LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪದೇ ಪದೇ ಹೊಟ್ಟೆ ಉಬ್ಬರಿಸುತ್ತಿದೆಯೇ ? ಇದರಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ !

ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ಕೆಲವರಿಗೆ ಹೊಟ್ಟೆ ಉಬ್ಬರಿಸಿದಂತೆ ಅಥವಾ ತೀವ್ರ ಭಾರವೆನಿಸುವ ಅನುಭವವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಇದು ಹಲವರಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ದಿನನಿತ್ಯದ ಆಹಾರ ಪದ್ಧತಿ ಹಾಗೂ ಜೀರ್ಣಕ್ರಿಯೆಯಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಿಂದ ಈ ಸಮಸ್ಯೆ ಉಂಟಾಗುತ್ತದೆ. ಆದರೆ, ಇದು ನಿರಂತರವಾಗಿ ಮರುಕಳಿಸುತ್ತಿದ್ದರೆ ಅದನ್ನು ಕೇವಲ ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುವುದು ಸರಿಯಲ್ಲ.

ಹೊಟ್ಟೆ ಉಬ್ಬರದ ಜೊತೆಗೆ ತೀವ್ರ ಹೊಟ್ಟೆ ನೋವು, ವಾಂತಿ, ತೂಕ ಇಳಿಕೆ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಅಥವಾ ನಿರಂತರ ಮಲಬದ್ಧತೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಕಮ್ಮಿ ತಿಂದರೂ ಹೊಟ್ಟೆ ಉಬ್ಬರಿಸಲು ಪ್ರಮುಖ ಕಾರಣಗಳು ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಜಾಗರೂಕತಾ ಕ್ರಮಗಳ ವಿವರ ಇಲ್ಲಿದೆ.

ಹೊಟ್ಟೆ ಉಬ್ಬರಕ್ಕೆ ಪ್ರಮುಖ ಕಾರಣಗಳು

ಅತಿಯಾದ ವೇಗವಾಗಿ ಆಹಾರ ಸೇವಿಸುವುದು ಹೊಟ್ಟೆ ಉಬ್ಬರಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆತುರದಲ್ಲಿ ಆಹಾರ ತಿನ್ನುವಾಗ ಗಾಳಿಯು ಜಠರ ಸೇರಿ ಅನಿಲ ಸಂಗ್ರಹವಾಗುತ್ತದೆ. ಆದ್ದರಿಂದ ಆಹಾರವನ್ನು ಚೆನ್ನಾಗಿ ಅಗಿದು ನಿಧಾನವಾಗಿ ಸೇವಿಸುವುದು ಒಳಿತು. ಇದರ ಜೊತೆಗೆ ಕಡಲೆ, ಉದ್ದು, ಕೆಲವು ನಿರ್ದಿಷ್ಟ ತರಕಾರಿಗಳು ಹಾಗೂ ಸೋಡಾ ಮಿಶ್ರಿತ ಪಾನೀಯಗಳ ಸೇವನೆಯಿಂದ ಕರುಳಿನಲ್ಲಿ ಗ್ಯಾಸ್ ಉಂಟಾಗಿ ಉಬ್ಬರ ಹೆಚ್ಚಾಗುತ್ತದೆ.

ಮಲಬದ್ಧತೆಯ ಸಮಸ್ಯೆಯಿದ್ದಾಗ ತ್ಯಾಜ್ಯವು ಕರುಳಿನಲ್ಲಿಯೇ ಹೆಚ್ಚಿನ ಸಮಯ ಉಳಿಯುವುದರಿಂದ ಹೊಟ್ಟೆ ಬಿಗಿಯಾದಂತೆ ಹಾಗೂ ಭಾರವೆನಿಸುತ್ತದೆ. ಕೆಲವರಿಗೆ ಹಾಲು ಅಥವಾ ನಿರ್ದಿಷ್ಟ ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಗ್ಯಾಸ್ಟ್ರಿಕ್ ಹಾಗೂ ಅಸಹನೀಯತೆ ಉಂಟಾಗುತ್ತದೆ. ಇನ್ನು ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ನೀರು ಶೇಖರಣೆಯಾಗಿ ಉಬ್ಬರ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಏರುಪೇರು ಕೂಡ ದೇಹದಲ್ಲಿ ನೀರು ಶೇಖರಣೆಯಾಗಿ ಹೊಟ್ಟೆ ಉಬ್ಬರಿಸಲು ಕಾರಣವಾಗುತ್ತದೆ.

ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳು

ಆಹಾರವನ್ನು ನಿಧಾನವಾಗಿ ಹಾಗೂ ಚೆನ್ನಾಗಿ ಅಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಕಾರಿ. ಸೋಡಾ ಮತ್ತು ಶೀತಲ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಬೇಕು. ಆಹಾರದಲ್ಲಿ ನಾರಿನಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಅವಶ್ಯಕ.

ಒಂದೇ ಬಾರಿಗೆ ಅತಿಯಾಗಿ ತಿನ್ನುವ ಬದಲು ನಿಯಮಿತ ಪ್ರಮಾಣದಲ್ಲಿ ಆಹಾರ ಸೇವಿಸುವುದು ಒಳಿತು. ಮಲಬದ್ಧತೆ ಸಮಸ್ಯೆಯನ್ನು ಆರಂಭದಲ್ಲೇ ನಿವಾರಿಸಿಕೊಳ್ಳಬೇಕು. ಯಾವುದಾದರೂ ನಿರ್ದಿಷ್ಟ ಆಹಾರ ತಿಂದ ತಕ್ಷಣ ಉಬ್ಬರ ಉಂಟಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ವೈದ್ಯರನ್ನು ಸಂಪರ್ಕಿಸುವುದು ಯಾವಾಗ ?

ಸಾಮಾನ್ಯವಾಗಿ ಅಪರೂಪಕ್ಕೊಮ್ಮೆ ಹೊಟ್ಟೆ ಉಬ್ಬರ ಉಂಟಾದರೆ ಆತಂಕಪಡುವ ಅಗತ್ಯವಿಲ್ಲ. ಆದರೆ ಈ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೆ ತಪಾಸಣೆ ಅಗತ್ಯ. ತೀವ್ರ ಸ್ವರೂಪದ ಹೊಟ್ಟೆ ನೋವು, ಪದೇ ಪದೇ ವಾಂತಿ, ಮಲದಲ್ಲಿ ರಕ್ತ, ಯಾವುದೇ ಕಾರಣವಿಲ್ಲದೆ ತೂಕ ಇಳಿಕೆ, ನಿರಂತರ ಮಲಬದ್ಧತೆ ಅಥವಾ ಭೇದಿ, ಹಸಿವಿಲ್ಲದಿರುವುದು ಹಾಗೂ ಆಹಾರ ನುಂಗಲು ಕಷ್ಟವಾಗುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!