LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಡ್ಯದ ಕಲಬೆರಕೆ ವಿವಾದಕ್ಕೆ ಬಿಗ್ ಟ್ವಿಸ್ಟ್: ಖಾಸಗಿ ಡೈರಿಗಳ ಷಡ್ಯಂತ್ರವೆಂದು ಆರೋಪಿಸಿದ ನಿರ್ದೇಶಕ ಡಾಲು ರವಿ

ಮಂಡ್ಯ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್ಮುಲ್) ಹಾಲು ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಮುಲ್ ನಿರ್ದೇಶಕ ಡಾಲು ರವಿ ಗಂಭೀರ ಹೇಳಿಕೆ ನೀಡಿದ್ದಾರೆ. ಮನ್ಮುಲ್ ಬೆಳವಣಿಗೆಯನ್ನು ಸಹಿಸದ ಖಾಸಗಿ ಡೈರಿ ಸಂಸ್ಥೆಗಳು ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ರೂಪಿಸಿರುವ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

​ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಹಿನ್ನೆಲೆ ಹಾಗೂ ಮನ್ಮುಲ್ ಆಡಳಿತ ಮಂಡಳಿಯ ನಿಲುವನ್ನು ಸ್ಪಷ್ಟಪಡಿಸಿದರು.

​ಖಾಸಗಿ ಡೈರಿಗಳ ವಿರುದ್ಧ ಗಂಭೀರ ಆರೋಪ

​ಮನ್ಮುಲ್ ರಾಜ್ಯದಲ್ಲೇ ಲಾಭದಾಯಕವಾಗಿ ನಡೆಯುತ್ತಿರುವ ರೈತರ ಹೆಮ್ಮೆಯ ಸಂಸ್ಥೆಯಾಗಿದೆ. ಸಂಸ್ಥೆಯ ಮಾರುಕಟ್ಟೆ ಹಾಗೂ ಸೇಲ್ಸ್ ಕುಸಿಯುವಂತೆ ಮಾಡಲು ಖಾಸಗಿ ಹಾಲು ಸಂಸ್ಥೆಯೊಂದು ಈ ಅಪಪ್ರಚಾರದ ಹಿಂದೆ ನಿಂತಿದೆ. ಮಾಧ್ಯಮಗಳಲ್ಲಿ ಇದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿರುವುದರ ಹಿಂದೆ ಶೇಕಡ ನೂರರಷ್ಟು ಖಾಸಗಿ ಡೈರಿಗಳ ಕೈವಾಡವಿದೆ. ಈ ಹಿಂದೆಯೂ ಹಾಲಿಗೆ ನೀರು ಬೆರೆಸಿದ ಪ್ರಕರಣ ನಡೆದಾಗ ಇದೇ ರೀತಿ ಷಡ್ಯಂತ್ರ ನಡೆಸಿ ತಮ್ಮ ಸಂಸ್ಥೆಗಳ ವ್ಯಾಪಾರ ವೃದ್ಧಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

​"ಸಂಸ್ಥೆಯಲ್ಲಿ ಕಲಬೆರಕೆ ಮಾಡುವ ದರ್ದಿಲ್ಲ"

​ಮಂಡ್ಯ ಮನ್ಮುಲ್‌ನಲ್ಲಿ ಪ್ರಾಮಾಣಿಕವಾಗಿ ಯಾವುದೇ ಕಲಬೆರಕೆ ನಡೆದಿಲ್ಲ. ತಪ್ಪು ಕಾರ್ಯಾಚರಣೆ (ಮಿಸ್ ಆಪರೇಷನ್) ನಡೆಸಿ ಕಲಬೆರಕೆ ಮಾಡುವ ಯಾವುದೇ ಅಗತ್ಯ ಅಥವಾ ದುಃಸ್ಥಿತಿ ಮಂಡ್ಯ ಡೈರಿಗೆ ಇಲ್ಲ. ಇಡೀ ಪ್ಲಾಂಟ್ ಮೌಲ್ಯವೇ ನೂರು ಕೋಟಿ ರೂ. ಇಲ್ಲದಿರುವಾಗ, ನೂರು ಕೋಟಿ ರೂ. ಹಗರಣ ಎಂದು ಗಾಳಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

​ತಪ್ಪಿತಸ್ಥರ ವಿರುದ್ಧ ರಾಜಿ ಇಲ್ಲದೆ ಎಫ್‌ಐಆರ್

​ಯಾವುದೇ ಅಕ್ರಮ ಕಂಡುಬಂದರೂ ಮನ್ಮುಲ್ ಆಡಳಿತ ಮಂಡಳಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ. ಈ ಹಿಂದೆಯೂ ದಂಡ ವಿಧಿಸದೆ ನೇರವಾಗಿ ಎಫ್‌ಐಆರ್ ದಾಖಲಿಸಲಾಗಿತ್ತು; ಈಗಲೂ ಆಡಳಿತ ಮಂಡಳಿಯೇ ಖುದ್ದು ಎಫ್‌ಐಆರ್ ದಾಖಲಿಸಿದೆ.

​ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈಗಾಗಲೇ ಜಾಧವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರಾಮಕೃಷ್ಣ ಎಂಬಾತನ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದ ಶ್ರೀನಿವಾಸಮೂರ್ತಿ ಎಂಬ ಅಧಿಕಾರಿಯ ರಾಜೀನಾಮೆಯನ್ನು ಬೋರ್ಡ್ ಅಂಗೀಕರಿಸಿರಲಿಲ್ಲ, ಈಗ ಆತನೂ ಬಂಧನಕ್ಕೊಳಗಾಗಿದ್ದಾನೆ. ಯಾರು ಎಷ್ಟು ಕದ್ದಿದ್ದಾರೋ ಅದು ಸಂಪೂರ್ಣವಾಗಿ ತನಿಖೆಯಿಂದಲೇ ಹೊರಬರಬೇಕು ಎಂದು ಹೇಳಿದರು.

​ವೈರಲ್ ಆಡಿಯೋ ಹಾಗೂ ಮಾಜಿ ಅಧ್ಯಕ್ಷರ ಪ್ರಸ್ತಾಪ

​ಪ್ರಕರಣದಲ್ಲಿ ಮಾಜಿ ಅಧ್ಯಕ್ಷರ ಹೆಸರು ಕೇಳಿಬಂದಿರುವುದು ಬೇಸರ ತಂದಿದೆ ಎಂದ ಡಾಲು ರವಿ, ಅವರ ಗ್ರಾಮದ ಕೆಲ ಯುವ ಟೆಂಡರ್‌ದಾರರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯ ಬಗ್ಗೆ ಪ್ರತಿಕ್ರಿಯಿಸಿ, "ನನ್ನೊಂದಿಗೆ ಮಾತನಾಡಿದ ವ್ಯಕ್ತಿ ಒಬ್ಬರ ಹೆಸರನ್ನಷ್ಟೇ ಹೇಳುತ್ತಾನೆ ಹೊರತು ಪೂರ್ಣ ದಾಖಲೆಗಳನ್ನು ನೀಡಿಲ್ಲ. ಆ ಆಡಿಯೋದಲ್ಲೇ ಬೇರೆ ಯಾವುದೇ ನಿರ್ದೇಶಕರು ಇದರಲ್ಲಿ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ, ನಿರ್ದೇಶಕರಾಗಲಿ ಅಥವಾ ಮಾಜಿ ಅಧ್ಯಕ್ಷರೇ ಆಗಿರಲಿ, ಪೊಲೀಸರು ಕ್ರಮ ಕೈಗೊಳ್ಳಲು ಬೋರ್ಡ್ ಸಂಪೂರ್ಣ ಸಹಕಾರ ನೀಡಲಿದೆ" ಎಂದರು.

​ರೈತರ ಸಂಸ್ಥೆ ರಕ್ಷಣೆಗೆ ಬದ್ಧ

​ರೈತರ ಬೆವರಿನಿಂದ ಕಟ್ಟಿದ ಸಹಕಾರ ಸಂಸ್ಥೆಯನ್ನು ಯಾರೊಬ್ಬರ ಸ್ವಾರ್ಥಕ್ಕಾಗಿ ಹಾಳುಮಾಡಲು ಬಿಡುವುದಿಲ್ಲ. ಸಂಸ್ಥೆಯಿಂದ ಕಳಂಕ ದೂರವಾಗಬೇಕಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಯಾವುದೇ ಅಧಿಕಾರಿ ಇಂತಹ ತಪ್ಪು ಮಾಡಲು ಹೆದರುವಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾಲು ರವಿ ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?