LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದ ಶಾಹಿ ಗಾರ್ಮೆಂಟ್ಸ್ ನೌಕರರ ಹೋರಾಟ ಸುಖಾಂತ್ಯ: ಕಾಂಗ್ರೆಸ್ ಮುಖಂಡರ ಸಂಧಾನ, ಶಾಸಕರ ಭರವಸೆ ಬೆನ್ನಲ್ಲೇ ಪ್ರತಿಭಟನೆ ವಾಪಸ್

ಸಾಗರ: ಇಲ್ಲಿನ ಶಾಹಿ ಗಾರ್ಮೆಂಟ್ಸ್ ನೌಕರರು ಪಿಎಫ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯು ಕಾಂಗ್ರೆಸ್ ಮುಖಂಡರ ಸಂಧಾನ ಹಾಗೂ ಶಾಸಕರ ಭರವಸೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಈ ಕುರಿತಂತೆ ನಡೆದ ವಿದ್ಯಮಾನಗಳ ಸಂಪೂರ್ಣ ವಿವರವನ್ನು ಸಾಗರ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುರೇಶ್ ಬಾಬು ಅವರು ಹಂಚಿಕೊಂಡಿದ್ದಾರೆ.

​ಮಾಜಿ ಶಾಸಕ ಹಾಲಪ್ಪ ಸ್ಥಳಕ್ಕೆ ಭೇಟಿ, ಸಂಧಾನ ಪ್ರಯತ್ನ ವಿಫಲ

ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಭೇಟಿ ನೀಡಿ, ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿಸಿ ಧ್ವನಿವರ್ಧಕದಲ್ಲಿ ಭಾಷಣ ಮಾಡಿಸಿದ್ದರು. ಸಂಸದರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಸ್ಥಳದಲ್ಲಿದ್ದ ಎಎಸ್‌ಪಿ ಡಾ.ಬೆನಕ ಪ್ರಸಾದ್ ಅವರೂ ಮನವೊಲಿಸಲು ಯತ್ನಿಸಿದರೂ ನೌಕರರು ಒಪ್ಪಲಿಲ್ಲ. ಪ್ರತಿಭಟನೆ ಕೈಬಿಡದೇ ಮುಂದುವರೆಸಿದರು. ಹೀಗಾಗಿ ಆರಂಭಿಕ ಸಂದಾಯ ವಿಫಲವಾಯಿತು.

​ಸ್ಥಳಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ ಮತ್ತು ಮಧ್ಯಸ್ಥಿಕೆ

ಆ ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು, ಮುಖಂಡರಾದ ಸಂತೋಷ್ ಸದ್ಗುರು, ದಿನೇಶ್, ತಾರಾಮೂರ್ತಿ ಹಾಗೂ ಗಣಪತಿ ಮಂಡಗಳಲೆ ಅವರು ಧ್ವನಿವರ್ಧಕದ ಮೂಲಕ ನೌಕರರೊಂದಿಗೆ ಸಂವಾದ ನಡೆಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಈಗಾಗಲೇ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು.

​ಕಾರ್ಮಿಕರ ಸಮಸ್ಯೆಗಳು ಮತ್ತು ಆಡಳಿತ ಮಂಡಳಿ ಜತೆ ಚರ್ಚೆ

ನಂತರ ಸ್ಥಳಕ್ಕೆ ಬಂದ ಗಾರ್ಮೆಂಟ್ಸ್ ಅಧಿಕಾರಿಗಳಾದ ದಿನೇಶ್ ಹಾಗೂ ಸ್ಥಳೀಯ ಜಿಎಂ ಅವರೊಂದಿಗೆ ಮುಖಂಡರು ಮಾತುಕತೆ ನಡೆಸಿದರು. ಪಿಎಫ್ ಕೇಂದ್ರ ಸರ್ಕಾರದ ನಿಯಮಾವಳಿಗೆ ಒಳಪಟ್ಟಿರುವುದರಿಂದ ಅದನ್ನು ಪರಿಶೀಲಿಸುವುದಾಗಿಯೂ, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿಯೂ ಅಧಿಕಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ, ಕಾರ್ಖಾನೆಯ ಒಳಗಡೆ ನೌಕರರಿಗೆ ಸೂಕ್ತ ಮೂಲ ಸೌಕರ್ಯ ವ್ಯವಸ್ಥೆ, ಹಲವು ಸಮಸ್ಯೆಗಳಿವೆ. ಆ ಬಗ್ಗೆ ನೌಕರರು ಅಲವತ್ತುಕೊಂಡಿದ್ದಾರೆ. ಅಂತಹ ವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸಬೇಕೆಂದು ಮುಖಂಡರು ಆಡಳಿತ ಮಂಡಳಿಗೆ ತಾಕೀತು ಮಾಡಿದರು.

​ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆಗೆ ನಿರ್ಧಾರ

ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತುರ್ತು ಕೆಲಸದ ನಿಮಿತ್ತ ಬೆಂಗಳೂರು ತೆರಳಿದ್ದಾರೆ. ಅವರು ಸಾಗರಕ್ಕೆ ಆಗಮಿಸುತ್ತಿದ್ದಂತೆಯೇ ಉಪವಿಭಾಗಾಧಿಕಾರಿ (ಎಸಿ), ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಗಾರ್ಮೆಂಟ್ಸ್ ಆಡಳಿತ ಮಂಡಳಿ ಜೊತೆ ವಿಶೇಷ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ನೌಕರರಿಂದ ಅಧಿಕೃತ ಮನವಿ ಸ್ವೀಕರಿಸಿ ಅವರ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಲಾಯಿತು.

​ವೇತನ ಸಹಿತ ರಜೆ ಘೋಷಣೆ ಹಾಗೂ ಮುಷ್ಕರ ಅಂತ್ಯ

ಹಿಂದಿನ ದಿನದ ವೇತನ ನೀಡುವುದಾಗಿ ಆಡಳಿತ ಮಂಡಳಿ ಈಗಾಗಲೇ ಒಪ್ಪಿಕೊಂಡಿತ್ತು. ಇಂದಿನ ದಿನವೂ ಅರ್ಧ ದಿನ ಕಳೆದಿದ್ದರಿಂದ ಕಾರ್ಮಿಕರಿಂದ ಕೆಲಸ ಮಾಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಇವತ್ತಿನ ದಿನಕ್ಕೂ ವೇತನ ಸಹಿತ ರಜೆ ನೀಡಬೇಕೆಂದು ಪಟ್ಟುಹಿಡಿಯಲಾಯಿತು. ಇದಕ್ಕೆ ಆಡಳಿತ ಮಂಡಳಿಯು ಸಮ್ಮತಿಸಿತು. ನಾಳೆ ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರುವುದರಿಂದ, ನಾಡಿದ್ದಿನಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದ್ದು, ಈ ಎಲ್ಲಾ ಭರವಸೆಗಳನ್ನು ಈಡೇರಿಸುವ ಭರವಸೆ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಮನೆಗಳಿಗೆ ತೆರಳಿದರು. 

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!