ಛೆ ಪಡುತ್ತೇನೆ, ಇವತ್ತು ದಲಿತರ ಬಗ್ಗೆ ಮೊಸಳೆ ಕಣ್ಣೀರನ್ನು ಸುರಿಸತಕ್ಕಂತಹ ಕಾಂಗ್ರೆಸ್ ಪಾರ್ಟಿ ಇಷ್ಟೊಂದು ದಲಿತರ ಮೇಲೆ ದೌರ್ಜನ್ಯಗಳು ನಡೀತಾ ಇದ್ದರೂ ಕೂಡ ಯಾಕೆ ಮುಖ್ಯಮಂತ್ರಿಗಳು ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ? ಯಾಕೆ ಗೃಹ ಸಚಿವರು ಪ್ರಿಯಾಂಕ್ ಖರ್ಗೆ ಅವರು ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ? ಎಂದು ಪ್ರಶ್ನಿಸಿದರು.

ಎಸ್ಸಿಪಿ ಟಿಎಸ್ಪಿ ಹಣ ಇಷ್ಟೊಂದು 55,000 ಕೋಟಿ ರೂಪಾಯಿಗಳು ಬೇರೆ ಬೇರೆ ಇಲಾಖೆ ವರ್ಗಾವಣೆ ಆದರೂ ಕೂಡ ಪ್ರಿಯಾಂಕ್ ಖರ್ಗೆ ಅವರು ಯಾಕೆ ಮಾತನಾಡುತ್ತಿಲ್ಲ ಎಂದರು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿರತಕ್ಕಂತಹ ಹಣವನ್ನ ಎಸ್ಸಿಪಿ ಟಿಎಸ್ಪಿ ಹಣ ವಾಪಸ್ ಇಲಾಖೆಗಳಿಗೆ ಬರಬೇಕು ಎಂದು ಆಗ್ರಹಿಸಿದರು.

ಅಕ್ರಮ ಸೇರ್ಪಡೆ ಸರಿಯೇ?

ಎಸ್ ಐಆರ್ ಆದಾಗ ಮಸೀದಿಗಳಲ್ಲಿ ಕುಳಿತು ಮುಸಲ್ಮಾನರನ್ನು ಅಕ್ರಮವಾಗಿ ಮತದಾರ ಪಟ್ಟಿಗೆ ಸೇರಿಸಿದ್ದರು. ಇದು ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲೂ ಕೂಡ ಬಂದಿತ್ತು. ಇವತ್ತು ಬೇರೆ ಬೇರೆ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿ ಅಕ್ರಮಗಳು ನಡೆದಿವೆ ಅನ್ನುವ ವಿಚಾರ ನಮಗೆ ತಿಳಿದಿದೆ, ನಮ್ಮ ಕಾರ್ಯಕರ್ತರು ಮತ್ತೆ ಬೇರೆ ಪಕ್ಷದವರು ಅಂತಹ ಅಕ್ರಮವಾಗಿ ಸೇರಿರತಕ್ಕಂತ ಹೆಸರುಗಳನ್ನು ಕೈಬಿಡಬೇಕು ಅಂತ ಹೇಳಿ ಚುನಾವಣಾ ಆಯೋಗಕ್ಕೆ ಮನವಿ ಮಾಡೋದ್ರಲ್ಲಿ ತಪ್ಪೇನಿದೆ? ಎಂದು ಕೇಳಿದರು.

ಬಾಂಗ್ಲಾದೇಶದವರನ್ನು ಮತದಾರರಾಗಿ ಸೇರಿಸಬೇಕಾದರೆ ಅವಾಗ ಎಲ್ಲಿ ಹೋಗಿತ್ತು ಇವರ ಕಾಳಜಿ? ಎಂದರು. ನರೇಂದ್ರ ಮೋದಿಜಿಯವರ ಜನಪ್ರಿಯತೆಯನ್ನು ತಡೆಯೋದಕ್ಕೆ ಇವರಿಗೆ ಸಾಧ್ಯ ಆಗದೇನೆ ಚುನಾವಣೆ ಆಗೋಗದಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಇವತ್ತು ಕೆಪಿಎಸ್ಸಿನ ಮುಚ್ಚುವುದರಿಂದ ಅಕ್ರಮಗಳಿಗೆ ಪರಿಹಾರ ಸಿಗೋದಕ್ಕೆ ಸಾಧ್ಯವಿಲ್ಲ. ಕೆಪಿಎಸ್ಸಿನಲ್ಲಿ ಸುಧಾರಣೆ ತಂದು ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತಂದು ಯಾವ ರೀತಿ ಆ ಯುವಕರಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕೋ ಆ ನಿಟ್ಟಿನಲ್ಲಿ ಸರ್ಕಾರ ಮುಂದೆ ಬರಬೇಕಾಗುತ್ತದೆ ಎಂದು ತಿಳಿಸಿದರು.

ಕಪ್ಪು ಚುಕ್ಕಿ ಇಲ್ಲದ ಪ್ರಧಾನಮಂತ್ರಿ..

ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಕಳೆದ 25 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ತಾನು ಈ ದೇಶದ ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ ಎನ್ನುವ ಭಾವನೆಯಿಂದ ಅನೇಕ ಜಾಗತಿಕ ಸವಾಲುಗಳ ನಡುವೆಯೂ ಕೂಡ ಭಾರತವನ್ನು ಮುನ್ನಡೆಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಸೆಪ್ಟೆಂಬರ್ 17ನೇ ತಾರೀಕು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನ. ಮೋದಿಜಿಯವರು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಗಳಾಗಿ, 2014ರಿಂದ ದೇಶದ ಪ್ರಧಾನಮಂತ್ರಿಗಳಾಗಿ ಇಲ್ಲಿಯವರೆಗೂ ಸಹ 25 ವರ್ಷಗಳ ಒಂದು ಸಾರ್ವಜನಿಕ ಬದುಕಿನಲ್ಲಿ ಜನಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು. 

ನಾನು ಇವತ್ತು ದೇವಸ್ಥಾನಕ್ಕೆ ತೆರಳಿ ಆ ಗಣೇಶನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ವಿಘ್ನವಿನಾಯಕ ಗಣೇಶನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ, ಆ ಭಗವಂತನು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ಇನ್ನು ಹೆಚ್ಚು ಆಯುಸ್ಸು ಮತ್ತು ಶಕ್ತಿಯನ್ನು ಕೊಡಬೇಕು. ಭಾರತ ಒಂದು ವಿಕಸಿತ ಭಾರತ ಆಗಬೇಕು ಅನ್ನುವ ಸಂಕಲ್ಪ ನನಸಾಗಲೆಂದು ಪ್ರಾರ್ಥನೆಯನ್ನು ಕೂಡ ಸಲ್ಲಿಸಿದ್ದೇನೆ ಎಂದು ವಿವರಿಸಿದರು.

ಸೇವಾ ಸಂಕಲ್ಪ ಮತ್ತು ವಿಜಯ ಯಾತ್ರೆ..

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳುಗಳ ಕಾಲ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಜಿ ಅವರ ಅಪೇಕ್ಷೆಯಂತೆ 'ಸೇವಾ ಸಂಕಲ್ಪ' ಅಭಿಯಾನವನ್ನೂ ನಾವು ಹಮ್ಮಿಕೊಂಡಿದ್ದೇವೆ. ಇಡೀ ದೇಶದಲ್ಲೂ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ನಡೆಯುತ್ತಿದೆ ಎಂದು ವಿವರ ನೀಡಿದರು. ಇವತ್ತು ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಇವತ್ತು ಸೇವಾ ಸಂಕಲ್ಪ ಅಭಿಯಾನ ಮಾಡುತ್ತಿದ್ದೇವೆ. ಮುಂದೆ ಬರತಕ್ಕಂತಹ ನಮ್ಮ ಕಾರ್ಯಕರ್ತರ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ; ಆ ನಿಟ್ಟಿನಲ್ಲೂ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕೆಲಸವು ಈ ಯಾತ್ರೆಯ ಮೂಲಕ ಆಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಂಸದ ಎಸ್. ಮುನಿಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಓಂ ಶಕ್ತಿ ಛಲಪತಿ, ಮಾಜಿ ಶಾಸಕ ವೆಂಕಟಮುನಿಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?